UPI transactions: ಆರ್‌ಬಿಐನಿಂದ ಯುಪಿಐ ಪಾವತಿ ಕುರಿತು 3 ಮಹತ್ತರ ಘೋಷಣೆ! ಏನದು? ಇಲ್ಲಿದೆ ಕಂಪ್ಲೀಟ್‌ ವಿವರ

RBI news AI Technology offline payment RBI announced new features to revolutionize UPI payment system

UPI Transactions: ಇತ್ತೀಚೆಗೆ ಯುಪಿಐ (UPI) ವ್ಯವಸ್ಥೆಯ ಹವಾ ಹೆಚ್ಚಿದೆ. ಈ ವ್ಯವಸ್ಥೆಯಿಂದ ಜನರಿಗೆ ಸಾಕಷ್ಟು ಪ್ರಯೋಜನಗಳಾಗಿವೆ. ಇದರ ಸಹಾಯದಿಂದ ಹೋದ ಕಡೆಯೆಲ್ಲಾ ಕೈಯಲ್ಲಿ ಚಿಲ್ಲರೆ, ನೋಟು ಹಿಡಿದುಕೊಂಡು ಹೋಗುವ ಪ್ರಮೇಯವೇ ಬರುವುದಿಲ್ಲ. ಇದೀಗ ಆರ್‌ಬಿಐನಿಂದ ಯುಪಿಐ ಪಾವತಿ (UPI Transactions) ಕುರಿತು 3 ಮಹತ್ತರ ಘೋಷಣೆಯಾಗಿದೆ. ಏನದು ಎಂಬ ಕುತೂಹಲ ನಿಮಗೂ ಇದ್ದರೆ ಇಲ್ಲಿದೆ ನೋಡಿ ಈ ಬಗ್ಗೆ ಕಂಪ್ಲೀಟ್‌ ವಿವರ.

ಆಫ್​ಲೈನ್ ಫೀಚರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI Technology) ಸೇರಿದಂತೆ ಯುಪಿಐ ಪಾವತಿ ವ್ಯವಸ್ಥೆಯಲ್ಲಿ 3 ಗಮನಾರ್ಹ ಫೀಚರ್ ಅನ್ನು ಆರ್ ಬಿಐ ಘೋಷಿಸಿದೆ. ಇದರಿಂದ ಜನಸಾಮಾನ್ಯರ ಹಣಕಾಸು ವಹಿವಾಟು ಕಾರ್ಯವೂ ಇನ್ನಷ್ಟು ಸುಗಮಗೊಳ್ಳಲಿದೆ.

ಆಗಸ್ಟ್ 8ರಿಂದ 10ರವರೆಗೆ 3 ದಿನಗಳ ಕಾಲ ಆರ್​ಬಿಐನ (RBI) ಎಂಪಿಸಿ ಸಭೆ ನಡೆದಿದ್ದು, ಈ ವೇಳೆ ಯುಪಿಐ ಬಲಪಡಿಸುವ ನಿಟ್ಟಿನಲ್ಲಿ ಹೊಸ ಫೀಚರ್​ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಯುಪಿಐ ಪಾವತಿಯಲ್ಲಿ ಎಐ ತಂತ್ರಜ್ಞಾನದ ವ್ಯವಸ್ಥೆ, ಯುಪಿಐ ಲೈಟ್​ನ ಆಫ್​ಲೈನ್ ಬಳಕೆ ಹಾಗೂ ಯುಪಿಐ ಲೈಟ್​ನ ವಹಿವಾಟು ಮಿತಿ ಹೆಚ್ಚಳದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇಂದು (ಆಗಸ್ಟ್ 10) ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ಪ್ರಕಟಿಸಿದ್ದಾರೆ.

ನಿಯರ್ ಫೀಲ್ಡ್ ಕಮ್ಯೂನಿಕೇಶನ್ (NFC) ತಂತ್ರಜ್ಞಾನದ ಸಹಾಯದಿಂದ ಇಂಟರ್ನೆಟ್ ಇಲ್ಲದೆಯೂ ಯುಪಿಐ ಲೈಟ್ ಮೂಲಕ ಹಣದ ಪಾವತಿ ಮಾಡಬಹುದು. ಯುಪಿಐ ಲೈಟ್​ನಲ್ಲಿ ಈ ಎನ್​ಎಫ್​ಸಿ ತಂತ್ರಜ್ಞಾನದ ಅಳವಡಿಕೆಯಾಗಲಿದೆ.

ಯುಪಿಐನಲ್ಲಿ ಸಂವಾದನೀಯ ಪಾವತಿ ಅಥವಾ ಕಾನ್ವರ್ಸೇಶನಲ್ ಪೇಮೆಂಟ್ಸ್ ಎಂಬ ಹೊಸ ಫೀಚರ್ ಅಳವಡಿಸಲು ಆರ್​ಬಿಐ ಯೋಜಿಸಿದೆ. ಈ ಫೀಚರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಕ್ತಿ ಇರುವ ಸಿಸ್ಟಂ ಸಹಾಯದಿಂದ ಸಂವಾದದ ಮೂಲಕ ಹಣದ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ. ಈ ಫೀಚಲ್ ಸ್ಮಾರ್ಟ್ ಫೋನ್ ಮಾತ್ರವಲ್ಲದೇ ಫೋನ್​ನಲ್ಲೂ ಇದು ಲಭ್ಯ ಇರಲಿದೆ. ಆರಂಭಿಕ ಪ್ರಯೋಗದಲ್ಲಿ ಇದು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂವಾದಕ್ಕೆ ಅವಕಾಶ ಇರುತ್ತದೆ. ಮುಂಬರುವ ದಿನಗಳಲ್ಲಿ ಕನ್ನಡವೂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲೂ ಇದರ ಸೇವೆ ಲಭ್ಯ ಇರುತ್ತದೆ ಎಂದು ಆರ್​ಬಿಐ ಹೇಳಿದೆ.

ಇನ್ನು ಎನ್​ಪಿಸಿಐ ಅಭಿವೃದ್ಧಿಪಡಿಸಿರುವ ಯುಪಿಐ ಲೈಟ್​ನಲ್ಲಿ 200 ರೂವರೆಗಿನ ಮೊತ್ತದ ವಹಿವಾಟನ್ನು ಮಾಡಬಹುದು. ಈಗ ಈ ಮಿತಿಯನ್ನು 500 ರೂಗೆ ಏರಿಸಲಾಗಿದೆ. ಆದರೆ, ಯುಪಿಐ ಲೈಟ್​ನ ಖಾತೆಯಲ್ಲಿ ಇರಿಸಬಹುದಾದ ಗರಿಷ್ಠ ಹಣದ ಮಿತಿ 2,000 ರೂನಲ್ಲೇ ಮುಂದುವರಿಯುತ್ತದೆ.

ಇದನ್ನೂ ಓದಿ: PayCM ಆಯಿತು ಈಗ Pay CS ಬಾರಿ; ಕಾಂಗ್ರೆಸ್‌ ವಿರುದ್ಧ ಬಿಜೆಪಿ ನೀಡಿದೆ ಹೊಸ ಠಕ್ಕರ್!‌

Leave A Reply

Your email address will not be published.