Yuva Nidhi Scheme:’ಯುವನಿಧಿ ಯೋಜನೆʼ ಈ ದಿನದಂದು ಜಾರಿ; ಸಿಎಂ ಮಹತ್ವದ ಹೇಳಿಕೆ

Yuva Nidhi Scheme Yuvanidhi Yojana implemented on this day CM Siddaramaiah announcement

Yuva Nidhi Scheme:ಕಾಂಗ್ರೆಸ್ ನ (Congress)ಈ ಐದು ಗ್ಯಾರೆಂಟಿಗಳ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದೆ. ಈಗಾಗಲೆ ಮೂರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದರಲ್ಲಿಯು ಬಹು ನಿರೀಕ್ಷಿತ ‘ಗೃಹ ಜ್ಯೋತಿ’(Gruha Jyothi Scheme) ಯೋಜನೆಗೆ ಆಗಸ್ಟ್ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddaramaiah)ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದೀಗ, ಇನ್ನುಳಿದ ಎರಡು ಗ್ಯಾರಂಟೀ ಯೋಜನೆಗಳ ಬಗ್ಗೆ ಸಿಎಂ ಬಿಗ್ ಅಪ್ಡೇಟ್ ನೀಡಿದ್ದಾರೆ.

ಈಗಾಗಲೇ 3 ಗ್ಯಾರಂಟಿ ಜಾರಿಯಾಗಿದ್ದು, ಆಗಸ್ಟ್ 24 ರಂದು 4 ನೇ ಗ್ಯಾರಂಟಿ ಯೋಜನೆ ಜಾರಿಯಾಗಲಿದೆ. 5ನೇ ಗ್ಯಾರಂಟಿಯಾದ ಡಿಪ್ಲೋಮಾ(Diploma), ಪದವೀಧರರಿಗೆ ನೀಡುವ 1,500 ರೂ. ಹಾಗೂ 3000 ರೂ. ನೀಡುವ ಯುವ ನಿಧಿ ಯೋಜನೆಯನ್ನು (Yuva Nidhi)ಡಿಸೆಂಬರ್ ಇಲ್ಲವೇ ಜನವರಿ 2024 ರಲ್ಲಿ ಜಾರಿಯಾಗುವ ಸಂಭವದ ಕುರಿತು ಸಿಎಂ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.

ಕೆ.ಎ.ಎಸ್. ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟನೆ ಮಾಡಿದ ಬಳಿಕ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಮಾಹಿತಿ ನೀಡಿದ್ದು, ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯನ್ನು ನೀಡಿದ್ದು, ಆಗಸ್ಟ್ 24ರಂದು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಮತ್ತು ಯುವನಿಧಿ ಯೋಜನೆ (Yuva Nidhi Scheme)
ಡಿಸೆಂಬರ್ ಇಲ್ಲವೇ ಜನವರಿ 2024 ರಲ್ಲಿ ಜಾರಿಯಾಗುವ ಸಂಭವ ಹೆಚ್ಚಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ATM ವಿತ್ ಡ್ರಾ ನಿಯಮದಲ್ಲಿ ಬದಲಾವಣೆ! ದೇಶದ ಮುಖ್ಯ ಬ್ಯಾಂಕ್ಗಳು ವಿಧಿಸುವ ಎಟಿಎಂ ವಿತ್ ಡ್ರಾ ಮಿತಿ ಎಷ್ಟು?

Leave A Reply

Your email address will not be published.