ಮದ್ವೆ ಆಗದ ಹುಡುಗ ಹುಡುಗಿ ಲಾಡ್ಜ್’ಗೆ ಹೋಗಿ ಜತೆಗೆ ಸ್ಟೇ ಆಗಬಹುದೇ ? ಬಂದಿದೆ ಹೊಸ ಕಾನೂನು !

Can unmarried couple stay on hotel room what is the legal aspects of this

Hotel Room: ಮದುವೆಗೂ ಮುನ್ನವೇ ಹುಡುಗ ಹುಡುಗಿ ಜೊತೆಗೆ ಅಡ್ಡಾಡಿದರೆ ಸಾಕು, ನೂರೆಂಟು ಪ್ರಶ್ನೆಗಳು ಏಳುತ್ತವೆ. ಲೋಕ ಕೂಡಾ ಹಾಗೆಯೇ ಅನುಮಾನ ಬರುವ ಹಾಗೆಯೇ ಇದೆ, ಅದು ಬೇರೆ ವಿಷ್ಯ. ಇವತ್ತಿನ ನಮ್ಮ ಸುದ್ದಿ ಏನೆಂದರೆ, ಒಂದುವೇಳೆ ಭಾರತದಲ್ಲಿ ಈ ಮದುವೆಯಾಗದ ಗಂಡು ಮತ್ತು ಹೆಣ್ಣು ಏನಾದರೂ ಕಾರಣಕ್ಕೆ ಹೋಟೆಲ್‌ ಗೆ(Hotel )ಅಥವಾ ಲಾಡ್ಜು ಮುಂತಾದುವಕ್ಕೆ ಹೋದರೆ ಆಗ ಅವರು ಒಂದೇ ರೂಮಿನಲ್ಲಿ(Staying In Room)ಸ್ಟೇ ಮಾಡಬಹುದೇ? ಹಾಗೆ ಇಬ್ಬರೇ ಒಂದೇ ರೂಮಿನಲ್ಲಿ ಉಳಿಯುವುದು ಕಾನೂನು ಬದ್ಧವೇ? ಏನನ್ನುತ್ತೆ ನಮ್ಮ ಕಾನೂನು?

ಹೆಣ್ಣು (women)ನಾಲ್ಕು ಗೋಡೆಗಷ್ಟೇ ಸೀಮಿತ ಅನ್ನುವ ಕಾಲವಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಬದಲಾವಣೆ ಹೆಸರಲ್ಲಿ ಆಚರಣೆ, ಮನೆಯ ಕಟ್ಟುಪಾಡುಗಳ ದಾಟಿ ಒಬ್ಬಂಟಿಯಾಗಿ ಜೀವಿಸುವ ಬದುಕು ಕಟ್ಟಿಕೊಂಡ ಅದೆಷ್ಟು ಜೀವಂತ ನಿದರ್ಶನ ನಮ್ಮ ಕಣ್ಣ ಮುಂದೆ ಇವೆ. ಇದರ ನಡುವೆಯೂ ಪ್ರೀತಿ ಪ್ರೇಮ ಎಂದು ಹುಡುಗ ಹುಡುಗಿ ಅಡ್ಡಾಡಿ ಜೊತೆಗೆ ಗುಪ್ತವಾಗಿ ತಂಗುವ ಪರಿಪಾಠ ಕೂಡ ರೂಢಿಯಲ್ಲಿದೆ. ಸಂಪ್ರದಾಯವಾದಿಗಳು ಈ ರೀತಿ ಮದುವೆಗೂ ಮೊದಲೇ ಜೊತೆಗೆ ಹುಡುಗ – ಹುಡುಗಿ ತಂಗುವ ಕ್ರಮಕ್ಕೆ ವಿರೋಧ ಧೋರಣೆ ತೋರುವುದು ತೀರಾ ಸಹಜ. ಈ ರೀತಿ ಯುವಕ ಯುವತಿ ಜೊತೆಯಾಗಿ ರೂಮಿನಲ್ಲಿ ತಂಗಿ ಹೆಚ್ಚು ಕಮ್ಮಿಯಾಗಿ ಆಮೇಲೆ ಯುವಕ ನಾನೊಂದು ತೀರ ನೀನೊಂದು ತೀರ ಎನ್ನುವ ಧೋರಣೆ ತೋರಿದರೆ ಆಕೆಯ ಪಾಡು ಕೇಳುವುದು ಬೇಡ. ಹೀಗಿದ್ದರೂ ಕೂಡ ಯುವಜನತೆಯ ಪಾಲಿಗೆ ಈಗ ಇದೊಂದು ಫ್ಯಾಶನ್ !! ಅದೇನೇ ಇರಲಿ ಇದಕ್ಕೆ ಕಾನೂನಿನ ಮಾನ್ಯತೆ ಇದೆಯಾ ಇಲ್ಲವೇ ಎನ್ನುವುದು ಕೂಡಾ ಮುಖ್ಯವಾಗುತ್ತದೆ.

