Free Bus Service: ರಾಜ್ಯದ ಮಹಿಳೆಯರಿಗೆ ಇನ್ನು ದಿನವೂ ಹಬ್ಬ: ಫ್ರೀ ಬಸ್ಸು ಹತ್ತಿದ ಮಹಿಳೆಯರಿಗೆ ಇನ್ನೊಂದು ಫ್ರೀ ಸಿಗಲಿದೆ!ಸರ್ಕಾರದಿಂದ ಹೊಸ ಗಿಫ್ಟ್ !

Congress government decide install panic button GPS in KSRTC buses more details in Kannada

Free Bus service : ಕರ್ನಾಟಕದ (Government of Karnataka)ಜನತೆಗೆ ಐದು ಗ್ಯಾರಂಟಿಯನ್ನು ಘೋಷಣೆ ಮಾಡುವ ಮೂಲಕ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದ್ದ ಕಾಂಗ್ರೆಸ್ ಈಗ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಹರ ಸಾಹಸ ಪಡುತ್ತಿದೆ.

ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷಿ ಯೋಜನೆಯಾದ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus service) ಅವಕಾಶ ನೀಡುವ ಶಕ್ತಿ ಯೋಜನೆ (Shakti scheme) ಜಾರಿಯಾಗಿದ್ದು, ಇದೀಗ, ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee scheme) ನಡುವೆ ಇದೀಗ ಮಹಿಳೆಯರ ರಕ್ಷಣೆಗೆ ಹೊಸ ಯೋಜನೆ ರೂಪಿಸಲು ಸಿದ್ಧವಾಗುತ್ತಿದೆ.

ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಸೇವೆ ನೀಡುತ್ತಿರುವುದು ಗೊತ್ತಿರುವ ಸಂಗತಿ. ಇದೀಗ, ಪ್ರಯಾಣಿಕರ ಸುರಕ್ಷತೆ ಮತ್ತು ಉತ್ತಮ ಸೇವೆಯನ್ನು ಖಾತ್ರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು (Panic button,vehicle tracking system) ಅಳವಡಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಪ್ಯಾನಿಕ್ ಬಟನ್‌ಗಳು ಮತ್ತು ಜಿಪಿಎಸ್ ಅಳವಡಿಕೆಯು ಸಾರ್ವಜನಿಕರಿಗೆ ಆಗುವ ಸಂಭಾವ್ಯ ಅಪಾಯಗಳನ್ನು ತಡೆಯಲು ನೆರವಾಗುತ್ತದೆ. ಅಹಿತಕರ ಘಟನೆಗಳನ್ನು ತಪ್ಪಿಸಲು ನೆರವಾಗುತ್ತದೆ. ಈ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಬಸ್‌ನಲ್ಲಿ ಇರುವ ಪ್ಯಾನಿಕ್ ಬಟನ್ ಒತ್ತಿದರೆ ತಕ್ಷಣ ಕೆಎಸ್‌ಆರ್‌ಟಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗಲಿದೆ. ಆನಂತರ, ಅಲ್ಲಿನ ಸಿಬ್ಬಂದಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರ ಜೊತೆಗೆ ಜಿಪಿಎಸ್(GPS) ಬಸ್‌ನ ಸ್ಥಳ ಮತ್ತು ವೇಗದಂತಹ ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಿರ್ಭಯ ಯೋಜನೆಯಡಿ ಬಸ್‌ಗಳಲ್ಲಿ ಅಳವಡಿಸಲಾಗಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MORTH) ಈ ಡಿವೈಸ್‌ ಅನ್ನು ಇನ್‌ಸ್ಟಾಲ್‌ ಮಾಡಲು ಅನುಮೋದನೆ ಕೋರಿ ವಿವರವಾದ ಯೋಜನಾ ವರದಿಯನ್ನು ರವಾನೆ ಮಾಡಲಾಗಿದೆ. ಈ ಜಿಪಿಎಸ್ ಪ್ರಯಾಣಿಕರಿಗೆ ಬಸ್ಸುಗಳನ್ನು ಟ್ರ್ಯಾಕ್ ಮಾಡಲು ನೆರವಾಗಲಿದ್ದು, ಇದರಿಂದ ಪ್ರಯಾಣಿಕರು ಸುಮ್ಮನೆ ಕಾಯುವ ಸಮಯವನ್ನು ಉಳಿದುತ್ತದೆ. ಈ ಸೇವೆಯ ಪ್ರಯೋಜನ ಪಡೆಯಲು ಪ್ರಯಾಣಿಕರು ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Tirupathi Bus Travel: ಕೇವಲ 1 ರೂಪಾಯಿಗೆ ಬೆಂಗಳೂರಿಂದ ತಿರುಪತಿಗೆ ಎಸಿ ಬಸ್‌ ನಲ್ಲಿ ಹೋಗ್ಬೇಕಾ? : ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ

Leave A Reply

Your email address will not be published.