Bank Holidays This Week: ರಜೆ ಎಫೆಕ್ಟ್ ! ಬ್ಯಾಂಕ್ ಗೆ ನಾಳೆಯಿಂದ ಸಾಲು ಸಾಲು ರಜೆ! ಖಾಸಗಿ ಬಸ್ ಜೊತೆ ಸರಕಾರಿ ಬಸ್ ಟಿಕೆಟ್ ದರ ಏರಿಕೆ!!!

Bank holidays in August 2023 bank holidays in this week check details in Kannada

Bank Holidays This Week: ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ(Que) ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದುಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

ವಿವಿಧ ಹಬ್ಬಗಳಿರುವುದರಿಂದಗಳಿರುವುದರಿಂದ ನಾಳೆಯಿಂದ ಬ್ಯಾಂಕ್ ರಜೆ (Bank Holidays)ಹೀಗಾಗಿ ಬ್ಯಾಂಕ್ ಗೆ (bank)ಭೇಟಿ ನೀಡುವ ಮುನ್ನ ರಜೆಯ ಬಗ್ಗೆ ತಿಳಿದುಕೊಳ್ಳಿ. ನಾಳೆಯಿಂದ ಅಂದರೆ ಆಗಸ್ಟ್ 12 ರಿಂದ 18 ರವರೆಗೆ 5 ದಿನಗಳವರೆಗೆ ಬ್ಯಾಂಕ್ ರಜೆಯಿರಲಿದೆ. ಬ್ಯಾಂಕ್ ರಜಾ ಪಟ್ಟಿಯ ಅನುಸಾರ, ಈ ರಜೆ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಬೇರೆ ರೀತಿ ಇರುತ್ತದೆ.

ಆಗಸ್ಟ್ 12- (ಶನಿವಾರ) ಎರಡನೇ ಶನಿವಾರದ ಹಿನ್ನೆಲೆ ಬ್ಯಾಂಕುಗಳು ರಜೆ ಇರಲಿದೆ.
ಆಗಸ್ಟ್ 13 – (ಭಾನುವಾರದ ರಜೆ)
ಆಗಸ್ಟ್ 15 – (ಮಂಗಳವಾರ)ಸ್ವಾತಂತ್ರ್ಯ ದಿನಾಚರಣೆಯ ರಜೆ.
ಆಗಸ್ಟ್ 16 – (ಬುಧವಾರ) – ಪಾರ್ಸಿ ಹೊಸ ವರ್ಷದ (ಶಹೆನ್ ಶಾಹಿ)ಮಹಾರಾಷ್ಟ್ರದ ಬ್ಯಾಂಕುಗಳಿಗೆ ರಜೆಯಿರಲಿದೆ.
ಆಗಸ್ಟ್ 18 – (ಶುಕ್ರವಾರ) – ಶ್ರೀಮಂತ ಶಂಕರದೇವ ದಿನಾಚರಣೆ ಹಿನ್ನೆಲೆ ಅಸ್ಸಾಂನಲ್ಲಿ ಬ್ಯಾಂಕುಗಳಿಗೆ ರಜೆಯಿರಲಿದೆ.

ಈ ವಾರದಲ್ಲಿ ಸಾಲು ಸಾಲು ರಜೆಯಿದ್ದು, ನೀವು ಬ್ಯಾಂಕ್ ಕೆಲಸಕ್ಕೆ ಭೇಟಿ ನೀಡುವ ಮುನ್ನ ರಜೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಇದರ ಜೊತೆಗೆ ಆ.12, 13 ಮತ್ತು 15 ರ ತನಕ ರಜೆಗಳಿವೆ. ಸೋಮವಾರ 14 ನೇ ತಾರೀಕು ರಜೆ ಹಾಕಿಕೊಂಡರೆ ಸತತ 4 ದಿನಗಳ ಕಾಲ ರಜೆ ಸಿಗಲಿವೆ.ಹೀಗಾಗಿ, ಊರಿನ ಕಡೆಗೆ ಪಯಣ ಬೆಳೆಸುವವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಎರಡು ದಿನಗಳಿಂದ ಖಾಸಗಿ ಬಸ್‌ ಗಳ ಬುಕ್ಕಿಂಗ್‌ ಹೆಚ್ಚಾಗುತ್ತಿದೆ. ಈ ಕಾರಣದಿಂದ ಟಿಕೇಟ್ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದ್ದಾರೆ.

ಈ ರಜೆಯನ್ನು ಮಜಾ ಮಾಡಲು ಊರಿಗೆ ಹೊರಟವರಿಗೆ ಖಾಸಗಿ ಬಸ್‌ ಮಾಲೀಕರು(Private Bus)ಶಾಕ್‌ ನೀಡಿದ್ದು, ಬಸ್‌ ದರವನ್ನು ಡಬಲ್ ಮಾಡಿದ್ದಾರೆ. ಹೈದ್ರಾಬಾದ್‌, ಚೆನ್ನೈ, ಮಂಗಳೂರು, ಉತ್ತರ ಕನ್ನಡ, ಬೆಳಗಾವಿ, ಮುಂಬೈ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳೂ ಸೇರಿದಂತೆ ಅಂತರಾಜ್ಯದ ಟಿಕೇಟ್‌ ದರವನ್ನು (Ticket )ಡಬಲ್ ಮಾಡಲಾಗಿದೆ.

ಇಂದು ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುವ ದರ 600 – 1500 ರೂ.ವರೆಗೆ ಇದ್ದು, ನಾಳೆ ಮತ್ತು ನಾಡಿದ್ದು ಪ್ರಯಾಣಿಸುವವರಿಗೆ 1800 ರಿಂದ 2500 ರೂ. ಆಗಿರಲಿದೆ. ಇಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ರಾತ್ರಿ ಪ್ರಯಾಣಿಸುವವರಿಗೆ 600 – 800 ರೂ ವರೆಗೂ ಇದೆ. ನಾಳೆ ನಾಡಿದ್ದು, ಪ್ರಯಾಣಿಸುವವರಿಗೆ 1500- 2500 ರೂ ವರೆಗೂ ಟಿಕೆಟ್‌ ದರವಿದೆ. ಬೆಂಗಳೂರಿನಿಂದ ಬೆಳಗಾವಿಗೆ ಇಂದು ಪ್ರಯಾಣಿಸುವುದಾದರೆ ಟಿಕೇಟ್ ದರ 2000 ರೂ. ನಿಂದ ಇರಲಿದೆ. ನಾಳೆ, ನಾಡಿದ್ದು ಆದರೆ, ಟಿಕೇಟ್ ದರ 3000 ರೂ.ವರೆಗೆ ಇರಲಿದೆ. ಬೆಂಗಳೂರಿನಿಂದ ಚೆನ್ನೈಗೆ ಇಂದು ಪ್ರಯಾಣಿಸುವುದಾದರೆ 650 – 1000 ರೂ. ಇದೆ. ನಾಳೆ, ನಾಡಿದ್ದು ಪ್ರಯಾಣಿಸುವವರ ದರ 1500 ರಿಂದ 2000 ರೂ. ತನಕ ಇದೆ.

ಇದನ್ನೂ ಓದಿ: Independence Day 2023: ಈ ಬಾರಿಯ ರಾಷ್ಟ್ರಧ್ವಜ ತಯಾರಿಸುವ ಅವಕಾಶ ಗಿಟ್ಟಿಸಿಕೊಂಡಿದ್ದು ಯಾವ ಸಂಸ್ಥೆ ಗೊತ್ತಾ?

Leave A Reply

Your email address will not be published.