ಎಲ್ಲಾ ಭಾರತೀಯ ಅವಿವಾಹಿತರು ತಿಳಿದಿರಬೇಕಾದ ಮುಖ್ಯ ವಿಚಾರ:
ಅನಾದಿ ಕಾಲದಿಂದಲೂ, ಭಾರತದಲ್ಲಿ( India)ಯುವ ಜೋಡಿಗಳು (Youth Couples)ಸಾರ್ವಜನಿಕ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರೆ ಅದರಲ್ಲಿಯೂ ಮದುವೆಯಾಗಿಲ್ಲ (Unmarried)ಎಂದಾದರೆ ಅನೇಕ ಮಾತುಗಳನ್ನು ಕೇಳಬೇಕಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಒಟ್ಟಿಗೆ ಸಮಯ ಕಳೆಯಲು ಆಗುತ್ತಿಲ್ಲ ಎಂದಾಗ ಜೋಡಿಗಳು ಅಂದರೆ ಯುವಕ – ಯುವತಿ ಒಟ್ಟಿಗೆ ಕಾಲ ಕಳೆಯಲು ಬಯಸುವುದು ಸಹಜ. ಆದರೆ, ಹೀಗೆ ಹೋಟೆಲ್ ಗಳಲ್ಲಿ ತಂಗುವ ಸಂದರ್ಭ ಈ ಕೆಲ ವಿಚಾರಗಳು ನಿಮಗೆ ತಿಳಿದಿರಬೇಕು.

1) ಭಾರತದಲ್ಲಿ ಅವಿವಾಹಿತ ದಂಪತಿಗಳಿಗಾಗಿ (Un Married Couples)ಕೆಲವು ಹೋಟೆಲ್ ಗಳು ಕೊಠಡಿಗಳನ್ನು ಬಾಡಿಗೆಗೆ ನೀಡಲು ಅನುಮತಿ ನೀಡುವುದಿಲ್ಲ.
2) ಅವಿವಾಹಿತ ದಂಪತಿಗಳು ಹೋಟೆಲ್ ಕೊಠಡಿಯನ್ನು ಕಾಯ್ದಿರಿಸುವಂತಿಲ್ಲ ಎಂದು ಹೇಳುವ ಯಾವುದೇ ಕಾನೂನು ಇಲ್ಲ.
3) ಈ ಸಂದರ್ಭದಲ್ಲಿ ಸುರಕ್ಷಿತ ಮಾರ್ಗವೆಂದರೆ ವಿವಿಧ ಪೋರ್ಟಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹೋಟೆಲ್ ಬುಕಿಂಗ್ ಮಾಡುವುದು. ನೀವು ಆನ್‌ಲೈನ್‌ನಲ್ಲಿ ಹೋಟೆಲ್ ಕೊಠಡಿಯನ್ನು ಬುಕ್ ಮಾಡುವಾಗ ಇಬ್ಬರಿಗೆ ನಿಮ್ಮ ಹೆಸರಿನ ಮೇಲೆ ಕೊಠಡಿಯನ್ನು ಮೊದಲೇ ಬುಕ್ ಮಾಡಲು ಸಹ ನೀವು ಆಯ್ಕೆ ನೀಡಲಾಗುತ್ತದೆ.
4) ಆದರೆ, ಯಾವುದೇ ಹೋಟೆಲ್ಗಳಲ್ಲಿ ತಂಗುವಾಗ, ಪ್ರವೇಶ ಪಡೆಯುವಾಗ ಅಲ್ಲಿನ ರೂಲ್ಸ್ ಗಳನ್ನು ಎಚ್ಚರಿಕೆಯಿಂದ ಓದಿ ಪಾಲಿಸಬೇಕಾಗುತ್ತದೆ.
5) ತಂಗುವ ಸಂದರ್ಭ ನಿಮ್ಮ ಗುರುತಿನ ಪುರಾವೆಗಳನ್ನು ನೀವು ನಿಮ್ಮೊಂದಿಗೆ ಕೊಂಡೊಯ್ಯಬೇಕು. ಚೆಕ್-ಇನ್ ಸಮಯದಲ್ಲಿ ನೀವು ಮಾನ್ಯವಾದ ಸರ್ಕಾರಿ ಐಡಿ ಪುರಾವೆಯನ್ನು ನೀಡಬೇಕಾಗುತ್ತೆ. ಊಟದ ಐಡಿ ಆಧಾರ್ ಕಾರ್ಡ್ ಮತ್ತು ಅಡ್ರೆಸ್ ಇರುವ ಪಾಸ್ಪೋರ್ಟ್ ಗಳು ಮಾತ್ರ ಮಾನ್ಯತೆ ಪಡೆದುಕೊಳ್ಳುತ್ತವೆ.
6) ಪಾನ್ ಕಾರ್ಡ್ ಅನ್ನು ಸ್ವೀಕರಿಸಲಾಗುವುದಿಲ್ಲ.
ಹೋಟೆಲ್ ಅಧಿಕಾರಿಗಳು ID ಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಇಟ್ಟುಕೊಂಡು ನಿಮಗೆ ಮೂಲ ದಾಖಲೆಗಳನ್ನು ಹಿಂತಿರುಗಿಸುತ್ತಾರೆ.
7) ಹೋಟೆಲ್ಗಳಲ್ಲಿ ತಂಗುವ ಎರಡು ವ್ಯಕ್ತಿಗಳ ಅಡ್ರೆಸ್ ಪ್ರೂಫ್ ಐಡಿ(Address Proof ID)ಕಡ್ಡಾಯ. ಪಾನ್ ಕಾರ್ಡ್(Pan Card)ಅಥವಾ ಸರ್ಕಾರಿ ತರ ಸಂಸ್ಥೆಗಳು ನೀಡಿರುವ ಐಡಿ ನಡೆಯುವುದಿಲ್ಲ. ಇದೀಗ ಹಲವು ಕ್ರೈಂ ಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಾಡ್ಜು ಮತ್ತು ಹೋಟೆಲ್ ಗಳ ಆಡಳಿತ ಮಂಡಳಿ ದಿನದಿಂದ ದಿನಕ್ಕೆ ಕಠಿಣ ನಿಯಮಗಳನ್ನು ಪಾಲಿಸುತ್ತಿವೆ.

