Road Accident: ಬೈಕ್-ಬೊಲೆರೊ ಪಿಕಪ್ ಮಧ್ಯೆ ಭೀಕರ ಅಪಘಾತ! ಶನಿ ದೇವಸ್ಥಾನಕ್ಕೆ ಹೊರಟ ಇಬ್ಬರು ಬಾಲಕರ ದಾರುಣ ಸಾವು! ಓರ್ವ ತೀವ್ರ ಗಂಭೀರ

Tumkur news road accident two boys died in road accident near pavagadda tumakuru

Tumakur: ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಈ ಅವಘಡದಲ್ಲಿ ಇಬ್ಬರು ಯುವಕರು (Two boys died in accident) ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ದ್ವಿಚಕ್ರ ವಾಹನ ಮತ್ತು ಬೊಲೆರೊ ಪಿಕಪ್‌ ನಡುವೆ ಭೀಕರ ಅಪಘಾತ (Road accident)ಸಂಭವಿಸಿದ ಪರಿಣಾಮ, ತುಮಕೂರು ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ (Shani Mahatma temple at Pavagada) ಹೊರಟಿದ್ದ ಇಬ್ಬರು ಬಾಲಕರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತ ದುರ್ದೈವಿಗಳನ್ನು ಆಂಧ್ರಪ್ರದೇಶದ ರೊದ್ದಂ ಮಂಡಲದ ಚಿನ್ನಿಕೊಡಿಪಲ್ಲಿ ಗ್ರಾಮದ ಯುವಕರಾದ (three Boys from Andhra pradesh) ಈಶ್ವರ್ (16), ಯಶ್ವಂತ್ (17) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಯುವಕ ರಾಮು (16) ಅವರಿಗೆ ತೀವ್ರ ಗಾಯಗಳಾಗಿದ್ದು,ಇವರ ಸ್ಥಿತಿ ಕೂಡ ಚಿಂತಾಜನಕವಾಗಿದೆ.

ವಿದ್ಯಾರ್ಥಿಗಳು ಆಂಧ್ರ ಪ್ರದೇಶದಿಂದ ಪಾವಗಡ ಶನಿ ಮಹಾತ್ಮ ದೇವಸ್ಥಾನಕ್ಕೆ ಹೊರಟಿದ್ದು, ಬೈಕ್‌ ಪಾವಗಡದ ಕಡಮಲಕುಂಟೆ ಗ್ರಾಮದ ಬಳಿ ಬಂದಾಗ ಬೊಲೆರೊ ಜತೆ ಅಪಘಾತಕ್ಕೀಡಾಗಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್‌ ನೆರವಿನಿಂದ ಬೆಂಗಳೂರಿನ ನಿಮಾನ್ಸ್‌ಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Liquor Sale:ಜಿಲ್ಲೆಯಲ್ಲಿ ಅಲ್ಲಲ್ಲಿ ಇನ್ನು ಮೂರು ದಿನ ಮದ್ಯ ಮಾರಾಟ ನಿಷೇಧ: ಇಂದಿನಿಂದಲೇ ಜಾರಿ!

Leave A Reply

Your email address will not be published.