Belagavi: ನೀರು ಕಾಯಿಸುವ ಕಾಯಿಲ್‌ನಿಂದ ಶಾಕ್‌! ಅಜ್ಜ, ಅಜ್ಜಿ, ಮೊಮ್ಮಗಳು ಸ್ಥಳದಲ್ಲೇ ಸಾವು

Belagavi news Shock from the water heating coil Grandfather grandmother granddaughter died on the spot

Belagavi: ಇಂದು ಬೆಳಗ್ಗೆ ಮನೆಯಲ್ಲಿ ನೀರು ಕಾಯಿಸಲೆಂದು ಇಟ್ಟ ಕಾಯಿಲ್‌ ನಿಂದ ವಿದ್ಯುತ್‌ ತಗುಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಬೆಳಗಾವಿಯ(Belagavi) ಶಾಹುನಗರದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರ ಸ್ಥಳದಲ್ಲೇ ದಾರುಣ ಮರಣ ಹೊಂದಿದ್ದು, ಮನೆ ಮಂದಿ ಶಾಕ್‌ಗೊಳಗಾಗಿದ್ದಾರೆ.

ಈರಪ್ಪಾ ಗಂಗಪ್ಪ ಲಮಾನಿ (50), ಶಾಂತವ್ವ ಈರಪ್ಪಾ ಲಮಾನಿ (45) ಮತ್ತು ಅನ್ನಪೂರ್ಣ ಹುನ್ನಪ್ಪಾ ಲಮಾನಿ (8) ವಿದ್ಯುತ್‌ ಸ್ಪರ್ಶದಿಂದ ಮೃತ ಹೊಂದಿದವರು. ಮೃತರು ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದವರು ಎಂದು ಗುರುತಿಸಲಾಗಿದೆ.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನ ಜಮಾಯಿಸಿದ್ದು, ಕುಟುಂಬಸ್ಥರ ಗೋಳು ಹೇಳತೀರದು. ಘಟನಾ ಸ್ಥಳಕ್ಕೆ ಪೊಲೀಸರು, ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್‌! ಮಹಿಳಾ ಪ್ರಯಾಣಿಕರೇ ನಿಮಗೊಂದು ಮುಖ್ಯ ಮಾಹಿತಿ! ಸ್ಮಾರ್ಟ್‌ ಕಾರ್ಡ್‌ ಬದಲಿಗೆ ಬಂತು ಹೊಸ ಕಾರ್ಡ್‌!!

Leave A Reply

Your email address will not be published.