Central Government jobs: ಕೇಂದ್ರಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ವಿವಿಧ ಇಲಾಖೆ, ಸಂಸ್ಥೆಗಳಿಂದ 45ಸಾವಿರಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ

Central Government jobs Applications are invited for more than 45 thousand posts from various departments

Central Government jobs :ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ. ಇಲ್ಲಿದೆ ನೋಡಿ ಕೇಂದ್ರ ಸರಕಾರದ ಅಧಿನದಲ್ಲಿ ಕೆಲಸ(Central Government jobs) ಮಾಡುವ ವಿವಿಧ ಇಲಾಖೆಗಳು, ಸಚಿವಾಲಯಗಳು, ಕಚೇರಿಗಳಿಂದ ಅನೇಕ ಹುದ್ದೆಗಳ ಭರ್ತಿಗೆ ನೋಟಿಫಿಕೇಶ್‌ ಬಂದಿದೆ. ಹಾಗೆನೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೇನು ಕೆಲವೇ ದಿನ ಇದೆ. ಈ ಎಲ್ಲಾ ಇಲಾಖೆಗಳಲ್ಲಿ ಒಟ್ಟಾರೆ 45ಸಾವಿರಕ್ಕೂ ಹೆಚ್ಚು ಹುದ್ದೆ ಖಾಲಿ ಇದೆ. ಬನ್ನಿ ಅದ್ಯಾವುದು ಎಂದು ತಿಳಿಯಿರಿ, ಮತ್ತು ಅರ್ಜಿ ಸಲ್ಲಿಸಿ.

30,041- ಅಂಚೆಕಚೇರಿಯಲ್ಲಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 30,041 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕದವರಿಗೆನೇ 1500 ಕ್ಕೂ ಹೆಚ್ಚು ಹುದ್ದೆಗಳು ಇದೆ.
1207 – ಗ್ರೇಡ್‌ ಸಿ, ಗ್ರೇಡ್ ಡಿ ಸ್ಟೆನೋಗ್ರಾಫರ್‌ ಹುದ್ದೆಗಳ ನೇಮಕಾತಿಯು ಭಾರತ ಸರಕಾರದ ವಿವಿಧ ಸಚಿವಾಲಯ, ಕಚೇರಿಗಳು, ಸಂಸ್ಥೆಗಳಲ್ಲಿ ಇದೆ. ಇಲ್ಲಿ ಒಟ್ಟು 1207 ಸ್ಟೆನೋಗ್ರಾಫರ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದೆ.
1876- ಪೊಲೀಸ್‌ ಇಲಾಖೆಯಲ್ಲಿ ಕೂಡಾ 1876 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿದ್ದು ಇದರ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ದೆಹಲಿ ಪೊಲೀಸ್‌ ಪಡೆಗಳಲ್ಲಿ, ಕೇಂದ್ರ ಭದ್ರತಾ ಪಡೆಗಳಲ್ಲಿ ಈ ನೇಮಕಾತಿ ನಡೆಯಲಿದೆ.
1402- ಬ್ಯಾಂಕ್‌ಗಳಲ್ಲಿ ಹುದ್ದೆಗಳ ಕುರಿತು ಐಬಿಪಿಎಸ್‌ ಕೂಡಾ ಅಧಿಸೂಚನೆ ಹೊರಡಿಸಿದ್ದು, ಬ್ಯಾಂಕ್‌ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್‌ ಉದ್ಯೋಗ ಆಫರ್‌ ನೀಡಿದೆ. 1402 ಎಸ್‌ಒ ಹುದ್ದೆಗಳಿಗೆ ಮುಂದಿನ ವರ್ಷದಲ್ಲಿ ಭರ್ತಿ ಮಾಡಲು ಐಬಿಪಿಎಸ್‌ ನೇಮಕಾತಿ ಪ್ರಕಟಣೆ ಹೊರಡಿಸಿದೆ.
3049 ಪ್ರೊಬೆಷನರಿ ಆಫೀಸರ್‌ ಹಾಗೂ ಮ್ಯಾನೇಜ್ಮೆಂಟ್‌ ಟ್ರೈನಿ ಪೋಸ್ಟ್‌ಗಳಗೆ ಪಾರ್ಟಿಸಿಪೇಟಿಂಗ್‌ ಬ್ಯಾಂಕ್‌ ಕೂಡಾ ಜಾಬ್‌ ಆಫರ್‌ ನೀಡಿದೆ.
132 ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
6329- ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸೊಸೈಟಿ ಶಾಲೆಗಳಲ್ಲಿ ಒಟ್ಟು 6329 ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
1324- ಹಾಗೆನೇ ಜೂನಿಯರ್‌ ಇಂಜಿನಿಯರ್‌ ಹುದ್ದೆಗಳಿಗೆ ಕೂಡಾ ಕೇಂದ್ರ ಸರಕಾರದ ಇಲಾಖೆಗಳಲ್ಲಿ, ಸಚಿವಾಲಯಗಳಲ್ಲಿ, ಕಚೇರಿಗಳಲ್ಲಿ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟಾರೆ 1324ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಬಿಇ, ಡಿಪ್ಲೋಮ, ಮೆಕ್ಯಾನಿಕಲ್‌, ಸಿವಿಲ್‌ ಓದಿದವರಿಗೆ ಇದೊಂದು ಮುಖ್ಯವಾದ ಮಾಹಿತಿ.

ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಬಹುಮುಖ್ಯ ಘೋಷಣೆ! ಸಿಗಲಿದೆ ಹಣದ ಬದಲಿಗೆ ಅಕ್ಕಿ

Leave A Reply

Your email address will not be published.