‘ಗೃಹಲಕ್ಷ್ಮೀ’ ನಿರೀಕ್ಷೆಯಲ್ಲಿರೋ ರಾಜ್ಯದ ಯಜಮಾನಿಯರಿಗೆ ಬಿಗ್ ಶಾಕ್- ಸದ್ಯಕ್ಕೆ ನಿಮಗಿಲ್ಲ 2000 ರೂ. !! ಕೊನೇ ಗಳಿಗೆಯಲ್ಲಿ ಹೊಸ ಟ್ವಿಸ್ಟ್

ಮಂಗಳೂರು : ರಾಜ್ಯ ಸರಕಾರದ ಮನೆ ಯಜಮಾನಿಗೆ ಮಾಸಿಕ 2000 ನೀಡುವ ಗೃಹಲಕ್ಷ್ಮೀ ಯೋಜನೆ ಇನ್ನಷ್ಟು ತಡವಾಗಲಿದೆ.ಅಕ್ಟೋಬರ್ 2 ಗಾಂಧಿ ಜಯಂತಿಯಂದು ಈ ಯೋಜನೆ ಜಾರಿಗೆ ಬರಲಿದೆ.

ಈ ವಿಚಾರವನ್ನು ಖುದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ದ.ಕ.ದ ಪುತ್ತೂರಿನ ಪುರಭವನದಲ್ಲಿ ಆ.11ರ ಶುಕ್ರವಾರ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಅವರು ಚಾಲನೆ ನೀಡಿ ಮಾತನಾಡಿದರು.

ರಾಜೀವ್‍ಗಾಂಧಿ ಅವರ ಜನ್ಮ ದಿನದಂದು ಗೃಹಲಕ್ಷ್ಮೀ ಯೋಜನೆ ಜಾರಿಗೆ ಬರಲಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ನೀಡಿರುವ ಇಷ್ಟು ದೊಡ್ಡ ಪ್ರಮಾಣದ ಯೋಜನೆ ಪ್ರತಿಯೊಬ್ಬ ವ್ಯಕ್ತಿಗೂ ಪ್ರಯೋಜನವಾಗಲಿದೆ. ಸರ್ಕಾರ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು

ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ, ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಬಾಕಿ ಉಳಿದಿರುವ ಗುರಿಯನ್ನು ಅತೀ ಶೀಘ್ರದಲ್ಲಿ ತಲುಪಲಾಗುವುದು ಎಂದು ಹೇಳಿದರು.

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್.ಕೆ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪದ್ಮಾವತಿ, ತಾಂತ್ರಿಕ ನಿರ್ದೇಶಕರಾದ ಎಚ್.ಜಿ. ರಮೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಭಾಗವಹಿಸಿದ್ದರು.

ಪುಷ್ಪ ಕೆ ವಂದಿಸಿದರು. ಬಾಲಕೃಷ್ಣ ಪೊರ್ಧಾಲ್ ನಿರೂಪಿಸಿದರು.

Leave A Reply

Your email address will not be published.