ದಕ್ಷಿಣ ಕನ್ನಡ ಬೆಳ್ತಂಗಡಿ ಮೂಲದ ಸ್ಪಂದನಾ- ವಿಜಯ್ ರಾಘವೇಂದ್ರರದ್ದು ಕಾಫಿ ಡೇ ಪ್ರೀತಿ, ಈ ಜನುಮದ ಜೋಡಿಯ ಪ್ರೇಮ್ ಕಹಾನಿಯೇ ಸೂಪರ್ !

Sandalwood news Kannada actor Vijay Raghavendra and Spandana love story marriage detail

Vijay Raghavendra’s Wife: ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ( Vijay Raghavendra’s Wife) ಸ್ಪಂದನ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಬ್ಯಾಂಕಾಕ್ ಗೆ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಿದ್ದ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಮತ್ತು ಅವರ ಕುಟುಂಬ ಥೈಲ್ಯಾಂಡ್ ನಲ್ಲಿ ಖುಷಿಯ ಕ್ಷಣಗಳನ್ನು ಕಳೆಯುತ್ತಿತ್ತು. ಆದರೆ, ಈ ಸಂತೋಷ ಕಂಡು ವಿಧಿಗೂ ಕೂಡ ಅಸೂಯೆ ಆಯಿತೇನೋ ?! ವಿದೇಶ ಪ್ರವಾಸಕ್ಕಾಗಿ(Tour) ಥಾಯ್ಲೆಂಡ್‌ನಲ್ಲಿದ್ದ ಸಂದರ್ಭದಲ್ಲಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಸ್ಪಂದನಾಗೆ ಆಯಾಸವಾಗಿದೆ. ಅವರು ನಂತರ ಮಲಗಿದ್ದಾರೆ. ಮಲಗಿದ್ದಲ್ಲಿಯೇ ಅವರಿಗೆ ಹೃದಯಘಾತವಾಗಿದೆ. ತಕ್ಷಣ ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಕೊನೆಯುಸಿರೆಳೆದಿದ್ದಾರೆ. ಇದರ ಜೊತೆಗೆ ಸ್ಪಂದನ ಅವರಿಗೆ ಲೋ ಬಿಪಿ ಕೂಡ ಇತ್ತು ಎನ್ನಲಾಗಿದೆ.

ವಿಜಯರಾಘವೇಂದ್ರ – ಸ್ಪಂದನಾ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಅಷ್ಟೆ ಅಲ್ಲದೇ, ಮದುವೆಯ ಬಳಿಕವೂ ಇಬ್ಬರು ಪ್ರೇಮಿಗಳಂತೆಯೇ ಇದ್ದದ್ದು ವಿಶೇಷ !! ಈ ಪ್ರೇಮ ಪುರಾಣ ಶುರುವಾಗಿದ್ದು,ಮಲ್ಲೇಶ್ವರಂನ ಕಾಫಿ ಡೇಯಲ್ಲಿ. ಹೌದು!! ಮೊದಲಿಗೆ ವಿಜಯ್ ರಾಘವೇಂದ್ರ (Vijay Raghavendra) ಅವರ ಭೇಟಿ ಮಲ್ಲೇಶ್ವರಂನ ಕಾಫಿ ಡೇಯಲ್ಲಿ ನಡೆದು, ಮೊದಲ ನೋಟದಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದ ವಿಜಯ್ ಅವರಿಗೆ ಸ್ಪಂದನ ಅವರ ಹಿನ್ನೆಲೆ ತಿಳಿದಿರಲಿಲ್ಲ. ಹೀಗಿದ್ದರೂ ಕೂಡ ವಿಜಯ್ ಅವರಿಗೆ ಮಂಗಳೂರು ಕಡೆಯ ಹುಡುಗಿಯನ್ನು ಮದುವೆಯಾಗುವ ಹಂಬಲ ಮೊದಲೇ ಇತ್ತು. ಹೆಚ್ಚು ಕಮ್ಮಿ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಸ್ಪಂದನ ನೋಡಲು ತುಂಬಾ ಸುರದ್ರೂಪಿಯಾಗಿದ್ದರು ಮೊದಲ ನೋಟಕ್ಕೆ ಇಷ್ಟವಾಗುವ ತರ ಇದ್ದರು ಸ್ಪಂದನ ಶಿವರಾಂ.

