ISRO:ಚಂದ್ರನ ಸನಿಹಕ್ಕೆ ಧಾವಿಸುತ್ತಿದೆ ಇಸ್ರೋ, ಬರೋಬ್ಬರಿ 2.6 ಲಕ್ಷ ಕಿ.ಮೀ ನಾಗಾಲೋಟ, ಇವತ್ತೇ ನಿರ್ಣಾಯಕ !

Latest national news Chandrayaan 3 moon lander travels two third of the distance

ನವದೆಹಲಿ: ಭಾರತದ (India) ಹೆಮ್ಮೆಯ ಇಸ್ರೋ (ISRO)ಚಂದ್ರಯಾನಕ್ಕೆ 2ರ (Chandrayaan-2) ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಂಡು ಚಂದ್ರಯಾನ 3 (Chandrayaan-3) ಉಡ್ಡಯನವನ್ನು ಪ್ರಯಾಣದ ಮೂರನೇ ಎರಡರಷ್ಟು ಯಶಸ್ವಿಯಾಗಿ ಪೂರೈಸಿದೆ.

Chandrayaan-3

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಈಗಾಗಲೇ ತನ್ನ ನಿಗದಿತ ಪ್ರಯಾಣದಲ್ಲಿ ಮೂರನೇ ಎರಡಷ್ಟು ಹಾದಿ ಕ್ರಮಿಸಿದ್ದು,(Chandrayaan-3 now closest to the Moon) ಶನಿವಾರ ಸಂಜೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಶುಕ್ರವಾರ ನೌಕೆಯು ಭೂಮಿಯಿಂದ ಸರಿಸುಮಾರು 2.6 ಲಕ್ಷ ಕಿಲೋಮೀಟರ್‌ ಸಂಚಾರವನ್ನು ದೂರವನ್ನು ಕ್ರಮಿಸಿದ್ದು, ಉಡ್ಡಯನವನ್ನು ಪ್ರಯಾಣದ ಮೂರನೇ ಎರಡರಷ್ಟು ಯಶಸ್ವಿಯಾಗಿ ಪೂರೈಸಿರುವುದಾಗಿ ಘೋಷಿಸಿದೆ.

ಜುಲೈ.14ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಅದರಲ್ಲಿ ಚಂದ್ರನ ಅಧ್ಯಯನ ನಡೆಸಲು ಬೇಕಾದ ವಿವಿಧ ಉಪಕರಣಗಳನ್ನು ಕಳುಹಿಸಲಾಗಿದೆ. ಚಂದ್ರಯಾನ 3 ಎಂಬುದು ಕೇವಲ ಇಸ್ರೋ ಕನಸಲ್ಲ. ನಾಸಾ (NASA)ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಚಂದ್ರಯಾನ 3 ಯಶಸ್ಸಿಗೆ ಎದುರು ನೋಡುತ್ತಿದ್ದಾರೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರಕ್ಕೆ ಈಗಾಗಲೇ ನೂರಾರು ವಿದೇಶಿ ವಿಜ್ಞಾನಿಗಳು(Scientists)ಈ ಕುರಿತು ಚಿಂತನ – ಮಂಥನ ನಡೆಸುತ್ತಿದ್ದಾರೆ.

ಜುಲೈ 14ರಂದು ಶ್ರೀಹರಿಕೋಟಾದಿಂದ ನಭಕ್ಕೆ ನೆಗೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ‘ಲೂನಾರ್‌ ಆರ್ಬಿಟ್‌ ಇಂಜೆಕ್ಷನ್‌ (ಎಲ್‌ಒಐ)’ ಪ್ರಕ್ರಿಯೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(Indian Space Reserch Organisation) ಆಗಸ್ಟ್.5ರ ಸಂಜೆ 7 ಗಂಟೆಯ ಮುಹೂರ್ತ ನಿಗದಿ ಮಾಡಿದ್ದು, ಈ ನಿರ್ಣಾಯಕ ಹಂತವು ಯಶಸ್ವಿ ಆದಲ್ಲಿ ನಿರೀಕ್ಷಿತ ಸಮಯಕ್ಕೆ ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಲಿದೆ.

