ಲೋ ಬಿಪಿ ಇದ್ರೂ ಆಗುತ್ತಾ ಹೃದಯಾಘಾತ: ಸ್ಪಂದನ ಸಾವಿಗೆ ಲೋ ಬಿಪಿ ಕಾರಣವಾ?

Health news heart attack news how does low blood pressure cause heart attack

Low BP: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ(Heart Attack)ಸಾವನ್ನಪ್ಪಿದ ಅನೇಕ ಘಟನೆಗಳು ವರದಿಯಾಗುತ್ತಿದೆ. ಅದರಲ್ಲಿಯೂ ಬೇರೆ ಖಾಯಿಲೆಗೆ ಹೋಲಿಸಿದರೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಕಣ್ಮುಚ್ಚಿ ನೆನ್ನೆಯಿದ್ದವರು ಇಂದಿಲ್ಲ ಅನ್ನೋ ಹಾಗೆ ಹೃದಯಾಘಾತದಿಂದ ಸಾವಿನ ಕದ ತಟ್ಟಿದ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ. ಇದೀಗ, ನಟ ವಿಜಯ್ ರಾಘವೇಂದ್ರ(Vijay Raghvendra)ರಾಜಕುಮಾರ್ ಅವರ ಪತ್ನಿ ಸ್ಪಂದನ(Spandana Vijay Raghavendra)ಅವರು ಲೋ ಬಿಪಿಯ( Low BP)ಪರಿಣಾಮ ಹೃದಯಾಘಾತವಾಗಿ ನಿಧನರಾಗಿದ್ದು, ಸಣ್ಣ ಪ್ರಾಯದಲ್ಲೇ ಸಾವಿನ ದವಡೆಗೆ ಸಿಲುಕಿದ ಸುದ್ದಿ ಕೇಳಿ ಇಡೀ ಕನ್ನಡ ಚಿತ್ರರಂಗವೇ ಅಚ್ಚರಿಗೆ ಒಳಗಾಗಿದೆ.

ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡಕ್ಕೆ ಕಾರಣವೇನು?
ಸಾಮಾನ್ಯವಾಗಿ ರಕ್ತದೊತ್ತಡವು 120/90 mm Hg ಇರಬೇಕು. ಕಡಿಮೆ ರಕ್ತದೊತ್ತಡ ಎಂದರೆ 90/60 mm Hg ಗಿಂತ ಕಡಿಮೆಯಿರಲಿದ್ದು, ಇಂತವರಿಗೆ ಹಠಾತ್ತನೆ ಹೃದಯಾಘಾತಕ್ಕೆ ಒಳಗಾಗಬಹುದು. ಇತ್ತೀಚಿನ ದಿನಗಳಲ್ಲಿ ಸರಿಯಾದ ಆಹಾರ ಕ್ರಮ ಪಾಲಿಸದೇ, ನಿದ್ದೆಯ ಕೊರತೆ ಸೇರಿದಂತೆ ಅಸಮರ್ಪಕ ಜೀವನಶೈಲಿಯಿಂದಾಗಿ ಲೋ ಬಿಪಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ ಸಾವಿನ ದವಡೆಗೆ ಸಿಲುಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ,ಜಾಗೃತೆ ವಹಿಸುವುದು ಅತ್ಯವಶ್ಯಕ.

ಕಡಿಮೆ ರಕ್ತದೊತ್ತಡವು ಹೃದಯಾಘಾತ (Heart attacks) ಅಥವಾ ಪಾರ್ಶ್ವವಾಯುವಿಗೆ (Strokes) ಕಾರಣವಾಗಬಹುದು, ಹೃದಯ ಮತ್ತು ಮೆದುಳಿಗೆ( Heart and Brain) ದೀರ್ಘಕಾಲದ ಹಾನಿ ಉಂಟುಮಾಡಬಹುದು ಅಥವಾ ಇದು ಕೆಲವೊಮ್ಮೆ ಸಾವಿಗೆ (Death) ಕಾರಣವಾಗಬಹುದು. ಅಧಿಕ ರಕ್ತದೊತ್ತಡ ಸಮಸ್ಯೆ ಕೂಡ ಹೆಚ್ಚಾಗಿ ಕಂಡುಬರುತ್ತಿದ್ದು, ಆದರೆ ಅಧಿಕ ರಕ್ತದೊತ್ತಡಕ್ಕೆ ಹೋಲಿಸಿದರೆ ಕಡಿ ಹೆಚ್ಚಿನ ರಕ್ತದೊತ್ತಡ ಹೆಚ್ಚಿನ ಪ್ರಮಾಣದ ಅಪಾಯವನ್ನು ತಂದೊಡ್ದಬಹುದು. ಅಷ್ಟೆ ಅಲ್ಲದೇ,ಹೃದಯಾಘಾತದಂತಹ ಅಪಾಯಗಳನ್ನು ಉಂಟು ಮಾಡುವ ಸಾಧ್ಯತೆಯಿದೆ. ಇದರಿಂದಾಗುವ ಲಕ್ಷಣಗಳು ತುಂಬಾ ನಿಧಾನ ಅಥವಾ ತುಂಬಾ ವೇಗವಾಗಿರುವ ಹೃದಯ ಬಡಿತ, ಹಗುರವಾಗಿ ಕಾಣುವ ಚರ್ಮದ ಬಣ್ಣ, ಮಂಡಿಯ ಚಿಪ್ಪುಗಳು ತಣ್ಣಗಾಗುವ ಹಾಗೆ ಅನಿಸಬಹುದು. ಇದರ ಜೊತೆಗೆ ಮೂತ್ರವು ಕಡಿಮೆ ಆಗುವುದು. ತೀವ್ರವಾದ ಗಾಯಗಳಿಂದ ರಕ್ತದ ನಷ್ಟವು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ನಿರ್ಜಲೀಕರಣವು ಕಡಿಮೆ ರಕ್ತದ ಪರಿಮಾಣಕ್ಕೆ ಕಾರಣವಾಗಬಹುದು.

