Indrani Tahbildar Commits Suicide: ಪಕ್ಷದ ಹಿರಿಯ ನಾಯಕನೊಂದಿಗೆ ವಿವಾಹೇತರ ಸಂಬಂಧ, ಫೋಟೋ ವೈರಲ್! ಬಿಜೆಪಿ ನಾಯಕಿ ಆತ್ಮಹತ್ಯೆ

assam news crime news assam bjp leader indrani tahbildar commits suicide

Indrani Tahbildar Commits Suicide: ಅಸ್ಸಾಂನಲ್ಲಿ ಬಿಜೆಪಿ ಮಹಿಳಾ ಮುಖಂಡ ನಾಯಕಿಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಹಿರಿಯ ನಾಯಕನೊಂದಿಗಿನ ಅತ್ಯಂತ ಖಾಸಗಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುವಾಹಟಿಯ ಬಾಮುನಿಮೈದಂ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ರಾಜ್ಯ ಬಿಜೆಪಿಯ ಪ್ರಮುಖ ಸದಸ್ಯೆ ಇಂದ್ರಾಣಿ ತಹಬೀಲ್ದಾರ್ (Indrani Tahbildar Commits Suicide) ಎಂದು ಗುರುತಿಸಲಾಗಿದೆ. ತಹಬೀಲ್ದಾರ್ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ್ದರು ಮತ್ತು ಕಿಸಾನ್ ಮೋರ್ಚಾದಲ್ಲಿಯೂ ಇದ್ದರು.

ಮೂಲಗಳ ಪ್ರಕಾರ ಇಂದ್ರಾಣಿ ತಹಬಿಲ್ದಾರ್‌ ಅವರು ಬಿಜೆಪಿ ನಾಯಕನೋರ್ವನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಇವರಿಬ್ಬರು ಖಾಸಗಿ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿತ್ತು.

ಇದೊಂದು ಅಸಹಜ ಸಾವು ಎಂದು ಪರಿಗಣಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಕೇಂದ್ರ ಗುವಾಹಟಿ ಡಿಸಿಪಿ ದೀಪಕ್‌ ಚೌಧರಿ ಹೇಳಿದ್ದಾರೆ. ತಹಬಿಲ್ದಾರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

 

Leave A Reply

Your email address will not be published.