ಮಂಗಳೂರು : ಮುಸ್ಲಿಂ ವ್ಯಕ್ತಿಯಿಂದ ಸೀತಾ ದೇವಿಯ ಬಗ್ಗೆ ಅವಹೇಳನಕಾರಿ ಕಾಮೆಂಟ್: FIR ದಾಖಲು, ಆರೋಪಿಯ ಬಂಧನ!

Muslim man insulted goddess Sita in Instagram and police arrested accused in Mangalore

ಮಂಗಳೂರು: ಸೀತಾ (Sita) ದೇವಿಯ ಕುರಿತಂತೆ ಅವಹೇಳನಕಾರಿ ಕಾಮೆಂಟ್ ಹಾಕಿದ ಮುಸ್ಲಿಂ ವ್ಯಕ್ತಿಯನ್ನು ಮಂಗಳೂರು ಬಂಧಿಸಿರುವ ಘಟನೆ ವರದಿಯಾಗಿದೆ.

ಸೀತಾದೇವಿಯ ಕುರಿತಂತೆ ಅವಹೇಳನಕಾರಿ ಕಾಮೆಂಟ್ ಹಾಕಿದ ಮುಸ್ಲಿಂ ವ್ಯಕ್ತಿಯನ್ನು ಮಂಗಳೂರು ಬಂಧಿಸಿರುವ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು(Accused) ಮೊಹ್ಮದ್ ಸಲ್ಮಾನ್ (22) ಎನ್ನಲಾಗಿದ್ದು, ಈತ ತನ್ನ ಇನ್ಸ್ಟಾಗ್ರಮ್ (Instagram) ಖಾತೆಯ (D_salman_6) ಮೂಲಕ ಸೀತಾ ದೇವಿಯ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾನೆ. ಈ ಕಾಮೆಂಟ್ ಸ್ಕ್ರೀನ್ಶಾಟ್ ತೆಗೆದು ವ್ಯಕ್ತಿಯೊಬ್ಬ ಮಂಗಳೂರು ಪೊಲೀಸರಿಗೆ (Mangaluru Police) ಟ್ಯಾಗ್ ಮಾಡಿ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದು, ಇದರ ಜೊತೆಗೆ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿರುವ ಕುರಿತಂತೆ ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವಯಂ ಪ್ರೇರಿತವಾಗಿ (Suo Motu) ಪಕ್ರರಣ ದಾಖಲಿಸಿಕೊಂಡು ಪೊಲೀಸರು ಗುರುವಾರ ಆರೋಪಿ ಮೊಹ್ಮದ್ ಸಲ್ಮಾನನ್ನು ಬಂಧಿಸಿದ್ದಾರೆ. ಆ ಬಳಿಕ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಮತ್ತು 153A ,505 (2) ಅಡಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 67(ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವುದು ಇಲ್ಲವೇ ಶೇರ್ ಮಾಡುವ ಶಿಕ್ಷೆ) ಮತ್ತು 153A (ಧರ್ಮ, ಜನಾಂಗ, ಜನ್ಮಸ್ಥಳದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು) 505 (2) (ವರ್ಗಗಳ ನಡುವೆ ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಉದ್ದೇಶ) ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಂಗಳೂರಿನ 7ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಗುರುವಾರ ಹಾಜರುಪಡಿಸಲಾಗಿದೆ ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ

Leave A Reply

Your email address will not be published.