Black Pepper: ಕರಿಕಾಳುವಿನ ಚಿನ್ನದ ಏಳು, ಏಳು ವರ್ಷದ ನಂತರ ಬೆಲೆಯಲ್ಲಿ ಅಂತರಿಕ್ಷಕ್ಕೆ ಹಾರೋ ಗೀಳು !

coorg news pepper rate very high after seven years market news

Kodagu News: ಕಳೆದ ಏಳು ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದ್ದು, ಹೀಗಾಗಿ, ಸಹಜವಾಗಿ ಕರಿಮೆಣಸು ಬೆಳೆಗಾರರಿಗೆ ಸಂತಸ ತಂದಿದೆ. ಕಪ್ಪು ಚಿನ್ನ ಎಂದೇ ಖ್ಯಾತಿ ಪಡೆದಿರುವ ಕರಿಮೆಣಸು ಬೆಳೆಗೆ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

ಕಳೆದ 5-6 ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ ಬೆಲೆ ಇದೀಗ ಏರಿಕೆ ಕಂಡಿದೆ. ವಿಶ್ವದಲ್ಲೇ ಅತಿಹೆಚ್ಚು ಕಾಳುಮೆಣಸು ಉತ್ಪಾದನೆ ಮಾಡುವ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಅಕ್ರಮವಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದ್ದ ಹಿನ್ನೆಲೆ ದೇಶೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆ ಇದ್ದಕ್ಕಿದ್ದಂತೆ ಇಳಿಯಲು ಕಾರಣವಾಯಿತು.ಆ ಮೂಲಕ ಬೆಲೆ ಇಳಿಕೆ ಆಗಿತ್ತಿತ್ತೆ ವಿನಹ ಏರಿಕೆ ಆಗುವ ಯಾವ ಲಕ್ಷಣಗಳೂ ಕಾಣುತ್ತಿರಲಿಲ್ಲ. ಹೀಗಾಗಿ,ಕಾಳುಮೆಣಸನ್ನೇ ನೆಚ್ಚಿಕೊಂಡಿದ್ದ ಮಂದಿ ಕಳೆದ ಐದು ವರ್ಷಗಳಿಂದ ಬೆಳೆಗೆ ತಕ್ಕ ಬೆಲೆ ಸಿಗದೇ ಕೈ ಸುಟ್ಟು ಕೊಂಡಿದ್ದರು. ಸುದೀರ್ಘ ಏಳುವರ್ಷಗಳ ಬಳಿಕ ಪ್ರತಿ ಕೆಜಿ ಕಾಳುಮೆಣಸಿನ ಧಾರಣೆ 600 ರೂ. ದಾಟಿದ್ದು, ಹೀಗಾಗಿ , ಕರಿಮೆಣಸು ಬೆಳೆಗಾರರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಪ್ರಸಕ್ತ ಪ್ರತಿ ಕೆಜಿಗೆ ಕಾಳುಮೆಣಸಿನ ಬೆಲೆ 600 ರೂ.ಗಳಿಂದ 630 ರೂ.ಗಳವರೆಗೆ ಮಾರಾಟವಾಗುತ್ತಿದೆ.

2015-16 ರ ಸಾಲಿನಲ್ಲಿ ಕಾಳುಮೆಣಸು ಬೆಲೆ ಪ್ರತಿ ಕೆಜಿಗೆ 675 ರಿಂದ 700 ರೂ.ಗಳವರೆಗೂ ತಲುಪಿತ್ತು.ಆ ಬಳಿಕ ಕೆಜಿಗೆ 300 ರೂ.ವರೆಗೆ ಕಾಳುಮೆಣಸು ಬೆಲೆ ಕುಸಿತ ಕಂಡು ಆಬಳಿಕ ಚೇತರಿಸಿಕೊಂಡಿದ್ದರೂ ಕಳೆದ ಮೂರು ವರ್ಷಗಳಲ್ಲಿ 500 ರೂ. ದಾಟಿಯೆ ಇರಲಿಲ್ಲ. ಆದರೆ ಕಳೆದ ಜುಲೈ 24 ರಿಂದ ಪ್ರತಿ ಕೆಜಿ ಮೆಣಸಿನ ಧಾರಣೆ 600 ರೂ. ದಾಟಿದೆ. ಕಾಳುಮೆಣಸು ಉತ್ಪಾದನೆಯಲ್ಲಿ ಕರ್ನಾಟಕ ಕೇರಳ ರಾಜ್ಯವನ್ನು ಹಿಂದಕ್ಕೆ ತಳ್ಳಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಪ್ರಸ್ತುತ, ಮಡಿಕೇರಿ, ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರು ಮಾರುಕಟ್ಟೆಗಳಲ್ಲಿ ಕಾಳುಮೆಣಸಿಗೆ ಪ್ರತಿ ಕೆಜಿಗೆ 600 ರೂ.ಗಳಿಂದ 630 ರೂ. ದರ ಲಭ್ಯವಾಗುತ್ತಿದೆ.

