Udupi Toilet Case:ಉಡುಪಿ ಖಾಸಗಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ; ಎಡಿಜಿಪಿಯಿಂದ ಮಹತ್ವದ ಹೇಳಿಕೆ

Udupi news CID adgp Manish kharbikar talks about Udupi college washroom video case

Udupi washroom Case:ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದ್ದ ಉಡುಪಿ (Udupi) ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ (Udupi washroom Case) ಚಿತ್ರೀಕರಣ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ(CID) ವಹಿಸಿದೆ. ಇದೀಗ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.

ಈ ತನಿಖೆಯ ಭಾಗವಾಗಿ ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ಇಂದು (ಆಗಸ್ಟ್ 10) ಉಡುಪಿಯ ಅಂಬಲಪಾಡಿಯಲ್ಲಿರುವ ಕಾಲೇಜಿಗೆ ಭೇಟಿ ನೀಡಿದ್ದು, ಪ್ರಕರಣದ ತನಿಖೆಯನ್ನು ಉಡುಪಿ ಎಸ್​ಪಿಯಿಂದ ಮಾಹಿತಿ ಪಡೆದು ಕಾಲೇಜಿಗೆ ಭೇಟಿ ನೀಡಿದ ಮನೀಶ್ ಕರ್ಬೀಕರ್ ಅವರು ಪರಿಶೀಲನೆ ನಡೆಸಿದ್ದಾರೆ. ಅಷ್ಟೆ ಅಲ್ಲದೇ, ಶೌಚಾಲಯದಲ್ಲಿ ವಿಡಿಯೋ (Video)ಚಿತ್ರೀಕರಣ ನಡೆಸಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಕಾಲೇಜು ಆಡಳಿತಾಧಿಕಾರಿಯಿಂದ(College)ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರು ನಡೆಸಿದ ತನಿಖೆ ರಿಪೋರ್ಟ್ ಪಡೆದುಕೊಳ್ಳಲಿದ್ದು, ಪೊಲೀಸ್ ಮತ್ತು ಸಿಐಡಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದು, ಮುಂದೆ ನಡೆಯಲಿರುವ ಚರ್ಚೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ತನಿಖಾಧಿಕಾರಿಯಾಗಿ ಸಿಐಡಿ ಡಿವೈಎಸ್ಪಿ ಅಂಜುಮಾಲ ಅವರು ನೇಮಕ ಮಾಡಲಾಗಿದೆ. ತನಿಖೆಯ ಮೇಲ್ವಿಚಾರಣೆಯನ್ನು ಸಿಐಡಿ ಎಸ್.ಪಿ ರಾಘವೇಂದ್ರ ಹೆಗಡೆ ಅವರು ಮಾಡುತ್ತಿದ್ದು, ಶೀಘ್ರದಲ್ಲೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತನಿಖಾಧಿಕಾರಿಯವರಿಗೆ ಮಾಹಿತಿ ನೀಡಲಿದ್ದಾರೆ. ಪ್ರಕರಣದ ತನಿಖೆಯಾದ ಬಳಿಕ ಕೋರ್ಟಿಗೆ ಮುಂದಿನ ವರದಿ ನೀಡಲಿದ್ದು, ಮೂರು ಮೊಬೈಲ್ ಎಫ್ಎಸ್ಎಲ್ ವರದಿ ತನಿಖೆಯ ಒಂದು ಭಾಗವಾಗಿ ನಾವು ತೆಗೆದುಕೊಳ್ಳುತ್ತೇವೆ ಎಂದು ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ರವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Pooja Bhat: ಮೈಮೇಲೆ ಒಂದುಚೂರು ಬಟ್ಟೆಯಿಲ್ಲದೆ ಪೇಂಟ್ ನಿಂದ ತನ್ನ ಮಾನ ಮುಚ್ಚಿದ ನಟಿ!!!

Leave A Reply

Your email address will not be published.