ಲಾರಿಗೆ ಮಿನಿಟ್ರಕ್‌ ಡಿಕ್ಕಿ; ದೇವರ ದರ್ಶನಕ್ಕೆ ಹೋದ ಒಂದೇ ಕುಟುಂಬದ 9 ಜನ ಸ್ಥಳದಲ್ಲೇ ಸಾವು!

Ahmedabad news update 10 killed in a serious accident near bavla bagodara in Ahmedabad

Ahmedabad: ಕಳೆದ ರಾತ್ರಿ ಭೀಕರ ರಸ್ತೆ ಅಪಘಾತವೊಂದರಲ್ಲಿ ಕನಿಷ್ಠ 10 ಮಂದಿ ಮೃತಹೊಂದಿದ್ದು, ಐವರು ಗಾಯಗೊಂಡಿರುವ ಘಟನೆಯೊಂದು ಅಹಮದಾಬಾದ್‌ನ(Ahmedabad) ಬಾವ್ಲಾ-ಬಗೋದ್ರಾ ಹೆದ್ದಾರಿಯಲ್ಲಿ ನಡೆದಿದೆ.

ರೈತ ಕುಟುಂಬವೊಂದು ದೇವರ ದರ್ಶನ ಮುಗಿಸಿ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮಿನಿಟ್ರಕ್‌ವೊಂದರಲ್ಲಿ ತಮ್ಮ ಊರಾದ ಚೋಟಿಲಾ ಗ್ರಾಮದ ಕಡೆ ಹೋಗುತ್ತಿತ್ತು. ಆದರೆ ಯಮದೂತ ರಸ್ತೆಯಲ್ಲಿ ಲಾರಿ ರೂಪದಲ್ಲಿ ಇತ್ತು. ಹೌದು, ಕತ್ತಲ ಸಮಯದಲ್ಲಿ ರಸ್ತೆಯ ಬಳಿ ನಿಂತಿದ್ದ ಲಾರಿಗೆ ಟ್ರಕ್‌ ಹಿಂದಿನಿಂದ ಬಂದ ಡಿಕ್ಕಿ ಹೊಡೆದಿದೆ.

ಈ ಭೀಕರ ಅಪಘಾತದಲ್ಲಿ ಹತ್ತು ಜನರು ಸ್ಥಳದಲ್ಲೇ ಮೃತರಾಗಿದ್ದಾರೆ. ಅದರಲ್ಲೂ ಇದರಲ್ಲಿ ಒಂಭತ್ತು ಜನರು ಒಂದೇ ಕುಟುಂಬದವರೆಂದು ಹೇಳಲಾಗಿದೆ. ಉಳಿದ ಹಾಗೆ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ: Jayaprada: ಹಿರಿಯ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ!

Leave A Reply

Your email address will not be published.