ರಾಜ್ಯದಲ್ಲಿ ಅತಿಹೆಚ್ಚು ಕಾಳುಮೆಣಸುವ ಜಿಲ್ಲೆ ಕೊಡಗು(Coorg) ಆನಂತರದ ಸ್ಥಾನದಲ್ಲಿ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿವೆ.ಆನಂತರದ ಸ್ಥಾನಗಳನ್ನ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಗೋವಾ, ಮೇಘಾಲಯ ಮತ್ತು ತ್ರಿಪುರ ಪಡೆದುಕೊಂಡಿವೆ. ಕರ್ನಾಟಕದಲ್ಲಿ ಪ್ರತಿವರ್ಷ 33 ಸಾವಿರ ಟನ್ ಉತ್ಪಾದನೆಯಾದರೆ, ಎರಡನೇ ಸ್ಥಾನದಲ್ಲಿರುವ ಕೇರಳ ವಾರ್ಷಿಕ 28 ಸಾವಿರ ಟನ್ ಕಾಳು ಮೆಣಸು ಉತ್ಪಾದನೆ ಮಾಡುತ್ತದೆ.

ಕರ್ನಾಟಕದಲ್ಲಿ ವಿಶೇಷವಾಗಿ ಕಾಳುಮೆಣಸನ್ನು( Karnataka Pepper) ರಾಜ್ಯಗಳೆಂದರೆ ಕೊಡಗು( Kodagu), ಚಿಕ್ಕಮಗಳೂರು( Chikkamagaluru), ಹಾಸನ( Hassan) ಭಾಗಗಳಲ್ಲಿ ಹೀಗಿದ್ದರೂ ಹೆಚ್ಚಾದ ಮಳೆ , ಕಾಳುಮೆಣಸಿನ ಬಳ್ಳಿಗೆ ತಗುಲುತ್ತಿದ್ದ ರೋಗಗಳು, ಇದರ ನಡುವೆ ಸೂಕ್ತ ಬೆಲೆ ಸಿಗದೆ ಬೆಳೆಗಾರರು ಸಂಕಷ್ಟ ಅನುಭವಿಸಿದ್ದರು.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಸರಬರಾಜು ಪ್ರಕ್ರಿಯೆ, ಅಗ್ಗದ ಇಲ್ಲವೇ ಕಾಳುಮೆಣಸಿನ ಜೊತೆಗೆ ಪಪ್ಪಾಯಿ ಬೀಜ ಇನ್ನಿತರ ಕಲಬೆರಕೆ ಮಾಡುವ, ಅಕ್ರಮ ಆಮದು ಕಾರಣದಿಂದ ಭಾರತದಲ್ಲಿ ಕಳೆದ ಏಳು ವರ್ಷಗಳಲ್ಲಿ ಕರಿಮೆಣಸು ಧಾರಣೆ ಕುಸಿತ ಕಂಡಿತ್ತು. ಇದೀಗ, ಏಳು ವರ್ಷಗಳ ಬಳಿಕ ಬೆಲೆಯಲ್ಲಿ ಏರಿಕೆ ಕಂಡಿದೆ.ದಾಸ್ತಾನುಗಾರರು ಈಗಿನಿಂದಲೇ ಕಾಳುಮೆಣಸು ಖರೀದಿಸಿ ದಾಸ್ತಾನು ಇಡಲು ಆರಂಭಿಸಿರುವುದರಿಂದ ಕರಿಮೆಣಸಿಗೆ ಬೇಡಿಕೆ ಹೆಚ್ಚುತ್ತಿದೆ.

Leave A Reply

Your email address will not be published.