ಅಷ್ಟಕ್ಕೂ ಈ ಸ್ಪಂದನರವರು (Spandana) ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿಯಾಗಿದ್ದು, ಆದರೆ ಇವರು ಜನಿಸಿದ್ದು ಮಾತ್ರ ಬೆಂಗಳೂರಿನಲ್ಲಿ. ಸ್ಪಂದನ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ ಎಂಬ ವಿಚಾರ ಮೊದಲಿಗೆ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರಿಗೆ ಪ್ರೀತಿಯ ಬಲೆಯಲ್ಲಿ ಬಿದ್ದ ನಂತರ ಗೊತ್ತಾಗುತ್ತೆ. 2007 ರಲ್ಲಿ ಮತ್ತೊಮ್ಮೆ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ ವಿಜಯರಾಘವೇಂದ್ರ ಹಾಗೂ ಸ್ಪಂದನ ಭೇಟಿಯಾಗುತ್ತಾರೆ. ಆ ಬಳಿಕ ಮನೆಯಲ್ಲಿ ತಂದೆಯ ಬಳಿ ಪ್ರೀತಿ ವಿಚಾರ ಹೇಳಿದ್ದ ವಿಜಯ್ ರಾಘವೇಂದ್ರ(Vijay Raghavendra)ರವರಿಗೆ ಮನೆಯವರ ಬೆಂಬಲ ಸಿಕ್ಕಿ ಇಬ್ಬರು ಕೂಡ ಪ್ರೀತಿಸುತ್ತಿರುವ ವಿಚಾರ ತಿಳಿದು ಎರಡು ಮನೆಯವ್ರು ಮದುವೆಗೆ ಗ್ರೀನ್ ಸಿಗ್ನಲ್ (Green signal) ನೀಡುತ್ತಾರೆ.2007ರ ಆಗಸ್ಟ್ 26 ರಂದು ಪ್ರೀತಿಸಿದ ಜೋಡಿ ಹಕ್ಕಿಗಳು ಮದುವೆ ಎಂಬ ಬಂಧನಕ್ಕೆ ನಾಂದಿ ಹಾಡುತ್ತಾರೆ.

ಮದುವೆಯ ಬಳಿಕವೂ ಕೂಡ ಪ್ರೇಮಿಗಳಂತೆ(Lovers) ಅನ್ಯೋನ್ಯವಾಗಿದ್ದ ಜೋಡಿಯ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಸ್ಪಂದನ ಅವರು ತಮ್ಮ ಬಾಳ ಪಯಣವನ್ನು ಮುಗಿಸಿ ಬಿಟ್ಟಿದ್ದಾರೆ.ಈ ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರ ಅಗಲಿಕೆಯ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರು ಸ್ಪಂದನಾ ಅವರ ಚಿಕ್ಕಪ್ಪ, ಅಷ್ಟೇ ಅಲ್ಲದೇ, ಸೋದರ ರಕ್ಷಿತ್ ಶಿವರಾಂ(Rakshit shivaram) ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ಸೋದರ ರಕ್ಷಿತ್ ಶಿವರಾಂ ಪರವಾಗಿ ಬೆಳ್ತಂಗಡಿ ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಚುನಾವಣೆ ಪ್ರಚಾರ ಕೂಡ ಮಾಡಿದ್ದರು. ಒಟ್ಟಿನಲ್ಲಿ ಸುಂದರವಾಗಿ ಸಂತೋಷ ಹುದಿಂದ ಜೀವನ ಸಾಗಿಸುತ್ತಿದ್ದ ಪ್ರೇಮ ಪಕ್ಷಿಗಳು ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿ ಸ್ಪಂದನ ಅವರು ಜವರಾಯನ ಮನೆಗೆ ಯಾತ್ರೆ ಆರಂಭಿಸಿದ್ದಾರೆ.

ಇದನ್ನೂ ಓದಿ: Mobile: ನಿಮ್ಮ ಮೊಬೈಲ್ ಅನ್ನೂ ಸ್ಪೀಡ್ ಆಗಿ ಚಾರ್ಜ್ ಮಾಡಬೇಕಾ?, ಹಾಗಾದ್ರೆ ತಕ್ಷಣ ಈ ಸೆಟ್ಟಿಂಗ್ ಚೇಂಜ್ ಮಾಡಿ

Leave A Reply

Your email address will not be published.