Varshini Sounderajan: ರೂಮಿಗೆ ಬಾ ಅಂದ, ಹೋದ್ರೆ ಕೈ ಹಿಡಿದು ಹಾಸಿಗೆಗೆ ಎಳೆದು, ಬಟ್ಟೆ….ಬಿಚ್ಚಿ: ನಿರೂಪಕಿ ಬಿಚ್ಚಿಟ್ಟ ರಹಸ್ಯ!

Entertainment Telugu tv anchor Varshini sounderajan about casting couch

Varshini Sounderajan : ಸಿನಿ ಜಗತ್ತಿನಲ್ಲಿ ಹೆಸರು ಮಾಡಿರುವ ಅದೆಷ್ಟೋ ನಟಿಯರು ತಮ್ಮ ಸಾಧನೆಯ ನಡುವೆಯೂ ಅನೇಕ ಅಡೆ ತಡೆಗಳನ್ನು, ಕರಾಳ ಅನುಭವಗಳನ್ನು ಹೊಂದಿದ್ದಾರೆ. ಕೆಲವರು ಇದರ ವಿರುದ್ದ ಧ್ವನಿ ಎತ್ತಿದ್ದರೆ, ಮತ್ತೆ ಕೆಲ ನಟಿಯರು ತಾವು ಅನುಭವಿಸಿದ ನರಕ ಯಾತನೆಯನ್ನು ಮೌನವಾಗಿ ಸಹಿಸಿಕೊಂಡು ಬಿಟ್ಟಿದ್ದಾರೆ. ಇದೀಗ, ತೆಲುಗು ಕಿರುತೆರೆಯ ಜನಪ್ರಿಯ ನಿರೂಪಕಿ ವರ್ಷಿಣಿ ಸೌಂದರ್‌ರಾಜನ್‌(Varshini Sounderajan) ಕಾಸ್ಟಿಂಗ್‌ ಕೌಚ್‌ ಕುರಿತು ಮಾತನಾಡಿದ್ದು, ವೆಬ್ ಸಿರೀಸ್ (Web Series) ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ (Social Media) ಹೆಚ್ಚು ಆಕ್ಟೀವ್ ಆಗಿರುವ ಸ್ಟಾರ್ ನಿರೂಪಕಿ (Anchor) ವರ್ಷಿಣಿ ತಮ್ಮ ಮೋಹಕ ಮೈಮಾಟದ ಜೊತೆಗೆ ಸುಮಧುರ ಧ್ವನಿಯಲ್ಲಿ ಎಲ್ಲರನ್ನೂ ಜಾದುಗೊಳಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.ಅದರಲ್ಲಿಯೂ ವಿಶೇಷವಾಗಿ ವರ್ಷಿಣಿ ಸೌಂದರ್‌ ರಾಜನ್‌ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಜೊತೆಗೆ, ತೆಲುಗಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಜನರ ಮನ ಗೆದ್ದಿದ್ದಾರೆ. ಧೀ ಶೋ ವರ್ಷಿಣಿ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿದೆ.

ಮನರಂಜನಾ ಜಗತ್ತಿನಲ್ಲಿಯು (Entertainment)ಕೂಡ ಕಾಸ್ಟಿಂಗ್‌ ಕೌಚ್‌ ವಿಚಾರ ಜೋರಾಗಿ ಸದ್ದು ಮಾಡುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ವರ್ಷಿಣಿ ಅವರು ಮಾಡಿರುವ ಆರೋಪ ಸದ್ಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಹೌದು!! ಕೆಲ ವರ್ಷಗಳ ಹಿಂದಿನ ಕಥೆಯನ್ನು ವರ್ಷಿಣಿ ಹೇಳಿಕೊಂಡಿದ್ದು, ತಮಗಾದ ಕರಾಳ ಅನುಭವವನ್ನು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಹಾಟ್ ಫೋಟೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ (Instagram) ಶೇರ್ ಮಾಡಿ ನೆಟ್ಟಿಗರ ಮನದಲ್ಲಿ ಥಕಥಳಿ ಮೂಡಿಸುವ ನಿರೂಪಕಿ ಕಿರುತೆರೆಯಲ್ಲಿ ಕೂಡ ಫೇಮಸ್!! ತಾನು ಕೂಡ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ ಎಂದು ವರ್ಷಿಣಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಇವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.ವೆಬ್‌ಸಿರೀಸ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಆಡಿಷನ್‌ಗಳನ್ನೂ ವರ್ಷಿಣಿ ನೀಡಿದ್ದರಂತೆ. ಲಾಕ್‌ಡೌನ್‌ಗೂ ಮೊದಲೇ ವೆಬ್ ಸೀರೀಸ್‌ನಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತ್ತಂತೆ.

