Kerala State Name Change: ದೇವರ ನಾಡು ʼಕೇರಳʼ ಇನ್ನು ಮುಂದೆ ಕೇರಳ ಅಲ್ಲ, ಮಹತ್ವದ ಬದಲಾವಣೆ ತಂದ ಸರಕಾರ! ಹೊಸ ಹೆಸರೇನು ಗೊತ್ತೇ?

Kerala State name change news unanimous resolution in Kerala assembly approves official name change

Kerala State Name Change: ದಕ್ಷಿಣ ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿರುವ ಕೇರಳವನ್ನು (Kerala) ದೇವರನಾಡು ಎಂದು ಕರೆಯಲಾಗುತ್ತದೆ. ಆದರೆ, ಇದೀಗ ದೇವರ ನಾಡು ʼಕೇರಳʼ ರಾಜ್ಯದ ಹೆಸರು ಬದಲಾವಣೆ (Kerala State Name Change) ಮಾಡಲು ನಿರ್ಧರಿಸಲಾಗಿದೆ. ʼಕೇರಳʼ ಇನ್ನು ಮುಂದೆ ಕೇರಳ ಅಲ್ಲ, ಈ ಬಗ್ಗೆ ಸರ್ಕಾರ ಮಹತ್ವದ ಬದಲಾವಣೆ ತಂದಿದೆ! ಹಾಗಾದ್ರೆ ಕೇರಳದ ಬದಲಾಗಿ ಬಂದಿರುವ ಹೊಸ ಹೆಸರೇನು ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ.

ಹೆಸರು ಬದಲಾವಣೆಗೆ ಕೇರಳ ವಿಧಾನಸಭೆ ಸರ್ವಾನುಮತದಿಂದ ನಿರ್ಣಯ ಅಂಗೀಕಾರ ಮಾಡಿದೆ. ಇನ್ನು ಮುಂದೆ ಕೇರಳ ಹೆಸರು ‘ಕೇರಳಂ’ (keralum) ಎಂದು ಬದಲಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ವಿಧಾನಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 118 ರ ಅಡಿಯಲ್ಲಿ ಸದನದಲ್ಲಿ ನಿರ್ಣಯದ ವಿಷಯಗಳನ್ನು ಮಂಡಿಸಿದರು.

ಕೇರಳ ವಿಧಾನಸಭೆಯು ಸಂವಿಧಾನದಲ್ಲಿ ತಿದ್ದುಪಡಿಯನ್ನು ಕೋರಿದೆ. ಮಲಯಾಳಂನಲ್ಲಿ ‘ಕೇರಳಂ’ ಎಂಬುದು ಸ್ವೀಕಾರಾರ್ಹ ಮತ್ತು ಸಾಮಾನ್ಯ ಬಳಕೆಯಾಗಿದ್ದರೂ, ಅಧಿಕೃತ ದಾಖಲೆಗಳಲ್ಲಿ ರಾಜ್ಯವನ್ನು ಸಾಮಾನ್ಯವಾಗಿ ‘ಕೇರಳ’ ಎಂದು ಉಲ್ಲೇಖಿಸಲಾಗುತ್ತದೆ. ಮಲಯಾಳಂನಲ್ಲಿ ರಾಜ್ಯದ ಹೆಸರು ‘ಕೇರಳಂ.’ ಸಂವಿಧಾನದ ಮೊದಲ ಶೆಡ್ಯೂಲ್ ರಾಜ್ಯದ ಹೆಸರನ್ನು ‘ಕೇರಳ’ ಎಂದು ಗುರುತಿಸಿದೆ. ಸಂವಿಧಾನದ 3 ನೇ ಪರಿಚ್ಛೇದದ ಅಡಿಯಲ್ಲಿ ಅದನ್ನು ‘ಕೇರಳಂ’ ಎಂದು ತಿದ್ದುಪಡಿ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಹಾಗೂ ಎಂಟನೇ ಶೆಡ್ಯೂಲ್‌ನಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ‘ಕೇರಳಂ’ ಎಂದು ಬಳಕೆಯನ್ನು ಬದಲಾಯಿಸುವಂತೆ ನಿರ್ಣಯವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೇರಳದ ಮೊದಲ ಹೆಸರು ತಿರುವಾಂಕೂರು-ಕೊಚ್ಚಿನ್ ಎಂದಾಗಿತ್ತು. ಜುಲೈ 1, 1949 ರಂದು ಅಸ್ತಿತ್ವಕ್ಕೆ ಬಂದಿತು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂದಿತು.
ಅಂದಹಾಗೆ ಕೇರಳ ರಾಜ್ಯ ಹೆಸರು ಬದಲಾವಣೆ ಮಾಡಿಕೊಂಡ ಮೊದಲ ರಾಜ್ಯವೇನಲ್ಲ. ಈವರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳು ಹೆಸರು ಬದಲಾವಣೆ ಮಾಡಿಕೊಂಡವೆ.

ಇದನ್ನೂ ಓದಿ: Udupi Toilet Case:ಉಡುಪಿ ಖಾಸಗಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ; ಎಡಿಜಿಪಿಯಿಂದ ಮಹತ್ವದ ಹೇಳಿಕೆ

Leave A Reply

Your email address will not be published.