8) ಅವಿವಾಹಿತ ದಂಪತಿಗಳು ಹೋಟೆಲ್ ಕೊಠಡಿಯನ್ನು ಕಾಯ್ದಿರಿಸುವಂತಿಲ್ಲ ಎಂದು ಹೇಳುವ ಯಾವುದೇ ಕಾನೂನು ಇಲ್ಲದಿದ್ದರೂ ಕೆಲವು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಹೋಟೆಲ್ ಆಡಳಿತ ಮಂಡಳಿ ಜೋಡಿಗಳಿಗೆ ಪ್ರವೇಶ ನಿರಾಕರಿಸಬಹುದು. ಉದಾಹರಣೆಗೆ ಕೋಮು ಸಾಕ್ಷರ ಪ್ರದೇಶಗಳಲ್ಲಿ ಮತೀಯ ಜೋಡಿಗಳ ಪ್ರವೇಶ ನಿರಾಕರಿಸಬಹುದು.
9) ನೀವು ಮತ್ತು ನಿಮ್ಮ ಸಂಗಾತಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು ಭಾರತದಲ್ಲಿ ಕೊಠಡಿಯನ್ನು ಕಾಯ್ದಿರಿಸಲು ಸಾಧ್ಯವಿಲ್ಲ ಎಂಬುದನ್ನು ನೀವು ಗಮನಿಸಬೇಕು.
10) ಅವಿವಾಹಿತ ದಂಪತಿಗಳು ಭಾರತದಾದ್ಯಂತ ಯಾವುದೇ ಹೋಟೆಲ್‌ನಲ್ಲಿ ತಂಗುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಆದಾಗ್ಯೂ, ಹೋಟೆಲ್‌ನಲ್ಲಿ ಅವನು/ಅವಳ ತಂಗುವ ಸಮಯದಲ್ಲಿ ಯಾವುದೇ ಕಾನೂನುಬಾಹಿರ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರಿ. ಈ ಸಂದರ್ಭದಲ್ಲಿ ಹೋಟೆಲ್ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಬಹುದು.

