Talapady Grama Panchayat Elections: ಎಸ್‌ಡಿಪಿಐ ಬೆಂಬಲಿಸಿದ ಬಿಜೆಪಿ – ಈ ಕುರಿತು ತೇಜಸ್ವಿ ಸೂರ್ಯರಿಂದ ಬಂತು ಮಹತ್ವದ ಹೇಳಿಕೆ!

Thalapady grama panchayat elections BJP did not support sdpi in talapady elections said Tejaswi Surya

Talapady Grama Panchayat Elections: ಮಂಗಳೂರು: ನಿನ್ನೆ ನಡೆದ ಗ್ರಾಮಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಡ್ಡಮತದಾನ ಮಾಡಿ ಎಸ್‌ಡಿಪಿಐ(SDPI) ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ದೊರಕುವಂತೆ ಮಾಡಿದೆ ಎಂಬ ವರದಿಯನ್ನು ಬಿಜೆಪಿ ನಾಯಕರು ಸರಾಸಗಟವಾಗಿ ಅಲ್ಲಗೆಳೆದಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ (Talapady) ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ(Talapady Grama Panchayat Elections) ಈ ಘಟನೆ ನಡೆದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈಗ ಈ ಕುರಿತ ವರದಿಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇದೊಂದು ಫೇಕ್‌ ನ್ಯೂಸ್‌ ಎಂದು ಹೇಳಿದ್ದಾರೆ. ಇದರ ಜೊತೆಗೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಕೂಡ ಈ ವಿಚಾರವನ್ನು ಅಲ್ಲಗೆಳೆದಿದ್ದಾರೆ. ಈ ಕುರಿತು ಅವರು ಟ್ವೀಟ್‌ ಕೂಡಾ ಮಾಡಿದ್ದಾರೆ.

ಗುರುವಾರ ತಲಪಾಡಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಎಸ್‌ಡಿಪಿಐ ಸದಸ್ಯ ಟಿ ಇಸ್ಮಾಯಿಲ್‌ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಪುಷ್ಪಾವತಿ ಶೆಟ್ಟಿ ಆಯ್ಕೆಯಾಗಿದ್ದರು. ಎಸ್‌ಡಿಪಿಐ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಅಡ್ಡ ಮತದಾನ ಮಾಡುವ ಮೂಲಕ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿ ಕಾಲೆಳೆದುಕೊಂಡಿತ್ತು. ಮೇಲೆ ಲಡಾಯಿ-ಒಳಗೆ ಭಾಯಿ ಭಾಯಿ ಎಂದು ಬಿಜೆಪಿ, ಎಸ್‌ಡಿಪಿಐ ಸಂಬಂಧದ ಕುರಿತು ಹೇಳಿತ್ತು.

ಬಿಜೆಪಿ ಎಸ್‌ಡಿಪಿಐ ಪಕ್ಷವನ್ನು ಬೆಂಬಲಿಸಿಲ್ಲ. ಅಥವಾ ಇನ್ನಾವುದೇ ಪಕ್ಷವನ್ನು ಕೂಡಾ ಬೆಂಬಲಿಸಿಲ್ಲ. ಪಂಚಾಯತ್‌ ಚುನಾವಣೆಗಳು ಪಕ್ಷದ ಆಧಾರದ ಮೇಲೆ ನಡೆಯುವುದಿಲ್ಲ. ಈ ರೀತಿಯ ಸುದ್ದಿ ಪ್ರಕಟ ಮಾಡುವ ಮೊದಲು ನಿಜ ವಿಷಯ ಪರಿಶೀಲಿಸಿ ಎಂದು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ತೇಜಸ್ವಿ ಬರೆದುಕೊಂಡಿದ್ದಾರೆ. ಇದೊಂದು ನಕಲಿ ಸುದ್ದಿ, ಕರ್ನಾಟಕದಲ್ಲಿ ಪಂಚಾಯತ್‌ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಬಳಸುವುದಿಲ್ಲ. ಮೈತ್ರಿ ಹೇಗಾಗಲು ಸಾಧ್ಯ. ಎಸ್‌ಡಿಪಿಐಗೆ ಬೆಂಬಲ ನೀಡುವ ಪ್ರಶ್ನೆ ಇಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಕೂಡಾ ಹೇಳಿದ್ದಾರೆ.

 

ಇದನ್ನೂ ಓದಿ: ಲಾರಿಗೆ ಮಿನಿಟ್ರಕ್‌ ಡಿಕ್ಕಿ; ದೇವರ ದರ್ಶನಕ್ಕೆ ಹೋದ ಒಂದೇ ಕುಟುಂಬದ 9 ಜನ ಸ್ಥಳದಲ್ಲೇ ಸಾವು!

Leave A Reply

Your email address will not be published.