Cardiac Arrest: ಚಿಕ್ಕ ಮಕ್ಕಳನ್ನು ಕಾಡುತ್ತಿರುವ ಹೃದಯ ಸ್ತಂಭನ: ಈ ಕುರಿತು ವೈದ್ಯರು ಹೇಳಿದ್ದೇನು?

lifestyle news cardiac arrest in children reasons

Cardiac Arrest: ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ.ಪುನೀತ್‌ ರಾಜಕುಮಾರ್‌(Puneeth Rajkumar)ಸೇರಿದಂತೆ ಮೊನ್ನೆಯಷ್ಟೆ ನಿಧನ ಹೊಂದಿದ ಸ್ಪಂದನ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಸಾವಿನ ಸುದ್ದಿ (Death News)ಕೇಳಿ ಜನತೆಗೆ ಶಾಕ್ ಆಗಿದ್ದಾರೆ. ಇದ್ದಕ್ಕಿದ್ದಂತೆ ಅಕಾಲಿಕ ಸಾವು ಹೃದಯ ಸ್ತಂಭನದ ಬಗ್ಗೆ ಎಲ್ಲರೂ ಕಳವಳಗೊಳ್ಳುವಂತೆ ಮಾಡಿದೆ. ಅದರಲ್ಲಿಯೂ ಇತ್ತೀಚಿಗೆ ಚಿಕ್ಕಮಕ್ಕಳಲ್ಲಿ ಕೂಡ ಹೃದಯಾಘಾತ, ಹೃದಯ ಸ್ತಂಭನ ಸಾಮಾನ್ಯವೆಂಬಂತೆ ಆಗಿಬಿಟ್ಟಿದೆ.

ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು(Childerns)ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪುತ್ತಿರುವವರ (Death)ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಹೃದಯಾಘಾತ ಉಂಟಾಗಲು ಕಾರಣವೇನು?ಹಠಾತ್ ಹೃದಯ ಸ್ತಂಭನವು ಹೆಚ್ಚಾಗಿ ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೋಪತಿ (HCM) ಎಂಬ ಹೃದಯ ಸ್ಥಿತಿಯ ಪರಿಣಾಮವಾಗಿದೆ. ಇದು ಹುಟ್ಟಿನಿಂದಲೇ ಕಾಣಿಸಿಕೊಳ್ಳಬಹುದು. ಇಲ್ಲವೇ ಮಗು ಬೆಳೆದಂತೆ ಬೆಳೆಯಬಹುದಾಗಿದ್ದು, ಹೃದಯದ ಕೋಣೆಗಳು (Heart)ಮತ್ತು ಕವಾಟಗಳ ಸುತ್ತಲಿನ ಸ್ನಾಯು ದಪ್ಪವಾಗುತ್ತದೆ. ಇದು ರಕ್ತವನ್ನು ಹರಿಯಲು(Blood Circulation)ಕಷ್ಟವಾಗಬಹುದು.

ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಮೂರು ಪ್ರಧಾನ ಹೃದಯ ರಕ್ತನಾಳಗಳಲ್ಲಿ ಯಾವುದಾದರೂ ಒಂದರಲ್ಲಿ ಅಡೆತಡೆ ಉಂಟಾಗುವ ಪರಿಣಾಮ ಇದರಿಂದ ಹೃದಯದ ಸ್ನಾಯುಗಳಲ್ಲಿ ಸ್ವಲ್ಪ ಭಾಗಕ್ಕೆ ರಕ್ತ ಪೂರೈಕೆ ಸರಿಯಾಗದೆ ಹೃದಯಾಘಾತ ಸಂಭವಿಸುತ್ತದೆ. ರಕ್ತ ಪೂರೈಕೆ ಹಠಾತ್ತನೆ ಕುಸಿಯುವ ಹಿನ್ನೆಲೆ ಹೃದಯ ಬಡಿತ ದುರ್ಬಲವಾಗುತ್ತದೆ. ಇದನ್ನು ಆ್ಯಂಜಿಯೊಪ್ಲಾಸ್ಟಿ, ಸ್ಟೆಂಟ್‌ ಅಳವಡಿಕೆ ಇತ್ಯಾದಿ ಚಿಕಿತ್ಸಾ ಕ್ರಮಗಳಿಂದ ಸರಿಪಡಿಸದೆ ಇದ್ದಲ್ಲಿ ಶಾಶ್ವತ ಹಾನಿ ಉಂಟಾಗುವ ಸಾಧ್ಯತೆಗಳಿವೆ. ಹೃದಯ ಸ್ತಂಭನಕ್ಕೆ ಒಳಗಾದ ಸಂದರ್ಭದಲ್ಲಿ ಪ್ರತಿ ಕ್ಷಣವೂ ನಿರ್ಣಾಯಕವಾಗಿರುತ್ತದೆ. ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಬದುಕಬಹುದಾದ ಸಾಧ್ಯತೆಗಳಿರುತ್ತವೆ.