11) ಮದುವೆಯಾಗದ ದಂಪತಿಗಳು ವಯಸ್ಸಿನ ಮಾಹಿತಿ ಮತ್ತು ಸೂಕ್ತವಾದ ಗುರುತನ್ನು ಹೊಂದಿರುವವರೆಗೆ ಹೋಟೆಲ್ ಕೋಣೆಯನ್ನು ಹಂಚಿಕೊಳ್ಳುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಆದಾಗ್ಯೂ, ಪರಿಸ್ಥಿತಿಯ ಕಾನೂನುಬದ್ಧತೆಯ ಹೊರತಾಗಿಯೂ, ದೇಶದ ಕೆಲವು ಹೋಟೆಲ್‌ಗಳು ಇನ್ನೂ ಅಂತಹ ದಂಪತಿಗಳಿಗೆ ವಸತಿ ನೀಡಲು ನಿರಾಕರಿಸುತ್ತದೆ.
ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ, ಅವಿವಾಹಿತ ಜೋಡಿಗಳು ಹೋಟೆಲ್ ಕೊಠಡಿಯನ್ನು ಕಾಯ್ದಿರಿಸುವುದು ಕಾನೂನುಬಾಹಿರ ಎಂದು ಭಾರತದ ಸಂವಿಧಾನ ಎಲ್ಲಿಯೂ ಕೂಡ ಹೇಳಿಲ್ಲ. ಅದೇ ರೀತಿ, ಅವಿವಾಹಿತ ದಂಪತಿಗಳು ಹೋಟೆಲ್ನಲ್ಲಿ ಒಟ್ಟಿಗೆ ಇರುವಂತಿಲ್ಲ ಎಂಬುದನ್ನು ಯಾವುದೇ ಕಾನೂನು/ ನ್ಯಾಯಾಲಯ ಕೂಡ ಹೇಳಿಲ್ಲ.

ಖಾಸಗಿ ಸ್ಥಳಗಳಲ್ಲಿ, ಸಮ್ಮತಿಯ ಲೈಂಗಿಕತೆ ಕೂಡಾ ಭಾರತದ ಸಂವಿಧಾನದಲ್ಲಿ ನಿಷಿದ್ಧವಲ್ಲ. ಖಾಸಗಿ ನೆಲೆಯಲ್ಲಿ ಸಮ್ಮತಿಯ ಲೈಂಗಿಕತೆಯಲ್ಲಿ ತೊಡಗುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸಂವಿಧಾನದಲ್ಲಿ ಪರಿಗಣಿಸಲಾಗಿದೆ. ಸಂವಿಧಾನದ 21 ನೇ ವಿಧಿಯು ಖಾಸಗಿತನದ ಹಕ್ಕನ್ನು ಖಾತರಿಪಡಿಸುತ್ತದೆ. ಅವಿವಾಹಿತ ಜೋಡಿಗಳು ಸೇರಿದಂತೆ ವಯಸ್ಕ ಜೋಡಿಗಳು ಕೂಡಾ ಖಾಸಗಿ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಈ ನಿಲುವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

ವಯಸ್ಕರ ಲೈವ್-ಇನ್ ರಿಲೇಶನ್ ಶಿಪ್ ಗೆ ಕೂಡಾ ಅನುಮತಿ ನೀಡುತ್ತದೆ ನಮ್ಮ ದೇಶದ ಕಾನೂನು ಎಂಬುದು ಬಹುತೇಕ ಮಂದಿಗೆ ತಿಳಿದಿಲ್ಲ. ಇದರ ಜೊತೆಗೆ ಅವಿವಾಹಿತ ಇಬ್ಬರು ವಯಸ್ಕರ ಸಮ್ಮತಿ ಇರುವ ಲೈಂಗಿಕ ಕ್ರಿಯೆ ಕಾನೂನುಬಾಹಿರ ಅಥವಾ ಅಸಂವಿಧಾನಿಕವಲ್ಲ ಎಂದು ಸುಪ್ರೀಂ ಕೋರ್ಟ್ ಕೂಡಾ ದೃಢಪಡಿಸಿದೆ. ಭಾರತದಲ್ಲಿ ಕಾನೂನು ಬೇರೆ ನೈತಿಕತೆ ಬೇರೆ. ಹಾಗಾಗಿ ಕಾನೂನಿನ ಪ್ರಕಾರ 18 ವರ್ಷ ವಯಸ್ಸಿಗಿಂತ ಅಧಿಕ ಪ್ರಾಯದ ಜೋಡಿಗಳು ಜೊತೆಯಾಗಿ ಲಾಡ್ಜ್ ಗೆ ಅಥವಾ ಹೋಟೆಲಿಗೆ ಹೋಗಿ ತಂಗಬಹುದು ಮತ್ತು ಇಷ್ಟ ಇದ್ದರೆ ಸೆಕ್ಸ್ ಸಂಭ್ರಮಿಸಬಹುದು. ಇದಕ್ಕೆ ಕಾನೂನು ಅಡ್ಡಿಪಡಿಸುವುದಿಲ್ಲ.

Leave A Reply

Your email address will not be published.