Ration Card Holder: ಪಡಿತರ ಚೀಟಿದಾರರೇ ಬಿಗ್‌ ಅಪ್ಡೇಟ್‌ ನಿಮಗಾಗಿ! ಆಗಸ್ಟ್‌ ತಿಂಗಳ ಪಡಿತರ ಕುರಿತು ಬಂದಿದೆ ಬಿಗ್‌ ನ್ಯೂಸ್‌!!!

Karnataka news important information for ration card holders August month ration direction for people on caste certificate

Ration Card Holder News: ಪಡಿತರ ಚೀಟಿದಾರರಿಗೆ (Ration Card Holder)ಮಹತ್ವದ ಮಾಹಿತಿ ಇಲ್ಲಿದೆ ನೋಡಿ. ಪಡಿತರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರಾಯಚೂರು ಆಗಸ್ಟ್‌ ತಿಂಗಳಲ್ಲಿ ಪಡಿತರ ಪಡೆಯುವವರಿಗೆ Important Information For Ration Card Holder)ಮಹತ್ವದ ಸೂಚನೆ ನೀಡಿದೆ.

ಪಡಿತರ ಚೀಟಿಗಳಲ್ಲಿ ಎಸ್‌ಸಿ/ ಎಸ್‌ಟಿ ಕುಟುಂಬದ ಮಾಹಿತಿಯನ್ನು ನವೀಕರಿಸುವ ಕುರಿತಂತೆ ಬಿಗ್ ಅಪ್ಡೇಟ್ ನೀಡಲಾಗಿದೆ. ಮಾನ್ಯ ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಪತ್ರದ ಅನುಸಾರ ರಾಯಚೂರು ಜಿಲ್ಲೆಯಲ್ಲಿ ಎಸ್‌ಸಿ/ ಎಸ್‌ಟಿ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮಾಹಿತಿಯನ್ನು ಸಂಗ್ರಹಿಸಲು ತಿಳಿಸಲಾಗಿದೆ.

ಮಾನ್ಯ ಆಯುಕ್ತರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಪತ್ರವನ್ನು ಉಲ್ಲೇಖ ಮಾಡಿದ್ದು,ಈ ಪತ್ರ ಪಡಿತರ ಚೀಟಿಗಳಲ್ಲಿ ಎಸ್‌ಸಿ/ ಎಸ್‌ಟಿ ಕುಟುಂಬದ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಪಡೆಯುವಂತೆ ಸೂಕ್ತ ನಿರ್ದೇಶನ ನೀಡಿ ಅವಶ್ಯಕ ಮಾಹಿತಿಯನ್ನು ಪಡೆಯಲು ಕ್ರಮ ವಹಿಸಲು ಕೋರಲಾಗಿದೆ. ಈ ಪತ್ರ ಪಡಿತರ ಚೀಟಿಗಳಲ್ಲಿ ಎಸ್‌ಸಿ/ ಎಸ್‌ಟಿ ಕುಟುಂಬದ ಮಾಹಿತಿಯನ್ನು ನವೀಕರಿಸುವ ಕುರಿತಂತೆ ಮಾಹಿತಿ ಒಳಗೊಂಡಿದ್ದು, ಉಪ ನಿರ್ದೇಶಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರಾಯಚೂರು ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗೆ ಈ ಕುರಿತು ಪತ್ರದ ಮುಖಾಂತರ ಮಾಹಿತಿ ನೀಡಿದ್ದಾರೆ.

ಆಯುಕ್ತರ ಪತ್ರದ ಪ್ರತಿಯಲ್ಲಿ ಸೂಚಿಸಿರುವ ಅನುಸಾರ, ಆಗಸ್ಟ್-2023ರ ಮಾಹೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಎಸ್‌ಸಿ/ ಎಸ್‌ಟಿ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮಾಹಿತಿಯನ್ನು ಸಂಗ್ರಹ ಮಾಡಬೇಕಾಗಿದೆ. ಹೀಗಾಗಿ, ಆಗಸ್ಟ್ 2023ರ ತಿಂಗಳಿನಲ್ಲಿ ಪಡಿತರ ಪಡೆಯುವಾಗ. ಪಡಿತರ ಚೀಟಿದಾರರು ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯೊಂದಿಗೆ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ AJSK (ಅಟಲ್ ಜನ ಸ್ನೇಹಿ ಕೇಂದ್ರ)/ ತಹಶೀಲ್ದಾರ್ ಕಛೇರಿಯಿಂದ ಪಡೆದ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲು ಸೂಚನೆ ನೀಡಲಾಗಿದ್ದು, ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.ಇದರ ಜೊತೆಗೆ ಹೊಸ ರೇಷನ್​ ಕಾರ್ಡ್ ಪಡೆಯಲು ಅನುವು ಮಾಡಿಕೊಡುವ ಕುರಿತು ಆಹಾರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ ನೀಡಿದ್ದರು. ಆದರೆ ಈಗ ಇಲಾಖೆಯ ಆದೇಶದಂತೆ ಹೊಸ ಕಾರ್ಡ್‌ಗಳನ್ನು ಸದ್ಯಕ್ಕೆ ನೀಡಲಾಗಾವುದಿಲ್ಲ ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Earn Money:ಮದುವೆ ಮೂಲಕ ದುಡ್ಡು ಮಾಡಲು ನಿಮಗಿದೋ ಸದಾವಕಾಶ! ಹೇಗೆ ಅಂತೀರಾ?

Leave A Reply

Your email address will not be published.