Crime News:ಪಕ್ಕದಮನೆಯ ಯುವತಿಯ ಮೇಲೆ ಅಂಕಲ್‌ ಕಣ್ಣು! ಆರೋಪಿ ಪತ್ತೆಗೆ ಕ್ಲೂ ಕೊಟ್ಟ ಆತನ ಕಾಲಿನ ಧೂಳು! ಹೇಗಂತೀರಾ?

Bengaluru news crime news security guard attempt to rape women strangles her to death

Crime News: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಪಕ್ಕದ ಮನೆಯ ವ್ಯಕ್ತಿಯ ಕಾಮದ ಕಣ್ಣಿಗೆ ಯುವತಿಯೊಬ್ಬಳು ಬಲಿಯಾಗಿರುವ (Crime News) ಘಟನೆ ವರದಿಯಾಗಿದೆ.

ರಾತ್ರಿ ಏಕಾಏಕಿ ಯುವತಿ ನಾಪತ್ತೆಯಾಗಿದ್ದವಳು (Girl Missing)ಮರುದಿನ ಮುಂಜಾನೆ ವೇಳೆಗೆ ಮನೆ ಆವರಣದಲ್ಲೇ ಶವವಾಗಿ ಬಿದ್ದಿದ್ದಳು. ಮೃತ ದುರ್ದೈವಿಯನ್ನ ಕಲಬುರಗಿ ಮೂಲದ ಮಹಾನಂದಾ (21) ಎಂದು ಗುರುತಿಸಲಾಗಿದೆ. ಕಲಬುರಗಿ ಮೂಲದ ಮಹಾನಂದಾ ಮತ್ತು ಆಕೆಯ ಅಕ್ಕ ಸರೋಜಾ ಮಹದೇವಪುರದ ಮಹೇಶ್ವರಿನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ಅಲ್ಲೇ ಖಾಸಗಿ ಪೆಟ್ರೋಲ್‌ ಬಂಕ್‌ವೊಂದರಲ್ಲಿ (Petrol Bunk)ಸಹೋದರಿಯರು ಕೆಲಸ ಮಾಡುತ್ತಿದ್ದರಂತೆ. ಈ ನಡುವೆ ಗುರುವಾರ ರಾತ್ರಿ ವೇಳೆ ಇದ್ದಕ್ಕಿಂದ್ದಂತೆ ಮಹಾನಂದಾ ನಾಪತ್ತೆಯಾಗಿದ್ದಳು.

ಮಹದೇಪುರದ ಮಹೇಶ್ವರಿ ನಗರದಲ್ಲಿ ಯುವತಿಯೊಬ್ಬಳ ಕೊಲೆಯಾಗಿತ್ತು. ಈ ಪ್ರಕರಣವನ್ನು ಮಹದೇವಪುರ ಪೊಲೀಸರು ತನಿಖೆ ಆರಂಭಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಮಾಡಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣ ಭೇದಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲೇ ನೆಲೆಸಿದ್ದ ಕೊಲೆಗಾರನನ್ನು ಬಂಧಿಸಿದ್ದಾರೆ.

ಕೃಷ್ಣ ಚಂದ ಎಂಬ ವ್ಯಕ್ತಿ ಸೇಟಿ ಟೆಕ್ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನಂತೆ. ಪಕ್ಕದ ಮನೆಯ ಅಂಕಲ್ ಸಮೀಪದ ಮನೆಯಲ್ಲಿದ್ದ ಯುವತಿಯ ಮೇಲೆ ಕಣ್ಣಿಟ್ಟಿದ್ದ. ಈತನೇ ಯುವತಿಯನ್ನು ಕೊಲೆ ಮಾಡಿ ತನಗೇನು ಗೊತ್ತೇ ಇಲ್ಲವೆಂಬಂತೆ ವರ್ತಿಸುತ್ತಿದ್ದ. ಆದ್ರೆ, ಯುವತಿಯ ಮೃತದೇಹ ಗಮನಿಸಿದ ಪೋಲೀಸರಿಗೆ ಇದು ಕೊಲೆ ಎಂಬುದು ಸ್ಪಷ್ಟವಾಗಿತ್ತು. ಮೃತದೇಹ ಗಮನಿಸಿದಾಗ ಯುವತಿಯ ಪಾದದಿಂದ ಮತ್ತು ಪಕ್ಕದ ಮನೆ ಮಗುವಿನ ಹೇಳಿಕೆಯಿಂದ ಆರೋಪಿ ಅಂದರ್ ಆಗಿದ್ದಾನೆ. ಮಹೇಶ್ವರಿನಗರ ನಿವಾಸಿ ಕೃಷ್ಣ ಚಂದ್ರ ಸೇತಿ (28) ಆರೋಪಿಯಾಗಿದ್ದು, ಪ್ರಾಥಮಿಕ ತನಿಖೆ ವೇಳೆ ಮಹಾನಂದಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ.