ಹಠಾತ್‌ ಹೃದಯ ಸ್ತಂಭನವು ಹೃದಯಾಘಾತ ಸಂಭವಿಸದೆ ಕೂಡ ಉಂಟಾಗಬಹುದು. ಹೃದಯದ ಇಲೆಕ್ಟ್ರಿಕಲ್‌ ವ್ಯವಸ್ಥೆಯು ಅಸ್ಥಿರಗೊಳ್ಳುವ ಇನ್ನಿತರ ಸ್ಥಿತಿಗಳು ಕೂಡ ಇದ್ದು, ಹಠಾತ್‌ ಹೃದಯ ಸ್ತಂಭನ ಅಥವಾ ಸಡನ್‌ ಕಾರ್ಡಿಯಾಕ್‌ ಅರೆಸ್ಟ್‌ (ಎಸ್‌ಸಿಎ) ಎಂದು ಹೃದಯ ಸ್ತಂಭನವನ್ನುಕರೆಯುತ್ತಾರೆ. ಎಸ್‌ಸಿಎಯು ಹೃದಯಾಘಾತವಾದ ಎಲ್ಲ ಸಂದರ್ಭಗಳಲ್ಲಿಯೂ ಉಂಟಾಗದು. ಹೃದಯ ಸ್ತಂಭನ ಶೇ. 2ರಿಂದ 5 ಪ್ರಕರಣಗಳಲ್ಲಿ ಮಾತ್ರ ಕಂಡುಬರುತ್ತದೆ.ಈ ಕುರಿತು ವೈದ್ಯರು ಏನು ಹೇಳಿದ್ದಾರೆ ಗೊತ್ತಾ? ಮಕ್ಕಳಲ್ಲಿ ಬಾಲ್ಯದಲ್ಲೇ ಹೃದಯ ಸ್ತಂಭನ ಉಂಟಾಗಲು ಇವೆಲ್ಲ ಕಾರಣಗಳು ಏನು? ಇಲ್ಲಿದೆ ಡೀಟೈಲ್ಸ್!

ಔಷಧಿಗಳ ಮಿತಿ ಮೀರಿದ ಪ್ರಮಾಣ
ಈಗ ಸಣ್ಣ ಸಣ್ಣ ಆರೋಗ್ಯ ಸಮಸ್ಯೆ ಉಂಟಾದ ಸಂದರ್ಭ ಔಷಧಿಗಳ ಮೊರೆ ಹೋಗುವುದು ಸಾಮನ್ಯವಾಗಿ ಬಿಟ್ಟಿದೆ. ಈ ರೀತಿ,ಅವಶ್ಯಕತೆ ಮೀರಿ ಮಕ್ಕಳಿಗೆ ಔಷಧಿಗಳನ್ನು ನೀಡುವುದರಿಂದ ಕೂಡ ಮಕ್ಕಳಲ್ಲಿ ಹೃದಯ ಸ್ತಂಭನಕ್ಕೆ ಉಂಟಾಗುವ ಸಾಧ್ಯತೆಯಿದೆ. ಅದರಲ್ಲೂ ಕೆಲವು ಔಷಧಗಳು ಹೆಚ್ಚು ಪ್ರಬಲವಾಗಿರುವ ಹಿನ್ನೆಲೆ ಔಷಧಿಗಳ ಸೇವನೆಯು ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಕ್ಕಳು ಹೃದಯ ಸ್ತಂಭನಕ್ಕೆ ಒಳಗಾಗುವ ಸಂಭವ ಹೆಚ್ಚಿದೆ. ಇದಲ್ಲದೆ, ಗಂಭೀರವಾದ ಕಾರು ಅಪಘಾತ ಇಲ್ಲವೇ ಎದೆಗೆ ಗಂಭೀರವಾದ ಹೊಡೆತದಂತಹ ತೀವ್ರ ಆಘಾತವು ಮಕ್ಕಳಲ್ಲಿ ಹೃದಯ ಸ್ತಂಭನವನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ.

ಉಸಿರಾಟದ ಸೋಂಕುಗಳು
ಮಕ್ಕಳಲ್ಲಿ ಬಾಲ್ಯದಲ್ಲೇ ಉಸಿರಾಟದ ಸೋಂಕುಗಳಿರುವ(Breathing Problem)ಸಂದರ್ಭ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಶಿಶುಗಳಲ್ಲಿ ನ್ಯುಮೋನಿಯಾ ಇಲ್ಲವೇ ಬ್ರಾಂಕಿಯೋಲೈಟಿಸ್‌ನಂತಹ ಉಸಿರಾಟದ ಸೋಂಕುಗಳಿದ್ದರೆ, ಹೆಚ್ಚು ಅಪಾಯ ಉಂಟಾಗುವ ಸಂಭವವಿದ್ದು, ಹೃದಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕು.