ಹೀಗಾಗಿ, ಆಡಿಷನ್ ನೀಡುವ ಸಲುವಾಗಿ ವೆಬ್ ಸೀರೀಸ್ ನಿರ್ದೇಶಕ ಹೊಟೇಲ್ ಗೆ ಬರುವಂತೆ ಸೂಚಿಸಿದ್ದರಂತೆ. ಹೀಗಾಗಿ, ಹೋಟೆಲ್‌ಗೆ ಹೋಗಿದ್ದೆ. ಈ ವೇಳೆ ‘ನೀನು ನೋಡಲು ಬಹಳ ಸುಂದರವಾಗಿದ್ದೀಯ. ವೆಬ್‌ಸಿರೀಸ್‌ಗೆ ವರ್ಷಿಣಿ ಹೊಟೇಲ್ಗೆ (Hotel)ಹೋಗಿದ್ದಾಗ, ಆ ನಿರ್ದೇಶಕ ” ನೀನು ತುಂಬಾ ಚೆನ್ನಾಗಿದ್ದೀಯ, ಈ ಪಾತ್ರಕ್ಕೆ ಸೂಟ್‌ ಆಗಿತ್ತೀರಿ. ನಿಮ್ಮನ್ನು ನೋಡಿದ ಕ್ಷಣವೇ ನೀವು ಇದರಲ್ಲಿ ನಟಿಸಬಹುದು ಎಂದು ನಾನು ಅಂದುಕೊಂಡಿದ್ದೆ’ ಎಂದು ಹೇಳಿದ್ದರಂತೆ.

ಆ ನಿರ್ದೇಶಕರನ್ನು ಭೇಟಿಯಾದ ಸಂದರ್ಭದಲ್ಲಿ ನಿರ್ದೇಶಕ ವರ್ಷಿಣಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ವರ್ಷಿಣಿ ಗಂಭೀರ ಆರೋಪ ಮಾಡಿದ್ದಾರೆ. ಆ ನಿರ್ದೇಶಕರು ವರ್ಷಿಣಿಯನ್ನು ಹಾಸಿಗೆಯ ಮೇಲೆ ಮಲಗಲು ಹೇಳಿದ್ದಾರೆ. ಕೈಗಳನ್ನು ಹಿಡಿದುಕೊಂಡಿದ್ದ ಆತ ನನ್ನನ್ನು ಬೆಡ್‌ ಮೇಲೆ ದೂಡಿದ್ದಲ್ಲದೆ, ನಿನ್ನ ಮೈಮೇಲಿರುವ ಬಟ್ಟೆಗಳನ್ನು ತೆಗೆದು ಹಾಕಲು ಸೂಚಿಸಿದ್ದ ಎಂದು ನಿರ್ದೆಶಕನ ಬಗ್ಗೆ ನಿರೂಪಕಿ ಆರೋಪಿಸಿದ್ದಾರೆ. ಈ ವೇಳೆ ತುಂಬಾ ಭಯ,ಗಾಬರಿಯಾಗಿದ್ದ ನನಗೆ ಅಲ್ಲಿಂದ ಹೇಗಾದರು ತಪ್ಪಿಸಿಕೊಂಡು ಬಂದರೆ ಸಾಕು ಎಂದೆನಿಸಿ, ಅಲ್ಲಿಂದ ಹೇಗೋ ಹೊರ ಬಂದೆ. ಎಂದು ಹೇಳಿಕೊಂಡಿದ್ದು,ಆ ನಿರ್ದೇಶಕ ಯಾರು ಎಂಬುದನ್ನು ವರ್ಷಿಣಿ ಬಹಿರಂಗ ಪಡಿಸಿಲ್ಲ. ಒಟ್ಟಿನಲ್ಲಿ ತಾವು ಅನುಭವಿಸಿದ ಕರಾಳ ದಿನಗಳ ಬಗ್ಗೆ ನಿರೂಪಕಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: PayCM ಆಯಿತು ಈಗ Pay CS ಬಾರಿ; ಕಾಂಗ್ರೆಸ್‌ ವಿರುದ್ಧ ಬಿಜೆಪಿ ನೀಡಿದೆ ಹೊಸ ಠಕ್ಕರ್!‌

Leave A Reply

Your email address will not be published.