ಆರೋಪಿ ಒಡಿಶಾ ಮೂಲದ ಕೃಷ್ಣ ಚಂದ್ರ ಸೇತಿ ನಗರದ ಟೆಕ್‌ ಪಾರ್ಕ್ವೊಂದರಲ್ಲಿ ಸೆಕ್ಯೂರಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಭಾಗ್ಯಶ್ರೀ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಹೀಗಾಗಿ, ಗುರುವಾರ ರಾತ್ರಿ 12 ಗಂಟೆವರೆಗೆ ಪತ್ನಿ ಭಾಗ್ಯಶ್ರೀಗೆ ಕೆಲಸವಿದ್ದ ಹಿನ್ನೆಲೆ ಮನೆಯಲ್ಲಿ ಕೃಷ್ಣ ಚಂದ್ರ ಏಕಾಂಗಿಯಾಗಿದ್ದ. ರಾತ್ರಿ 8 ಗಂಟೆ ಸುಮಾರಿಗೆ ಪಕ್ಕದ ಮನೆಯಲ್ಲಿ ಇದ್ದ ಮಹಾನಂದಾ ಎಂಬ ಯುವತಿ ಮನೆಯಿಂದ ಹೊರಗೆ ಬಂದಾಗ, ಆರೋಪಿ ಏಕಾಏಕಿ ಆಕೆಯನ್ನು ತನ್ನ ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿ ಅತ್ಯಾಚಾರಕ್ಕೆ(Rape )ಯತ್ನಿಸಿದ್ದಾನೆ. ಈ ಸಂದರ್ಭ ಯುವತಿ ಜೋರಾಗಿ ಕಿರುಚಾಡಿ ಪ್ರತಿರೋಧವೊಡಿದ್ದು, ಇದರಿಂದ ಕೋಪಗೊಂಡ ಆರೋಪಿ ಆಕೆ ಕುತ್ತಿಗೆಗೆ ಹಾಕಿದ್ದ ದಾರವನ್ನೇ ಬಿಗಿಯಾಗಿ ಹಿಡಿದುಕೊಂಡು ಬಾಯಿ ಮುಚ್ಚಿ ಉಸಿರುಗಟ್ಟಿಸಿ ಹತ್ಯೆ (Murder)ಮಾಡಿದ್ದಾನೆ. ಆಬಳಿಕ ಮೃತದೇಹವನ್ನು(Dead body)ಮನೆಯ ಬೆಡ್ ಶೀಟ್ ನಲ್ಲಿ ಸುತ್ತಿ   ಮನೆಯ ಡ್ರಮ್ ನಲ್ಲಿ ಬಚ್ಚಿಟ್ಟಿದ್ದಾನೆ.ಆನಂತರ ಬೆಳಿಗ್ಗೆ ಹೆಣವನ್ನು ಆಕೆಯ ಮನೆ ಮುಂದೆ ಎಸೆದಿದ್ದಾನೆ.

ಬೆಳಿಗ್ಗೆ ವೇಳೆಗೆ ಮೃತದೇಹವನ್ನು ಆಕೆಯ ಮನೆ ಎದುರಲ್ಲೇ ಎಸೆದು ಆರೋಪಿ ಮನೆ ಸೇರಿಕೊಂಡಿದ್ದ. ಮೃತದೇಹವನ್ನು ತಪಾಸಣೆ ಮಾಡಿದ ಸಂದರ್ಭ ಮಹಾನಂದಾಳ ಚಪ್ಪಲಿಗಳು ಮನೆಯಲ್ಲೇ ಇತ್ತು. ಇನ್ನು ಮೃತದೇಹ ಪಾದಗಳಲ್ಲಿ ಯಾವುದೇ ಧೂಳು ಕೂಡ ಕಂಡುಬಂದಿಲ್ಲ. ಹೀಗಾಗಿ, ಮನೆಯ ಸುತ್ತಮುತ್ತಲಿನಲ್ಲೇ ಮಹಾನಂದಾಳ ಕೊಲೆಯಾಗಿದ್ದು, ಪೊಲೀಸರಿಗೆ ಖಾತ್ರಿಯಾಗಿತ್ತು.

ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ ಪೊಲೀಸರು, ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ಮಾಡಿದ್ದು, ಆಗ ಪಕ್ಕದ ಮನೆಯ ಕೃಷ್ಣ ಚಂದ್ರ ಸೇತಿ ನಡೆಯಿಂದ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ಸಂದರ್ಭ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gruha Jyothi Scheme: ಜನಸಾಮಾನ್ಯರೇ, 200 ಯುನಿಟ್ ಉಚಿತ ವಿದ್ಯುತ್ ಬಗ್ಗೆ ಬಿಗ್ ಅಪ್ಡೇಟ್!!!

Leave A Reply

Your email address will not be published.