LOI ಪ್ರಕ್ರೀಯೆ ಒಂದು ನಿರ್ಣಾಯಕ ಮನ್ಯೂವರ್ ಆಗಿದ್ದು ಚಂದ್ರನ ಕಕ್ಷೆಯನ್ನು ಸೇರಿಸಲು ಬಾಹ್ಯಾಕಾಶ ನೌಕೆಯ ಟ್ರಜೆಕ್ಟರಿ ಯನ್ನು ಹೊಂದಿಸಲಾಗುತ್ತದೆ. ಇದು ಬಾಹ್ಯಾಕಾಶ ನೌಕೆಯ ವೇಗವನ್ನು ಹೆಚ್ಚಿಸುತ್ತದೆ. LOI ಮನ್ಯೂವರ್ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಚಂದ್ರಯಾನ್-3ಅನ್ನು ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಸೇರಿಸಲಾಗುತ್ತದೆ. ಬಾಹ್ಯಾಕಾಶ ನೌಕೆ ಆ ಬಳಿಕ ಚಂದ್ರನ ಮೇಲ್ಮೈಯನ್ನು ತಲುಪಲು ಸಂಕೀರ್ಣ ಮನ್ಯೂವರ್ ಸರಣಿಯನ್ನು ಆರಂಭಿಸುತ್ತದೆ. ಇವುಗಳಲ್ಲಿ ಲ್ಯಾಂಡರ್ನ ಬೇರ್ಪಡಿಕೆ, ಡಿಬೂಸ್ಟ್ ಮನ್ಯೂವರ್ ನಡೆದು ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಆಗುವ ಹಂತಗಳು ಕೂಡ ಸೇರಿಕೊಂಡಿವೆ.

‘ಚಂದ್ರನ ಕಕ್ಷೆಗೆ ಅತ್ಯಂತ ಸಮೀಪದಲ್ಲಿರುವ ನೌಕೆಯಿರುವ ಗಳಿಗೆಯನ್ನು ನೋಡಿಕೊಂಡು ಲೂನಾರ್‌ ಆರ್ಬಿಟ್‌ ಇಂಜೆಕ್ಷನ್‌ (ಚಂದ್ರನ ಕಕ್ಷೆ ಸೇರುವ ಪ್ರಕ್ರಿಯೆ) ಕೈಗೊಳ್ಳಲಾಗುತ್ತದೆ’ ಎಂದು ಇಸ್ರೋ ಮಾಹಿತಿ ನೀಡಿದೆ.ಆ ನಂತರ ಆಗಸ್ಟ್ 23ರಂದು ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಲು ಯೋಜನೆ ಹಾಕಲಾಗಿದೆ. ಚಂದ್ರನ ನೆಲದ ಮೇಲೆ ಲ್ಯಾಂಡರ್‌ ಇಳಿದ ಮೇಲೆ ಅದರಿಂದ ಹೊರಬರುವ ರೋವರ್‌ ಉಪಕರಣವು ಚಂದ್ರನ ಮೇಲೆ ಅಧ್ಯಯನ ಮಾಡಲಿದೆ. 615 ಕೋಟಿ ರೂಪಾಯಿ ವೆಚ್ಚದಲ್ಲಿ ಇಸ್ರೋ ಚಂದ್ರಯಾನ-3 ಯೋಜನೆ ಕೈಗೊಂಡಿದ್ದು, ಚಂದ್ರನ ಮೇಲೆ ಲ್ಯಾಂಡರ್‌ ಇಳಿದ ಬಳಿಕ ಅದರೊಳಗಿನ ರೋವರ್‌ ಉಪಕರಣವು ಹೊರಗೆ ಬಂದು ನೆಲದ ಮೇಲೆ ಒಂದು ಚಂದ್ರನ ದಿನದ ಅವಧಿಯ ತನಕ ಅಂದರೆ,14 ಭೂಮಿಯ ದಿನಗಳವರೆಗೆ ಕೆಲಸ ಮಾಡಲಿದ್ದು, ಇಸ್ರೋಗೆ ನಿರಂತರವಾಗಿ ಚಂದ್ರನ ಬಗ್ಗೆ ಮಾಹಿತಿ ರವಾನೆ ಮಾಡಲಿದೆ.

ಇದನ್ನೂ ಓದಿ: Chitradurga: ಕಳಪೆ ಊಟ ಕೊಟ್ರೆ ಹಾಸ್ಟೆಲ್ ವಾರ್ಡನ್ ಹಿಡ್ಕೊಂಡ್ ಹೊಡೀರಿ – ಚಿತ್ರದುರ್ಗ ಶಾಸಕರ ಹೇಳಿಕೆ ವೈರಲ್

Leave A Reply

Your email address will not be published.