Anganwadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್!

anganawadi workers news Good news for anganawadi workers from Central Government Rs 500 more incentive

Anganwadi Workers: ಕೇಂದ್ರ ಸರ್ಕಾರವು(Central Government)ಮಹಿಳೆಯರ ಸಬಲೀಕರಣಕ್ಕಾಗಿ(Women Empowerment)ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ, ಅಂಗನವಾಡಿ ಕಾರ್ಯಕರ್ತೆಯರಿಗೆ (Anganwadi Workers)ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ(Smriti Irani) ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ 500 ರೂ, ಪ್ರೋತ್ಸಾಹಧನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಮಾಸಿಕ ಬೆಳವಣಿಗೆಯ ಮಾಪನದ ಜೊತೆಗೆ ಉದ್ದೇಶಿತ ಮನೆ ಭೇಟಿ ಮಾಡುವ ಸಲುವಾಗಿ 500 ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡುವುದಾಗಿ ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಮಿಷನ್ ಪೋಷಣ್ 2.0 ಅಡಿಯಲ್ಲಿ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಇದೆ ವೇಳೆ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ.

2025-26 ರವರೆಗೆ ವರ್ಷಕ್ಕೆ 40 ಸಾವಿರ ರೂ. ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸುಮಾರು 11 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲಾಗುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ಪೌಷ್ಠಿಕಾಂಶ ಮತ್ತು ಆರಂಭಿಕ ಮಕ್ಕಳ ಆರೈಕೆ ಮತ್ತು ಶಿಕ್ಷಣ ಸೇವೆಗಳ ಸುಧಾರಿತ ವಿತರಣೆಯ ನಿಟ್ಟಿನಲ್ಲಿ ಮಿಷನ್ ಪೋಷಣ್ 2.0 ಅಡಿಯಲ್ಲಿ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

ಇದನ್ನೂ ಓದಿ: Ration Card Holder:ಪಡಿತರ ಚೀಟಿದಾರರೇ ಬಿಗ್‌ ಅಪ್ಡೇಟ್‌ ನಿಮಗಾಗಿ! ಆಗಸ್ಟ್‌ ತಿಂಗಳ ಪಡಿತರ ಕುರಿತು ಬಂದಿದೆ ಬಿಗ್‌ ನ್ಯೂಸ್‌!!!

Leave A Reply

Your email address will not be published.