Chitradurga: ಕಳಪೆ ಊಟ ಕೊಟ್ರೆ ಹಾಸ್ಟೆಲ್ ವಾರ್ಡನ್ ಹಿಡ್ಕೊಂಡ್ ಹೊಡೀರಿ – ಚಿತ್ರದುರ್ಗ ಶಾಸಕರ ಹೇಳಿಕೆ ವೈರಲ್

Latest Karnataka district news provocative statement by Chitradurga MLA KC Veerendra Puppy

Chitradurga: ಸಾಮಾನ್ಯವಾಗಿ ಯಾವುದೇ ಗಲಾಟೆ ನಡೆದ ಸಂದರ್ಭದಲ್ಲಿ ಗಲಾಟೆಯನ್ನು ಬಗೆಹರಿಸಿ ಶಾಂತ ರೀತಿಯಲ್ಲಿ ಯಾವುದೇ ಕೋಮು ಗಲಭೆ ನಡೆಯದಂತೆ ತಡೆಯಲು ಮುಂದಾಗುವುದು ಸಹಜ.ಆದರೆ, ಇಲ್ಲೊಬ್ಬರು ಸಚಿವರು ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರದುರ್ಗ ಕಾನೂನು ಪದವಿಯ ವಿದ್ಯಾರ್ಥಿಗಳು(Students )ಹಾಸ್ಟೆಲ್‍ನಲ್ಲಿ ಸರಿಯಾದ ಊಟದ ವ್ಯವಸ್ಥೆಯಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗೆ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ(Hostel Students Protest)ನಡೆಸುತ್ತಿದ್ದ ಸಂದರ್ಭ ಭೇಟಿ ನೀಡಿದ್ದ ಶಾಸಕರೊಬ್ಬರು ವಾರ್ಡ್‍ನ್‍ಗೆ ಹೊಡೆಯಿರಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋ (Video) ವೈರಲ್ ( Viral) ಆಗಿ ಭಾರಿ ಚರ್ಚೆಗೆ ಕಾರಣವಾಗಿದೆ.

ಚಿತ್ರದುರ್ಗ ಕಾನೂನು ಪದವಿಯ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಸರಿಯಾದ ಊಟದ ವ್ಯವಸ್ಥೆಯಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಘಟನಾ ಸ್ಥಳಕ್ಕೆ ಕಾಂಗ್ರೆಸ್ (Congress) ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ (Veerendra Puppy) ಹಾಸ್ಟೆಲ್‍ಗೆ ಭೇಟಿ ನೀಡಿದ್ದು, ಈ ವೇಳೆ ವಿದ್ಯಾರ್ಥಿಗಳು ಕೊಳೆತ ತರಕಾರಿ ಹಾಕಿದ ಉಪಾಹಾರ, ಊಟ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ವಿದ್ಯಾರ್ಥಿಗಳ ಸಮಸ್ಯೆ ಕೇಳಿದ ಚಿತ್ರದುರ್ಗ (Chitradurga) ಶಾಸಕರು, ಇನ್ನೊಮ್ಮೆ ಈ ರೀತಿ ಕಳಪೆ ಊಟ, ಉಪಾಹಾರ ನೀಡಿದರೆ ಅದನ್ನು ವಾರ್ಡನ್‍ಗೆ ತಿನ್ನಿಸಲು ಸೂಚಿಸಿದ್ದಾರೆ. ಅಷ್ಟೆ ಅಲ್ಲದೇ, ಆ ಬಳಿಕ ರೂಮಲ್ಲಿ ಹಾಕಿ ಚೆನ್ನಾಗಿ ಹೊಡೆಯಿರಿ. ಇದರ ಜೊತೆಗೆ ನಿಮಗೆ ಏನಾದರೂ ಸಮಸ್ಯೆಯಾದರೆ ನಾನಿರುತ್ತೇನೆ ಯೋಚಿಸಬೇಡಿ ಎಂದಿದ್ದಾರೆ. ಈ ರೀತಿಯಾಗಿ ಶಾಸಕರು ಹೇಳಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದ್ದು, ಸಾರ್ವಜಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ

ಇದನ್ನೂ ಓದಿ: Haveri:ವೈಫ್ ಗೆ ಟಿಕೆಟ್ ಇಲ್ಲ, ಕೈಲಿ ಮಡಚಿಟ್ಟುಕೊಂಡಿದ್ದ ಸೈಕಲ್ ಟೈರ್’ಗೆ ಭರ್ತಿ ಟಿಕೆಟ್ ಹರಿದ ಕಂಡಕ್ಟರ್ !

Leave A Reply

Your email address will not be published.