ಮೂರೇ ತಿಂಗಳಲ್ಲಿ ಸ್ಯಾಂಡಲ್ ವುಡ್ ನಟಿ ಮಾಲಾಶ್ರೀಯ ಬೇಡಿಕೆ ಈಡೇರಿಸಿದ ಕೊರಗಜ್ಜ: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಂದು ಹರಕೆ ತೀರಿಸಿದ ನಟಿ ಮಾಲಶ್ರೀ !

spiritual-news-actress-malashree-visit-koragajja-temple

Koragajja: ಕರಾವಳಿ ಭಾಗದ ಜನರಲ್ಲಿ ತುಳು ಆಚರಣೆ, ದೈವದ ಮೇಲೆ ವಿಶೇಷವಾದ ನಂಬಿಕೆಯಿದೆ.ನಂಬಿದ ದೇವರು(Lord )ಕೈ ಬಿಟ್ಟರು ದೈವ ಎಂದಿಗೂ ನಮ್ಮ ಕೈ ಬಿಡುವುದಿಲ್ಲ ಎನ್ನುವ ಬಲವಾದ ನಂಬಿಕೆ ಜನರಲ್ಲಿ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಕೊರಗಜ್ಜನ( Koragajja)ಪವಾಡಗಳು ಕೂಡ ನಡೆಯುತ್ತಿರುತ್ತವೆ.ಇದೀಗ, ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಶ್ರೀ (Malashri )ಮತ್ತು ಅವರ ಪುತ್ರಿ ಅನನ್ಯಾ ಭೇಟಿ ನೀಡಿ ಹರಕೆ ತೀರಿಸಿ ದೈವದ ಆಶೀರ್ವಾದ ಪಡೆದಿದ್ದಾರೆ.

ಮೂರು ತಿಂಗಳ ಹಿಂದೆ ಕೊರಗಜ್ಜನ ಕಟ್ಟೆಗೆ ಬಂದು ಇಷ್ಟಾರ್ಥ ಸಿದ್ಧಿಗೆ ನಟಿ ಮಾಲಾ ಶ್ರೀ ಪ್ರಾರ್ಥನೆ ಸಲ್ಲಿಸಿದ್ದರು. ಆ ಬಳಿಕ ಎಲ್ಲವೂ ಅಚಾತುರ್ಯವೆಂಬ(miracle )ರೀತಿ ಪವಾಡ ನಡೆಯಿತು. ಕ್ಷೇತ್ರದ ಶಕ್ತಿಯ ಬಗ್ಗೆ ಹೇಳಲು ಅಸಾಧ್ಯ. ಈ ಪುಣ್ಯ ಕ್ಷೇತ್ರದಲ್ಲಿ ಬಹಳಷ್ಟು ಸಕಾರಾತ್ಮಕ ಶಕ್ತಿಯಿದ್ದು(Positive Vibes), ದೈವಸ್ಥಾನದ ಒಳ ಪ್ರವೇಶಿಸುತ್ತಿದ್ದಂತೆ ಸಾನಿಧ್ಯದ ವಿಶೇಷ ಶಕ್ತಿಯ ಅನುಭವವಾಗುತ್ತದೆ. ತಮ್ಮ ಬೇಡಿಕೆ ಈಡೇರಿದ ಸಲುವಾಗಿ ಹರಕೆ ತೀರಿಸುವ ಜೊತೆಗೆ ಮತ್ತೆ ದೈವದ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ನಟಿ ಮಾಲಾಶ್ರೀ ಕುಟುಂಬ ಮತ್ತು ಸ್ನೇಹಿತರ ಸಮೇತ ಬಂದಿದ್ದು, ಇನ್ನೂ ಮುಂದೆಯೂ ಬರುತ್ತಿರುತ್ತೇನೆ ಎಂದು ತಿಳಿಸಿದ್ದಾರೆ. ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ದೈವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಸಮಿತಿಯ ಟ್ರಸ್ಟಿಗಳು ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದ್ದಾರೆ.

Leave A Reply

Your email address will not be published.