Kodi Mutt Swamiji: ಸ್ಪಂದನ ನಿಧನಕ್ಕೆ ಕೋಡಿ ಶ್ರೀ ಸಂತಾಪ, ದೇವರಿಗೆ ಪ್ರಿಯವಾದ ಹೂವನ್ನು ದೇವರು ಬೇಗ ಕರೆಸಿಕೊಳ್ಳುತ್ತಾನೆ!

Kodi Mutt Swamiji give final triute to spandana vijay raghavendra

Kodi Mutt Swamiji: ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ (Vijay Raghavendra)ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಸಣ್ಣ ಪ್ರಾಯದಲ್ಲೇ ಇಹಲೋಕದ ಪಯಣ ಮುಗಿಸಿದ ಸ್ಪಂದನ ವಿಜಯ್ ರಾಘವೇಂದ್ರರವರು ಲೋ ಬಿಪಿ ಮತ್ತು ಹೃದಯಾಘಾತದ ಪರಿಣಾಮ ರಾತ್ರಿ ಮಲಗಿದ್ದ ಸ್ಪಂದನಾ ಅವರು ಆಗಸ್ಟ್ ಎರಡು ದಿನಗಳ ಹಿಂದಷ್ಟೇ ಹಾಸಿಗೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಬ್ಯಾಂಕಾಕ್ ಗೆ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ಆಗಸ್ಟ್ 6ರಂದು ನಿಧನ ಹೊಂದಿದ್ದು, ನಿನ್ನೆ(ಆಗಸ್ಟ್ 08) ರಾತ್ರಿ ಅವರ ಪಾರ್ಥಿವ ಶರೀರವನ್ನು ಥೈಲ್ಯಾಂಡ್‌ನಿಂದ ಬೆಂಗಳೂರಿಗೆ ತರಲಾಗಿದೆ.

ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra ) ಅವರ ಮೃತದೇಹದ ಅಂತಿಮ ದರ್ಶನ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಅವರ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಎಲ್ಲರ ಕಣ್ಣಾಲಿಗಳು ತುಂಬಿದ್ದು, ತುಂಬಿರುವ ದುಃಖದ ನಡುವೆ ವಿಜಯ್ ರಾಘವೇಂದ್ರ ಮಗನ ಸಾಂತ್ವನಗೈಯುವ ದೃಶ್ಯ ನೋಡುಗರಿಗೆ ಕೂಡ ನೋವು ತರಿಸುವುದು ಸುಳ್ಳಲ್ಲ.

ಈಡಿಗ ಸಂಪ್ರದಾಯದಂತೆ ಸ್ಪಂದನ ಅಂತಿಮ ವಿಧಿ ವಿಧಾನಗಳನ್ನು ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಕುಟುಂಬಸ್ಥರು ನೆರವೇರಿಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತಿಮ ದರ್ಶನಕ್ಕೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.ಈ ನಡುವೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Minister Ramalinga Reddy) ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನವನ್ನು ಪಡೆದರು. ಇನ್ನು ಸಿಎಂ ಸಿದ್ದರಾಮಯ್ಯ ಸಹ ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದ್ದಾರೆ.

ಸಚಿವರಾದ ಪ್ರಿಯಾಂಕ್ ಖರ್ಗೆ, ಸ್ಪೀಕರ್ ಯು ಟಿ ಖಾದರ್ ಮೊದಲಾದವರು ಅಂತಿಮ ದರ್ಶನವನ್ನು ಪಡೆದಿದ್ದಾರೆ. ಚಿತ್ರರಂಗ, ರಾಜಕೀಯ ನಾಯಕರು ಸೇರಿದಂತೆ ಹಿರಿಯ ಕಲಾವಿದರು, ಹಲವು ಕ್ಷೇತ್ರಗಳ ಗಣ್ಯರು ಸ್ಪಂದನಾ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಕೋಡಿಮಠದ ಡಾ. ಶಿವಾನಂದ ಮಹಾಸ್ವಾಮೀಜಿಯವರು(Kodi Mutt Swamiji)ಕೂಡ ಸ್ಪಂದನಾರವರ ಅಂತಿಮ ದರ್ಶನ ಪಡೆದಿದ್ದಾರೆ.

ಕೋಡಿಮಠದ ಡಾ ಶಿವಾನಂದ ಮಹಾಸ್ವಾಮೀಜಿ ಅವರು ಸ್ಪಂದನಾ ಅಂತಿಮ ದರ್ಶನ ಪಡೆದುಕೊಂಡ ಬಳಿಕ ಮಾಧ್ಯಮವೊಂದಕ್ಕೆ ಕೋಡಿ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

ಅಕಾಲಿಕವಾಗಿ ಕಾಲದ ಕರೆಗೆ ಓಗೊಟ್ಟು ನಿಧನರಾದ ಸ್ಪಂದನರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ ಕೋಡಿ ಶ್ರೀಗಳು,” ಭಗವಂತನ ಇಚ್ಛೆ, ಭಗವಂತ ಯಾವಾಗಲೂ ತನಗೆ ಪ್ರಿಯವಾದ ಹೂವನ್ನು ತನ್ನ ಕಡೆಗೆ ಬೇಗ ಕರೆಸಿಕೊಳ್ಳುತ್ತಾನೆ. ಅದೇ ರೀತಿ, ಸ್ಪಂದನ ಅವರ ವಿಚಾರದಲ್ಲಿಯು ದೇವರ ತನ್ನ ನೆಚ್ಚಿನ ಹೂವನ್ನು ತನಗೆ ಬೇಕೆಂದಾಗ ಕರೆಸಿಕೊಂಡಿದ್ದಾನೆ. ಆ ತಾಯಿಯನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ” ಎಂದು ಇದೇ ಸಂದರ್ಭದಲ್ಲಿ ಶ್ರೀಗಳು ಹೇಳಿದ್ದಾರೆ.

Leave A Reply

Your email address will not be published.