Vijay Deverakonda: ವಿಜಯ ರಾಘವೇಂದ್ರನ ಕುರಿತ ಪತ್ರಕರ್ತರ ಪ್ರಶ್ನೆಗೆ ವಿಜಯ್‌ ದೇವರಕೊಂಡ ನೀಡಿದ ಉತ್ತರವೇನು ಗೊತ್ತೇ?

Sandalwood news Actor Vijay devarakonda questions back journalist for ask about Vijay Raghavendra Khushi film

Vijay Deverakonda: ವಿಜಯ್ ದೇವರಕೊಂಡ(Vijay Deverakonda)ಮತ್ತು ಸಮಂತಾ ರುತ್ ಪ್ರಭು( Samantha Ruth Prabhu) ನಟನೆಯ ಖುಷಿ ಸಿನಿಮಾದ(Khushi Film)ಟ್ರೈಲರ್​ ರಿಲೀಸ್​ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ (Social Media)ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ.ವಿಜಯ್ ದೇವರಕೊಂಡ- ಸಮಂತಾ ಪತಿ-ಪತ್ನಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟು ಹಾಕಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಖುಷಿ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದ್ದು, ತೆಲುಗು, ತಮಿಳು, ಕನ್ನ ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಸೆಪ್ಟೆಂಬರ್ 11 ರಂದು ಬಹು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಖುಷಿ ಸಿನಿಮಾ ಪ್ರಚಾರ ಮಾಡುವ ಸಲುವಾಗಿ ಕರ್ನಾಟಕಕ್ಕೆ ಇಡೀ ತಂಡ ಹಾಜರು ಹಾಕಿದೆ. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದ ಸಂದರ್ಭ ವಿಜಯ್ ದೇವರಕೊಂಡ ಅವರು ಆಡಿದ ಮಾತು ಸದ್ಯ ಭಾರೀ ವೈರಲ್ ಆಗಿದೆ. ವಿಜಯ್ ರಾಘವೇಂದ್ರ(Vijay Raghavendra)ಕುರಿತ ಪ್ರಶ್ನೆಗೆ ವಿಜಯ್ ದೇವರಕೊಂಡ(Vijay Devrakonda)ಉತ್ತರ ಚರ್ಚೆಗೆ ಕಾರಣವಾಗಿದೆ.

ಖುಷಿ ಸಿನಿಮಾದ ಕುರಿತಂತೆ ವಿಜಯ್ ದೇವರಕೊಂಡ ಮತ್ತು ಚಿತ್ರತಂಡ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಈ ಸಂದರ್ಭ ಪತ್ರಕರ್ತರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಖುಷಿ ಎಂಬ ಸಿನಿಮಾ ಕನ್ನಡದಲ್ಲಿ 2003ರಲ್ಲಿ ರಿಲೀಸ್ ಆಗಿದೆ. ಆ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ ಎಂಬುದನ್ನು ನೀವು ಉತ್ತರ ನೀಡಬೇಕು ಎಂದು ನಟ ವಿಜಯ್ ದೇವರಕೊಂಡ ಅವರಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಉತ್ತರ ನೀಡಲು ನಿಮಗೆ ನಾಲ್ಕು ಆಯ್ಕೆಗಳನ್ನು ನೀಡುವುದಾಗಿ ಹೇಳಿ, ವಿಜಯ್ ರಾಘವೇಂದ್ರ, ದುನಿಯಾ ವಿಜಯ್, ವಿಜಯ್ ಕಾಂತ್ ಹಾಗೂ ವಿಜಯ್ ಸೇತುಪತಿ ಎಂದು ಆಯ್ಕೆಯನ್ನ ನೀಡಿದ್ದಾರೆ. ನಿಮ್ಮ ಹೆಸರಿನಲ್ಲಿರುವ ವ್ಯಕ್ತಿಯೇ ಕನ್ನಡದಲ್ಲಿ ನಟಿಸಿದ್ದು, ನೀವು ಈ ಉತ್ತರ ತಿಳಿದುಕೊಂಡಿರಬೇಕು ಹೇಳಿ’ ಎಂದು ಪತ್ರಕರ್ತ ವಿಜಯ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯ್ ದೇವರಕೊಂಡರವರು ,
‘ಸರಿ ನಾನು ನಿಮಗೆ ಪ್ರಶ್ನೆ ಕೇಳುತ್ತೇನೆ.  2021ರಲ್ಲಿ ತೆಲುಗು ಭಾಷೆಯಲ್ಲಿ ಖುಷಿ ಸಿನಿಮಾ ರಿಲೀಸ್ ಆಗಿದ್ದು, ಆ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ ಎಂದು ಮೊದಲು ನೀವು ಹೇಳಬೇಕು. ನಿಮ್ಮ ಹಾಗೆ ನಾನು ಕೂಡ ನಿಮಗೆ ನಾಲ್ಕು ಆಯ್ಕೆಗಳನ್ನು ನೀಡುತ್ತೇನೆ. ಸೂಪರ್ ಸ್ಟಾರ್ ಮಹೇಶ್ ಬಾಬು, ಪವರ್ ಸ್ಟಾರ್ ಪವನ್ ಕಲ್ಯಾಣ…’ ಎಂದು ಪ್ರಶ್ನೆ ಮುಗಿಸುವ ವೇಳೆಗೆ ಪತ್ರಕರ್ತ ಪವನ್ ಕಲ್ಯಾಣ ನಾಯಕ ಎಂದು ಉತ್ತರ ನೀಡಿ, ನಿಮ್ಮ ಪ್ರಶ್ನೆಗೆ ನಾನು ಉತ್ತರ ನೀಡಿರುವೆ. ಈಗ ನಿಮ್ಮ ಸರದಿ. ನೀವು ಉತ್ತರ ಕೊಡಿ ಎಂದು ಪತ್ರಕರ್ತ ಕೇಳಿದ್ದು, ಆಗ ನಟ ವಿಜಯ್ ದೇವರಕೊಂಡ ‘ಖಂಡಿತಾ ನನಗೆ ಗೊತ್ತಿದೆ. ನಾಯಕ ವಿಜಯ್ ರಾಘವೇಂದ್ರ’ ಎಂದಿದ್ದಾರೆ. ನಟ ಸರಿಯಾಗಿ ಉತ್ತರ ನೀಡಿದ್ದನ್ನು ಕೇಳಿ ಅಲ್ಲಿ ನೆರೆದಿದ್ದ ಮಂದಿ ಫುಲ್ ಖುಷ್ ಆಗಿದ್ದು, ಮತ್ತೆ ಕೂಡ ಅನೇಕ ಸವಾಲುಗಳನ್ನು ನೀಡಿ ನಟನನ್ನು ಪೇಚಿಗೆ ಸಿಲುಕಿಸುವ ಪ್ರಯತ್ನವನ್ನು ಪತ್ರಕರ್ತರು ಮಾಡುತ್ತಲೇ ಇದ್ದರು.

ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಖುಷಿ ಸಿನೆಮಾದಲ್ಲಿ ತಮಿಳು, ಮಲಯಾಳಂ, ಕನ್ನಡದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ಶರಣ್ಯ ಪೊನ್ ವಣ್ಣನ್, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಜೆ ಎಫೆಕ್ಟ್ ! ಬ್ಯಾಂಕ್ ಗೆ ನಾಳೆಯಿಂದ ಸಾಲು ಸಾಲು ರಜೆ! ಖಾಸಗಿ ಬಸ್ ಜೊತೆ ಸರಕಾರಿ ಬಸ್ ಟಿಕೆಟ್ ದರ ಏರಿಕೆ!!!

Leave A Reply

Your email address will not be published.