Apprentice Jobs 2023: ITI, Diploma ಪಾಸಾದವರಿಗೆ ಬಂಪರ್‌ ಉದ್ಯೋಗಾವಕಾಶ! 1191 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

western coalfields limited apprentice recruitment 2023 apply for various 1191post

Apprentice Jobs 2023: ಕೇಂದ್ರ ಸರಕಾರದ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್‌ ಆಫರ್‌. ಹೌದು. ನೀವೇನಾದರೂ ಐಟಿಐ, ಡಿಪ್ಲೋಮಾ, ಪದವಿ (ತಾಂತ್ರಿಕ ಕೋರ್ಸ್‌)ಮಾಡಿದ್ದೀರಿ ಎಂದಾದರೆ ನಿಮಗಿದೋ ಸುವರ್ಣವಕಾಶ. ಹೌದು, ಪಶ್ಚಿಮ ಕೋಲ್‌ಫೀಲ್ಡ್‌ ಲಿಮಿಟೆಡ್‌ ಟ್ರೇಡ್‌ ಅಪ್ರೆಂಟಿಸ್‌, ಗ್ರಾಜುಯೇಟ್‌ ಅಪ್ರೆಂಟಿಸ್‌, ಡಿಪ್ಲೊಮಾ ಅಪ್ರೆಂಟಿಸ್‌ ಪೋಸ್ಟ್‌ಗಳ ಭರ್ತಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಹಾಕು ಸೆ.16ರವರೆಗೆ ಅವಕಾಶವಿದೆ. ಈ ಹುದ್ದೆಗೆ ಸಂಬಂಧಿಸಿದಂತೆ ಸೆ.01ರಂದು ಅರ್ಜಿ ಲಿಂಕ್‌ ಬಿಡುಗಡೆ ಮಾಡಲಾಗಿದೆ. ಒಟ್ಟು 1191ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 01-09-2023 ರ ಬೆಳಿಗ್ಗೆ 10-00 ಗಂಟೆ
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-09-2023 ರ ಸಂಜೆ 05 ಗಂಟೆವರೆಗೆ.

ಹುದ್ದೆಗಳ ಸಂಖ್ಯೆ, ವಿವರಗಳನ್ನು ಒಳಗೊಂಡಿರುವ ಹೆಚ್ಚಿನ ಮಾಹಿತಿ ನಿಮಗಿಲ್ಲಿ ನೀಡಲಾಗಿದೆ.
ಗ್ರಾಜುಯೇಟ್‌ ಅಪ್ರೆಂಟಿಸ್‌; 101- ಬಿಇ/ಬಿ.ಟೆಕ್‌/ ಎಎಂಐಇ
ಟೆಕ್ನೀಷಿಯನ್‌ ಅಪ್ರೆಂಟಿಸ್‌: 215- ಡಿಪ್ಲೋಮಾ
ಟ್ರೇಡ್‌ ಅಪ್ರೆಂಟಿಸ್‌: 875- ಐಟಿಐ

ವಯೋಮಿತಿ: ಈ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.

ಮಾಸಿಕ ಸ್ಟೈಫಂಡ್‌ :
ಗ್ರಾಜುಯೇಟ್‌ ಅಪ್ರೆಂಟಿಸ್ ಹುದ್ದೆಗಳಿಗೆ ರೂ.9000.
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ರೂ.8000.
ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳಿಗೆ ರೂ.8050.

ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಳನ್ನು ವೆಬ್‌ಸೈಟ್‌ http://www.westerncoal.in/ ನಲ್ಲಿ ಪಡೆಯಬಹುದು.

Leave A Reply

Your email address will not be published.