Anna Bhagya scheme: ಅನ್ನಭಾಗ್ಯ ಫಲಾನುಭವಿಗಳಿಗೆ ಬಹುಮುಖ್ಯ ಘೋಷಣೆ! ಸಿಗಲಿದೆ ಹಣದ ಬದಲಿಗೆ ಅಕ್ಕಿ

Anna Bhagya scheme rice from Andhra Pradesh for anna bhagya yojan says k h muniyappa

Anna Bhagya scheme: ಕೇಂದ್ರ ಸರಕಾರದ ಬಹುಮುಖ್ಯ ಗ್ಯಾರಂಟಿಗಳಲ್ಲಿ ಯೋಜನೆಯಾದ ಅನ್ನಭಾಗ್ಯ ಯೋಜನೆ ಕುರಿತು ಬಹುಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ. ಹೌದು, ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿಯ ಬದಲು ಹಣ ನೀಡುವುದಾಗಿ ರಾಜ್ಯಸರಕಾರ ಘೋಷಣೆ ಮಾಡಿತ್ತು. ಈಗ ಬಂದಿರುವ ಮಾಹಿತಿಯ ಪ್ರಕಾರ, ಅನ್ನಭಾಗ್ಯ ಯೋಜನೆಗೆ ಆಂಧ್ರಪ್ರದೇಶದಿಂದ ಅಕ್ಕಿ ಬರಲಿದೆ, ಅಕ್ಕಿ ಪೂರೈಕೆ ಮಾಡಲು ಆಂಧ್ರಪ್ರದೇಶ ಸರಕಾರ ಮುಂದೆ ಬಂದಿದೆ.

ಹೀಗಾಗಿ ಜನರಿಗೆ ಇನ್ನು ಅಕ್ಕಿ ಸಿಗೋ ಭಾಗ್ಯ( Anna Bhagya scheme) ಲಭಿಸಲಿದೆ. ಈ ವಿಷಯದ ಕುರಿತಾಗಿ ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಅವರೊಂದಿಗೆ ಆಂಧ್ರಪ್ರದೇಶದ ಆಹಾರ ಇಲಾಖೆ ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್‌ ಅವರೊಂದಿಗೆ ನಿಯೋಗವೊಂದು ಚರ್ಚೆ ಮಾಡಿದೆ.

ಎಫ್‌ಸಿಐ ನಿಗದಿಪಡಿಸಿದ ದರದಲ್ಲಿ ಅಕ್ಕಿ ಪೂರೈಕೆ ಮಾಡಲು, ನಿರ್ದಿಷ್ಟ ಪ್ರಮಾಣ ಜೊತೆಗೆ ಅವಕಾಶ ನೀಡುವ ಬಗ್ಗೆ ತಿಳಿಸಬೇಕು. ಹಾಗಾಗಿ ಅನುಮತಿ ನೀಡಿದಲ್ಲಿ ಅಕ್ಕಿ ಪೂರೈಕೆ ಆದಷ್ಟು ಬೇಗ ಮಾಡಲಾಗುವುದು ಎಂದು ನಿಯೋಗ ಹೇಳಿದೆ.

ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿ ಒಪ್ಪಿಗೆ ಪಡೆದ ನಂತರ ಮಾಹಿತಿ ನೀಡುವುದಾಗಿ ನಿಯೋಗಕ್ಕೆ ಭರವಸೆ ನೀಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Talapady Grama Panchayat Elections; ಎಸ್‌ಡಿಪಿಐ ಬೆಂಬಲಿಸಿದ ಬಿಜೆಪಿ – ಈ ಕುರಿತು ತೇಜಸ್ವಿ ಸೂರ್ಯರಿಂದ ಬಂತು ಮಹತ್ವದ ಹೇಳಿಕೆ!

Leave A Reply

Your email address will not be published.