Ration Card Holder:ನಿಮ್ಮಲ್ಲಿ ಸ್ವಂತ ಕಾರು ಇದೆಯೇ? ನಿಮಗೊಂದು ರಾಜ್ಯ ಸರಕಾರದಿಂದ ಮಹತ್ವದ ಘೋಷಣೆ! ಇನ್ನು ಮುಂದೆ ಈ ಸೌಲಭ್ಯ ನಿಮಗಿಲ್ಲ!!!

State government announced important information for bpl card holders

Ration Card: ಪಡಿತರ ಚೀಟಿದಾರರಿಗೆ (Ration Card)ಮಹತ್ವದ ಮಾಹಿತಿ ಇಲ್ಲಿದೆ ನೋಡಿ.ಆಹಾರ ಸಚಿವ K.H ಮುನಿಯಪ್ಪರವರು ಸ್ವಂತ ಕಾರು ಇರುವವರಿಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಸ್ಬಂತ ಕಾರು ಇರುವವರಿಗೆ ‘BPL’ ಕಾರ್ಡ್ ಇಲ್ಲವೆಂದು K.H ಮುನಿಯಪ್ಪರವರು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಆಹಾರ ಸಚಿವರು ಸ್ವಂತ ಕಾರು ಇರುವವರಿಗೆ (Own Car)’BPL’ ಕಾರ್ಡ್ ಇಲ್ಲ, ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ನೀಡದಿರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ವೈಟ್ ಬೋರ್ಡ್(White Board)ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವ ಜೊತೆಗೆ ಯೆಲ್ಲೋ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ಮಂಥನ ನಡೆಯುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.

ಪಡಿತರದಾರರಿಗೆ ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿರುವ ಕುರಿತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ . ಇದರ ಜೊತೆಗೆ ಸಚಿವರು ಆಂಧ್ರ(Andra Pradesh)ಹಾಗೂ ತೆಲಂಗಾಣ(Telangana)ಅಕ್ಕಿ(Rice )ನೀಡಲು ಮುಂದಾಗಿರುವ ಬಗ್ಗೆ ಮಾತಾಡಿದ್ದು, ಒಂದು ವಾರದಲ್ಲಿ ಅಲ್ಲಿನ ಅಧಿಕಾರಿಗಳು ಅಕ್ಕಿ ನೀಡುವ ಬಗ್ಗೆ ನಿರ್ಣಯ ಪ್ರಕಟಿಸಲಿದ್ದಾರೆ.

ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದು, ಕೆಜಿಗೆ 34 ರೂ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಲಾಗಿದ್ದು, ಸದ್ಯ, 5 ಕೆಜಿ ಅಕ್ಕಿ ಬದಲಾಗಿ ಜನರಿಗೆ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಲಾಗಿದೆ.

ಪಡಿತರ ವಿತರಣೆಗೆ ಆದೇಶ:
ನೀತಿ ಸಂಹಿತಿ ಜಾರಿಯಾಗಿದ್ದ ಹಿನ್ನಲೆ ರೇಷನ್ ಕಾರ್ಡ್ ವಿತರಣೆಯನ್ನು ನಿಲ್ಲಿಸಲಾಗಿತ್ತು. ಈಗ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದರ ಜೊತೆಗೆ ಪಡಿತರಕಾರ್ಡ್ ಗೆ ಕೂಡ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯನ್ನು ಸಚಿವರಾದ K.H ಮುನಿಯಪ್ಪರವರು ನೀಡಿದ್ದಾರೆ

Leave A Reply

Your email address will not be published.