ಚಿನ್ನಾರಿ ಮುತ್ತನ ಮನದೊಡತಿ ಗೃಹಿಣಿ ಮಾತ್ರವಲ್ಲದೇ, ಬೆಳ್ಳಿ ತೆರೆಯಲ್ಲಿ ಬಣ್ಣ ಹಚ್ಚಿ ಮಿಂಚಿದ ಸ್ಪಂದನ!

Sandalwood news vijay Ragavendra's wife Spandana Ragavendra death and her filmography

Vijay Raghavendra’s Wife: ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ( Vijay Raghavendra’s Wife)ಸ್ಪಂದನಾ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಸಣ್ಣ ಪ್ರಾಯದಲ್ಲೇ ಇಹಲೋಕದ ಪಯಣ ಮುಗಿಸಿದ ಸ್ಪಂದನ ವಿಜಯ್ ರಾಘವೇಂದ್ರರವರು ಲೋ ಬಿಪಿ ಮತ್ತು ಹೃದಯಾಘಾತದ ಪರಿಣಾಮ ರಾತ್ರಿ ಮಲಗಿದ್ದ ಸ್ಪಂದನಾ ಇಂದು ಹಾಸಿಗೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ನಿವೃತ್ತ ಅಸಿಸ್ಟೆಂಟ್‌ ಪೊಲೀಸ್‌ ಆಫೀಸರ್‌ ಬಿ.ಕೆ ಶಿವರಾಮ್‌ ಅವರ ಪುತ್ರಿ ಸ್ಪಂದನಾ ಅವರು ಮೂಲತಃ ದಕ್ಷಿಣ ಕನ್ನಡದವರಾಗಿದ್ದು, ಸ್ಪಂದನಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಮಲ್ಲೇಶ್ವರಂ ಕಾಫಿ ಡೇ ನಲ್ಲಿ ಭೇಟಿಯಾಗಿದ್ದ ಬಿ.ಕೆ. ಶಿವರಾಮ್ ಪುತ್ರಿ ಸ್ಪಂದನಾ ನಟ ವಿಜಯ್ ಹಲವು ವರ್ಷಗಳಿಂದ ಪ್ರೀತಿಸಿ 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ.

ವಿಜಯರಾಘವೇಂದ್ರ – ಸ್ಪಂದನಾ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಮದುವೆಯ ಬಳಿಕವೂ ಇಬ್ಬರು ಪ್ರೇಮಿಗಳಂತೆಯೇ ಇದ್ದದ್ದು ವಿಶೇಷ !! ದಾಂಪತ್ಯ ಜೀವನದಲ್ಲಿ ಸುಖಿ ಸಂಸಾರದ ನಡುವೆ ವಿಜಯ್ ರಾಘವೇಂದ್ರ ರಾಜಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಮುದ್ದಿನ ಮಡದಿ ಇಹಲೋಕದ ಯಾತ್ರೆ ಮುಗಿಸಿಬಿಟ್ಟಿದ್ದಾರೆ.

ಸ್ಪಂದನಾಗೆ ಮದುವೆಯ ಬಳಿಕ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದ ಸ್ಪಂದನ ಸಿನಿಮಾ ರಂಗದ ಆಗು ಹೋಗುಗಳ ಕಡೆಗೆ ಹೆಚ್ಚೇನು ಗಮನ ಕೊಡುತ್ತಿರಲಿಲ್ಲ. ಆದ್ರೆ ಮೊದಲ ಬಾರಿಗೆ 2016ರಲ್ಲಿ ‘ಅಪೂರ್ವ’ ಎಂಬ ಸಿನೆಮಾದಲ್ಲಿ ಬಣ್ಣ ಹಚ್ಚಿದ ಸ್ಪಂದನ ತಮ್ಮ ಪತಿ ವಿಜಯ್ ರಾಘವೇಂದ್ರ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ವಿಶಿಷ್ಠ ಸಿನಿಮಾ ‘ಅಪೂರ್ವ’ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲವಾಯಿತು. ಈ ನಡುವೆ, ನಟನೆಗೆ ಗುಡ್ ಬೈ ಹೇಳಿ ನಿರ್ಮಾಣ ಮಾಡುವತ್ತ ಚಿತ್ತ ವಹಿಸಿದರು.

ಸ್ಪಂದನಾ ಸಿನಿಮಾ ಲೋಕಕ್ಕಿಂತ ಹೆಚ್ಚಾಗಿ ತನ್ನ ವೃತ್ತಿ ಬದುಕಿನ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚು ನಿಗಾ ವಹಿಸಿದ್ದರು. ವಿಜಯ್ ರಾಘವೇಂದ್ರ ನಿರ್ದೇಶನ ಮಾಡಲು ಮುಂದಾಗಿ ‘ಕಿಸ್ಮತ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ನಡುವೆ ಪತಿಯ ಎಲ್ಲ ಕೆಲಸಗಳಿಗೆ ಬೆಂಬಲವಾಗಿದ್ದ ಸ್ಪಂದನಾ ವಿಜಯ್ ರಾಘವೇಂದ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ಕೂಡ ಯಾಕೋ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲಿಲ್ಲ. ಇದೆಲ್ಲದರ ನಡುವೆ, ಸ್ಪಂದನ ಗೃಹಿಣಿಯಾಗಿಯು ಜವಾಬ್ದಾರಿ ನಿಭಾಯಿಸಿದಲ್ಲದೆ, ಪತಿಗೆ ಆಧಾರವಾಗಿ ನಿಂತಿದ್ದರು. ಆದ್ರೆ, ಇಲ್ಲಿಯವರೆಗೆ ಪ್ರತಿಯೊಂದಕ್ಕೂ ಪುಟ್ಟ ಮಗುವಿನಂತೆ ಹೆಂಡತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಚಿನ್ನಾರಿ ಮುತ್ತ ಈ ಆಘಾತವನ್ನು ಹೇಗೆ ತಡೆದುಕೊಳ್ಳುತ್ತಾರೆ?

ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ಈ ಜೋಡಿಯ ಖುಷಿಯ ಕಂಡು ವಿಧಿಗೆ ಕೂಡ ಅಸೂಯೆ ಆಗಿ ಬಿಟ್ಟಿತೋ ಏನೋ! ಜಂಟಿಯಾಗಿ ಸಾಗುತ್ತಿದ್ದ ಬಂಡಿ ಅರ್ಧಕ್ಕೆ ನಿಲ್ಲಿಸಿ ಸ್ಪಂದನ ಬಾಳ ಪಯಣ ಮುಗಿಸಿದ್ದಾರೆ. ಇನ್ನು ಏಕಾಂಗಿಯಾಗಿ ಚಿನ್ನಾರಿ ಮುತ್ತ ಜೀವನಬಂಡಿಯ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಬ್ಯಾಂಕಾಕ್ ನಲ್ಲೇ ಸ್ಪಂದನ ಪಾರ್ಥೀವ ಶರೀರವಿದ್ದು, ನಾಳೆ ಸಂಜೆ ವೇಳೆಗೆ ಮೃತದೇಹ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಲೋ ಬಿಪಿ ಇದ್ರೂ ಆಗುತ್ತಾ ಹೃದಯಾಘಾತ: ಸ್ಪಂದನ ಸಾವಿಗೆ ಲೋ ಬಿಪಿ ಕಾರಣವಾ?

Leave A Reply

Your email address will not be published.