Independence Day 2023: ಈ ಬಾರಿಯ ಖಾದಿಯ ರಾಷ್ಟ್ರಧ್ವಜ ತಯಾರಿಸುವ ಅವಕಾಶ ಗಿಟ್ಟಿಸಿಕೊಂಡಿದ್ದು ಯಾವ ಸಂಸ್ಥೆ ಗೊತ್ತಾ?

Hubballi Dharwad news independence day 2023 garag Sangha another institute in Dharwad gets chance to make national flag

Independence Day 2023: ಇನ್ನೇನು ಸ್ವಾತಂತ್ಯ ದಿನಾಚರಣೆಯ ಸಂಭ್ರಮ ಕಳೆ ಕಟ್ಟಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಬಾರಿಯ ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆ (Independence Day 2023) ವೇಳೆ  ಇಡೀ ದೇಶಕ್ಕೆ ಖಾದಿಯ ರಾಷ್ಟ್ರಧ್ವಜ ತಯಾರಿಸಿ ಕೊಡುವ ಸುವರ್ಣ ಅವಕಾಶ ಧಾರವಾಡದ ಮತ್ತೊಂದು ಸಂಸ್ಥೆಗೆ ಲಭಿಸಿದೆ.

ಧಾರವಾಡ ಜಿಲ್ಲೆಯ ಗರಗ ಗ್ರಾಮದ ಗರಗ ಕ್ಷೇತ್ರೀಯ ಸೇವಾ ಸಂಘ ಈ ಬಾರಿಯ ಭಾರತದ ಖಾದಿ ರಾಷ್ಟ್ರಧ್ವಜ ತಯಾರಿಸುವ ಅವಕಾಶ (Opportunity)ಪಡೆದುಕೊಂಡಿದ್ದು, ಅಧಿಕೃತ ಮಾನ್ಯತೆಯನ್ನು ಪಡೆದಿದೆ.ಗರಗ ಸೇವಾ ಸಂಘ 1974ರಿಂದ ರಾಷ್ಟ್ರ ಧ್ವಜಕ್ಕೆ (National Flag)ಬೇಕಾದ ಬಟ್ಟೆಯನ್ನು ಸಿದ್ದ ಪಡಿಸುವ ಹೊಣೆಯನ್ನು ನಿಭಾಯಿಸುತ್ತಿತ್ತು. ಇಲ್ಲಿಯವರೆಗೆ ಬೆಂಗೇರಿಯ ಖಾದಿ ಸಂಘದಲ್ಲಿ ಮಾತ್ರ ರಾಷ್ಟ್ರ ಧ್ವಜವನ್ನು ಸಿದ್ದ ಪಡಿಸುವ ಹೊಣೆಯನ್ನು ನಿಭಾಯಿಸುತ್ತಿತ್ತು. ಇನ್ನು ಮುಂದೆ  ಗರಗ ಕ್ಷೇತ್ರೀಯ ಸೇವಾ ಸಂಘ(ಖಾದಿ ಸಂಘ) ದಲ್ಲಿ ಕೂಡ ಖಾದಿಯ ಧ್ವಜ ತಯಾರಾಗಲಿದೆ.

ಇದೀಗ, ಗರಗ ಕ್ಷೇತ್ರೀಯ ಸೇವಾ ಸಂಘ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಮಾನ್ಯತೆಯನ್ನ ಪಡೆದುಕೊಂಡಿದೆ. ಇಲ್ಲಿಯವರೆಗೆ ರಾಷ್ಟ್ರಧ್ವಜಕ್ಕೆ ಬಟ್ಟೆ ನೇಯ್ದು ಕೊಡುವ ಜೊತೆಗೆ ಅಶೋಕ ಚಕ್ರದ ಬಣ್ಣ ಮತ್ತು ಮುದ್ರಣ ಮಾಡುವ ಸಲುವಾಗಿ ಮುಂಬೈನ ಖಾದಿ ಡೈಯರ್‌ಗಳು ಮತ್ತು ಪ್ರಿಂಟರ್‌ಗಳಿಗೆ ರವಾನೆ ಮಾಡಿ ಧ್ವಜಗಳನ್ನು ಮಾರಾಟ ಮಾಡುವ ಕಾರ್ಯ ನಿರ್ವಹಿಸುತ್ತಿತ್ತು. ಈಗ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಬಟ್ಟೆ ನೇಯ್ಗೆ ಮತ್ತು ಸ್ವಂತವಾಗಿ ಬಣ್ಣ ಮತ್ತು ಮುದ್ರಣ ಮಾಡಲು ಪರವಾನಗಿ ಲಭ್ಯವಾಗಿದೆ.ಗರಗ ಸಂಘವು ಭಾರತೀಯ ಗುಣಮಟ್ಟಗಳ ಬ್ಯೂರೋದಿಂದ ಗುರುತಿಸಲ್ಪಟ್ಟ ಧಾರವಾಡ ಜಿಲ್ಲೆಯ ಎರಡನೇ ಘಟಕವಾಗಿ ಗುರುತಿಸಿಕೊಂಡಿದೆ.

ಗರಗ ಕ್ಷೇತ್ರೀಯ ಸೇವಾ ಸಂಘದಲ್ಲಿ 320 ಕಾರ್ಮಿಕರಿದ್ದು ಜೊತೆಗೆ ಈ ಸೇವಾ ಕೇಂದ್ರದಲ್ಲಿ 15 ವಿದ್ಯುತ್ ಹೊಲಿಗೆ ಯಂತ್ರಗಳಿವೆ. ಕೇಂದ್ರ ಖಾದಿ ಆಯೋಗದ ಸೂಚನೆಯ ಅನುಸಾರ, ಇಲ್ಲಿ ಸದ್ಯಕ್ಕೆ 2 ಅಡಿ x3 ಅಡಿ ಉದ್ದದ ಧ್ವಜಗಳನ್ನು ಸಿದ್ದಪಡಿಸಲಾಗುತ್ತದೆ. ಮುಂದಿನ ವರ್ಷ ಜೂನ್ ವೇಳೆಗೆ 3×4.5 ಅಡಿ ಹಾಗೂ 4×6 ಅಡಿ ಉದ್ದದ ಧ್ವಜ ತಯಾರಿಸಲು ಪರವಾನಗಿ ಪಡೆಯುವ ಸಂಭವವಿದೆ.

ಇದನ್ನೂ ಓದಿ: Toyota Rumion MPV Unveiled: ಕೇವಲ 10 ಲಕ್ಷದ ಒಳಗೆ ಟೋಯೋಟಾ ಇನ್ನೊವಾ ಮಾದರಿಯ ಕಾರು, ಇನ್ನು ಮಾರುತಿ ertiga ಕೇಳೋರೇ ಇಲ್ಲ

Leave A Reply

Your email address will not be published.