ಹಾಡಹಗಲೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ! ಅನೇಕ ಬಾರಿ ಗುಂಡು ಹೊಡೆದು ಭೀಕರವಾಗಿ ಕೊಂದ ದುಷ್ಕರ್ಮಿಗಳು!

Uttar Pradesh crime news BJP leader Anuj Chaudhary shot dead by three bike borne assailants

Uttar Pradesh: ಬಿಜೆಪಿ ಮುಖಂಡ (BJP Leader) ರೋರ್ವರನ್ನು ಅವರ ಮನೆಯ ಹೊರಗೆ ಗುರುವಾರ ಸಂಜೆ ಭೀಕರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ಉತ್ತರ ಪ್ರದೇಶ(Uttar Pradesh)ದಲ್ಲಿ ಈ ಘಟನೆ ನಡೆದಿದೆ. ಅನುಜ್‌ ಚೌಧರಿ(34) ಎಂಬವರು ತಮ್ಮ ಅಪಾರ್ಟ್‌ಮೆಂಟ್‌ನ ಹೊರಗಡೆ ಸ್ನೇಹಿತರ ಜೊತೆ ವಾಕಿಂಗ್‌ ಮಾಡುತ್ತಿರುವ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅನೇಕ ಬಾರಿ ಗುಂಡು ಹೊಡೆದು ಕೊಲೆ ಮಾಡಿದ್ದಾರೆ.

ಅನುಜ್‌ ಚೌಧರಿ ಅವರನ್ನು ಕೂಡಲೇ ಬ್ರೈಟ್‌ಸ್ಟಾರ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಅನುಜ್‌ ಚೌಧರಿ ಅವರು ರಾಜಕೀಯದಲ್ಲಿ ಹೆಸರು ಮಾಡಿದ ವ್ಯಕ್ತಿಯಾಗಿದ್ದು, ಇತ್ತೀಚಿನ ಸಂಭಾಲ್‌ನ ಅಸ್ಮೋಲಿ ಬ್ಲಾಕ್‌ನಿಂದ ಬ್ಲಾಕ್‌ ಮುಖ್ಯಸ್ಥರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಜಯ ಗಳಿಸಿರಲಿಲ್ಲ.

ಈ ಹತ್ಯಾ ಘಟನೆ ಸಂಬಂಧ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Varshini Sounderajan:ರೂಮಿಗೆ ಬಾ ಅಂದ, ಹೋದ್ರೆ ಕೈ ಹಿಡಿದು ಹಾಸಿಗೆಗೆ ಎಳೆದು, ಬಟ್ಟೆ….ಬಿಚ್ಚಿ: ನಿರೂಪಕಿ ಬಿಚ್ಚಿಟ್ಟ ರಹಸ್ಯ!

Leave A Reply

Your email address will not be published.