ಕಡಿಮೆ ರಕ್ತದೊತ್ತಡವು( Blood pressure) ದೇಹದ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುವ ಜೊತೆಗೆ ಹೃದಯ ಮತ್ತು ಮೆದುಳಿನ ಹಾನಿಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ರಕ್ತದೊತ್ತಡದಲ್ಲಿ ಹಠಾತ್ ಕುಸಿತವಾದ ಸಂದರ್ಭದಲ್ಲಿ, ಹೃದಯ, ಮೆದುಳು ಅಥವಾ ಇತರ ಪ್ರಮುಖ ಅಂಗಗಳು ಸಾಕಷ್ಟು ರಕ್ತದ ಹರಿವನ್ನು ಸಿಗದೇ ಇದ್ದಾಗ ಹೃದಯಾಘಾತ ಇಲ್ಲವೇ ಪಾರ್ಶ್ವವಾಯುವಿಗೆ ಅಪಾಯವನ್ನು ಉಂಟು ಮಾಡಬಹುದು.

ಲೋ ಬಿಪಿಗೆ ಕಾರಣಗಳೇನು?
*ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದರೆ,
* ಹೃದಯ ಅಥವಾ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿದ್ದರೆ ಹೆಚ್ಚು ಒತ್ತಡಕ್ಕೆ ಒಳಗಾದ ಸಂದರ್ಭ ಕೂಡ ಲೋ ಬಿಪಿ ಉಂಟಾಗುತ್ತದೆ. ಲೋ ಬಿಪಿ
* ಅತಿಯಾದ ಅತಿಸಾರ ಮತ್ತು ವಾಂತಿಯಿಂದ ಲೋ ಬಿಪಿ ಕಾಣಿಸಿಕೊಳ್ಳಬಹುದು.
*ಮಧುಮೇಹವಿದ್ದ ಸಂದರ್ಭದಲ್ಲಿ ಕೂಡ ಲೋ ಬಿಪಿ ಕಾಣಿಸಿಕೊಳ್ಳುತ್ತದೆ.

ಲೋ ಬಿಪಿಯ ಮುಖ್ಯ ಲಕ್ಷಣಗಳೇನು?
*ತಲೆತಿರುಗುವಿಕೆ
*ಮೂರ್ಛೆ ಹೋಗುವುದು
* ವಾಕರಿಕೆ ಅಥವಾ ವಾಂತಿ,
* ಆಯಾಸ
* ದೃಷ್ಟಿ ಮಂದ ಆಗುವುದು (Vision blurring)

ನಿಮಗೆ ಮೇಲೆ ತಿಳಿಸಿದ ಲಕ್ಷಣಗಳು ಕಂಡು ಬಂದಲ್ಲಿ ತಪ್ಪದೇ ವೈದ್ಯರನ್ನು ಭೇಟಿ ಆಗುವುದು ಒಳಿತು. ಬದಲಾಗುವ ರಕ್ತದೊತ್ತಡವು ಸಾವಿಗೂ ಕೂಡ ಕಾರಣವಾಗಬಹುದು. ಹೀಗಾಗಿ, ವೈದ್ಯರನ್ನು ಭೇಟಿ ಆಗುವುದು ಉತ್ತಮ.

ಇದನ್ನೂ ಓದಿ: ಸ್ಪಂದನಾ ಹೃದಯಾಘಾತ: ಮಹಿಳೆಯರಿಗೆ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ನೀಡಿದ್ದಾರೆ ಕೆಲ ಸಲಹೆ !

Leave A Reply

Your email address will not be published.