Golden Star Ganesh: ಬಂಡೀಪುರ ವ್ಯಾಪ್ತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರೆಸಾರ್ಟ್ಸ್? : ಕಾಮಗಾರಿಗೆ ಬ್ರೇಕ್​ ಕೊಡ್ತಾ ಆಡಳಿತ ?!

Entertainment Sandalwood news actor Ganesh violated environmental rules

Ganesh violated environmental rules : ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh)ಅವರಿಗೆ ಸಂಕಷ್ಟ ಎದುರಾಗಿದೆ.

ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್ 105 ರಲ್ಲಿ ನಟ ಗೋಲ್ಡನ್​ ಸ್ಟಾರ್​ ಗಣೇಶ್ ಜಮೀನು ಖರೀದಿ ಮಾಡಿದ್ದು, ಆದರೆ ಇದೀಗ ಈ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವ ನಟ ಗಣೇಶ್ ‌ಅವರಿಗೆ ದೊಡ್ದ ಸಮಸ್ಯೆ ಎದುರಾಗಿದೆ. ಖರೀದಿಸಿರುವ ಜಮೀನಿನಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ವಾಸದ ಮನೆಯ ಬದಲಿಗೆ ಶಾಶ್ವತವಾದ ಬೃಹತ್ ಕಟ್ಟಡ ಕಟ್ಟುತ್ತಿರುವ ಆರೋಪ ಕೇಳಿಬರುತ್ತಿದೆ.

ಸೂಕ್ಷ್ಮ ಪರಿಸರ ವಲಯವಾಗಿರುವ ಜಕ್ಕಹಳ್ಳಿಯಲ್ಲಿ  ಕಟ್ಟಡ ನಿರ್ಮಾಣಕ್ಕೆ ನಟ ಗಣೇಶ್‌ ಮುಂದಾಗಿದ್ದಾರೆ. ಈ ನಡುವೆ, ತಾತ್ಕಾಲಿಕ ಮನೆ ನಿರ್ಮಾಣಕ್ಕೆ(House )ಮಾತ್ರ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಇಲ್ಲಿ ಜೆಸಿಬಿಯಿಂದ(JCB )ಕೆಲಸ ನಡೆಯುತ್ತಿದ್ದು, ಬೃಹತ್ ಕಟ್ಟಡಕ್ಕೆ ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿರುವ ಜಕ್ಕಹಳ್ಳಿ ಗ್ರಾಮದಲ್ಲಿ ಗಣೇಶ್‌ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸೂಕ್ಷ್ಮ ಪರಿಸರ ವಲಯದಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಮಗಾರಿ ಗಮನಿಸುವಾಗ ಬೃಹತ್ ಕಟ್ಟಡಕ್ಕೆ ಪಾಯ ಹಾಕುವಂತೆ ಕಾಣಿಸುತ್ತಿದೆ. ಸದ್ಯ, ಬಂಡೀಪುರದ ಸೂಕ್ಷ್ಮ ಪರಿಸರ ವಲಯದಲ್ಲಿ 1 ಎಕರೆ 24 ಗುಂಟೆ ಭೂಮಿ ಹೊಂದಿರುವ ನಟ ಗಣೇಶ್, ಪರಿಸರ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಗೋಲ್ಡನ್ ಸ್ಟಾರ್ ಗಣೇಶ್‌ ಅವರ ಈ ನಡೆಯಿಂದ ಪರಿಸರವಾದಿಗಳು ತೀವ್ರ ವಿರೋಧ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ:Anganwadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್!

Leave A Reply

Your email address will not be published.