ಹೃದಯದ ಸ್ಥಿತಿಗಳು
ಕೆಲವು ಮಕ್ಕಳಲ್ಲಿ  ಹೃದಯ ಸ್ತಂಭನದ ಕೆಲವು ಲಕ್ಷಣಗಳನ್ನು ಮೊದಲೇ ಹೊಂದಿರಬಹುದು. ಆದರೆ,ಅವರು ದೊಡ್ಡವರಾಗುವ ತನಕ ಯಾವುದೇ ರೀತಿಯ ಲಕ್ಷಣಗಳು ಗೋಚರಿಸದೆ ಇರಬಹುದು. ಕೆಲವೊಮ್ಮೆ ನಿರ್ಣಾಯಕ ಘಟ್ಟ ತಲುಪಿದಾಗಲೆ ಈ ಪರಿಸ್ಥಿತಿಗಳು ಸ್ಪಷ್ಟ ಲಕ್ಷಣಗಳನ್ನು ತೋರಿಸಬಹುದು. ಈ ರೀತಿ ಕೂಡ ಸ್ತಂಭನ ಹಠಾತ್‌ ಆಗಿ ಉಂಟಾಗಬಹುದು.

ಜನ್ಮಜಾತ ಹೃದಯ ದೋಷಗಳು
ಕೆಲವು ಮಕ್ಕಳು ಜನ್ಮಜಾತದಿಂದಲೂ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತಾರೆ. ಇದರಿಂದಾಗಿ ಮಕ್ಕಳು ಭವಿಷ್ಯದಲ್ಲಿ ಹಠಾತ್‌ ಹೃದಯ ಸ್ತಂಭನಕ್ಕೆ ಒಳಗಾಗುತ್ತಾರೆ. ಈ ರೀತಿಯ ಸಮಸ್ಯೆಗಳನ್ನು “ ಜನ್ಮಜಾತ ಹೃದಯ ದೋಷಗಳು” ಎನ್ನಲಾಗುತ್ತದೆ. ಈ ದೋಷಗಳು ಹೃದಯದಲ್ಲಿ ಸಾಮಾನ್ಯ ರಕ್ತದ ಹರಿವನ್ನು ಅಡ್ಡಿಪಡಿಸುವ ಮುಖಾಂತರ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ.ಇದು ಕೂಡ ಮಕ್ಕಳಲ್ಲಿ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣವಾಗಿರಬಹುದು.

ಹಠಾತ್ ಶಿಶು ಮರಣ ಸಿಂಡ್ರೋಮ್ (SIDS):
ಮಕ್ಕಳು ಹುಟ್ಟಿದ ಕೆಲವೇ ಗಂಟೆ ಅಥವಾ ದಿನಗಳಲ್ಲಿ ಹಠಾತ್‌ ಆಗಿ ಮರಣ ಹೊಂದುವುದು ಕೂಡ ಇದೆ. ನಿದ್ರೆಯ ಸಮಯದಲ್ಲಿ ಈ ಹಠಾತ್ ಶಿಶು ಮರಣ ಸಿಂಡ್ರೋಮ್( SIDS) ಆರೋಗ್ಯಕರ ಶಿಶುವಿನ ಹಠಾತ್ ಆಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಹೀಗೆ ಹಠಾತ್‌ ಸಾವಿಗೆ ನಿಖರವಾದ ಮಾಹಿತಿ ಇನ್ನು ದೊರೆತಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದರ ಜೊತೆಗೆ ಆಮ್ಲಜನಕದ ಕೊರತೆಯಿಂದಾಗಿ ಕೂಡ ಮಕ್ಕಳು ಹೃದಯ ಸ್ತಂಭನವನ್ನು ಅನುಭವಿಸುತ್ತಾರೆ.

ಮಕ್ಕಳಲ್ಲಿ ಹೃದಯ ಸ್ತಂಭನ ಉಂಟಾಗಲು ಕಾರಣಗಳಾಗಿದ್ದು, ಹಾಗಾಗಿ ಮಕ್ಕಳ ಆರೋಗ್ಯದಲ್ಲಿ ಸಣ್ಣ ಏರುಪೇರು ಉಂಟಾದರೂ ಕೂಡ ವೈದ್ಯರ ಸಲಹೆ,ಇಲ್ಲವೇ ವೈದ್ಯರ ಜೊತೆಗೆ ಸಮಾಲೋಚನೆ ನಡೆಸುವುದು ಉತ್ತಮ.

Leave A Reply

Your email address will not be published.