ಮನವೊಲಿಸಲು ತವರು ಮನೆಗೆ ಬಂದ ಗಂಡನಿಗೇ ಆಸಿಡ್‌ ಕುಡಿಸಿದ ಪತ್ನಿ ! ನರಳಿ ನರಳಿ ಸತ್ತ ಗಂಡ!

gujarat news crime news wife killed husband inlaws involved

ಅಳಿಯನೋರ್ವನಿಗೆ ಆಸಿಡ್‌ ನೀಡಿ ಹತ್ಯೆ ಮಾಡಿದಂತಹ ಘಟನೆಯೊಂದು ಅಹಮದಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣ ಕುರಿತು ಪೊಲೀಸರು ಪತ್ನಿ, ಅತ್ತೆ, ಮಾವ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರ ತನಿಖೆ ಇನ್ನೂ ಮುಂದುವರಿದಿದೆ. ಈ ರೀತಿ ಮಾರಣಾಂತಿಕ ಹಲ್ಲೆಗಳು ಈ ಹಿಂದೆ ಕೂಡಾ ನಡೆದಿತ್ತು ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಎರಡು ಹೆಣ್ಣುಮಕ್ಕಳ ತಂದೆ ಈಗ ತಬ್ಬಲಿಯಾಗಿದ್ದಾರೆ.

ಈ ಘಟನೆಯು ಅಹಮದಾಬಾದ್‌ನ ಮಧುಪುರ ಪ್ರದೇಶದಲ್ಲಿ ನಡೆದಿದೆ. ಗೀತಾ ಮಂದಿರದ ಬಳಿ ವಾಸ ಮಾಡುತ್ತಿದ್ದ ಪ್ರಹ್ಲಾದ್‌ ಭಾಯಿ ವಘೇಲಾ ತವರು ಮನೆಗೆ ಹೋದ ಹೆಂಡತಿಯನ್ನು ವಾಪಾಸು ಕರೆತರಲು ಬಯಸಿದ್ದನು. ಹಾಗಾಗಿ ಕೋಪಗೊಂಡ ಹೆಂಡತಿಯನ್ನು ಸಮಾಧಾನಪಡಿಸಲು ಆ.11ರ ರಾತ್ರಿ ತನ್ನ ಅತ್ತೆಯ ಮನೆಗೆ ಹೋಗಿದ್ದ. ಆದರೆ ಹೆಂಡತಿ ಕೋಪಗೊಂಡಿದ್ದು, ಇಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಪತ್ನಿ, ಅತ್ತೆ, ಮಾವ ಸೋದರ ಮಾವ ಪ್ರಹ್ಲಾದ್‌ ಭಾಯಿ ಅವರನ್ನು ಥಳಿಸಿದ್ದಾರೆ.

ಇದಾದ ಬಳಿಕ ಆ ನಾಲ್ವರು ಸೇರಿ ಪ್ರಹ್ಲಾದ್ ಭಾಯ್ ಅವರನ್ನು ಮನೆಯ ಕೆಳಗೆ ಕರೆದೊಯ್ದು ಆಸಿಡ್ ನೀಡಿದ್ದಾರೆ. ಪೊಲೀಸರು ಬಂದ ನಂತರ, ಪ್ರಹ್ಲಾದ್ ಭಾಯಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ವೇಳೆ ಸಾವನ್ನಪ್ಪಿದರು. ಪ್ರಹ್ಲಾದ್ ಭಾಯಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ದೈಹಿಕ ಗಾಯ ಮತ್ತು ಆಸಿಡ್ ಸೇವನೆ ಕಾರಣ ಎಂದು ಹೇಳಲಾಗಿದೆ.

2010ರಲ್ಲಿ ಪ್ರಹ್ಲಾದ್‌ ಭಾಯ್‌ ವಘೇಲಾ ಮತ್ತು ಶಿಲ್ಪಾ ಮದುವೆಯಾಗಿದ್ದರು. ಇವರಿಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹೆಂಡತಿ ತವರು ಮನೆಯಲ್ಲಿದ್ದರು. ಈ ಘಟನೆಯ ನಂತರ ಮನೆ ಮಂದಿ ಪರಾರಿಯಾಗಿದ್ದು, ಇವರ ಬಂಧನಕ್ಕೆ ಮಧುಪುರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೂಡಲೇ ನಾಲ್ವರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.