Spandana Vijay: ಪಂಚಭೂತಗಳಲ್ಲಿ ಸ್ಪಂದನ ಲೀನ!

sandalwood news spandana vijay raghavendra death final rituals done by son sourya

Spandana Vijay: ವಿಜಯ್ ರಾಘವೇಂದ್ರ ಅವರ ಮುದ್ದಿನ ಮಡದಿ ಸ್ಪಂದನಾ ವಿಜಯ್​ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ​ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಬೆಂಗಳೂರಿನ ಶ್ರೀರಾಮ್‌ಪುರದಲ್ಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಸಾವಿರಾರು ಮಂದಿಯ ಸಮ್ಮುಖದಲ್ಲಿ ಸ್ಪಂದನಾ ಅವರ ಅಂತಿಮ ಕಾರ್ಯಗಳನ್ನು ಪೂರ್ಣಗೊಳಿಸಿ ಭಾವುಕರಾಗಿದ್ದ ಇಡೀ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ವಿಜಯ್​ ರಾಘವೇಂದ್ರ, ಮಗ ಶೌರ್ಯ, ತಂದೆ ಬಿಕೆ ಶಿವರಾಂ, ಮಾವ ಎಸ್​ಎ ಚಿನ್ನೇಗೌಡ, ಮೈದುನ ಶ್ರೀಮುರಳಿ, ನಟ ಶಿವಾರಜ್​ಕುಮಾರ್​ ಹಾಗೂ ಕುಟುಂಬದವರು, ಆಪ್ತರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಈಡಿಗ ಸಂಪ್ರದಾಯದ ಅನುಸಾರ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಮೃತದೇಹವನ್ನು ಹರಿಶ್ಚಂದ್ರ ಘಾಟ್​ನ ರುದ್ರಭೂಮಿಯ ವಿದ್ಯುತ್​ ಚಿತಾಗಾರದಲ್ಲಿ ದೇಹದಹನ ಮಾಡಲಾಯಿತು. ಸ್ಪಂದನ ಅವರ ಪುತ್ರ ಶೌರ್ಯ ತನ್ನ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

Leave A Reply

Your email address will not be published.