Ration Card:ಈ ತಪ್ಪುಗಳು ರೇಷನ್ ಕಾರ್ಡ್ ನಲ್ಲಿದ್ದರೆ ನಿಮಗೆ ಅನ್ನ ಭಾಗ್ಯದ ಲಾಭ ದೊರಕಲ್ಲ!!

Ration card latest news if there are mistakes in ration card correct them immediately otherwise not get Anna Bhagya benefit

Ration Card: ರಾಜ್ಯ( Karnataka Government)ಹಾಗೂ ಕೇಂದ್ರ ಸರ್ಕಾರ(Central Government)ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ( Free Ration)ಕೂಡ ಒಂದಾಗಿದೆ. ಸದ್ಯ, ಪಡಿತರ ಚೀಟಿದಾರರಿಗೊಂದು ಮುಖ್ಯ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಗಾಗಿ ನೇರ ಲಾಭ ವರ್ಗಾವಣೆ (DBT) ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದೆ. ಅಂದರೆ ಈ ಹಣವನ್ನು ಅವರ ಆಧಾರ್ ಸಂಖ್ಯೆಗಳಿಗೆ (Aadhaar Number) ಲಿಂಕ್ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ಆಗಸ್ಟ್ ತಿಂಗಳಿನಿಂದ ಸರ್ಕಾರವು ಅನ್ನಭಾಗ್ಯ ಯೋಜನೆಯ (Annabhagya Yojana) ರೇಷನ್ ನೀಡಲು ತೀರ್ಮಾನ ಮಾಡಿದ್ದು, ಇನ್ನು ಉಚಿತ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರವೇ ನಿಮಗೆ ಯೋಜನೆಯ ಲಾಭ ಲಭ್ಯವಾಗುತ್ತದೆ.ಸರ್ಕಾರ ನೀಡುತ್ತಿರುವ ಉಚಿತ ರೇಷನ್ ಪಡೆಯಲು ನೀವು ಈ ಕೆಲಸವನ್ನು ಮೊದಲು ಮಾಡಿ.

ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಮಗು ಇಲ್ಲವೇ ಯಾವುದೇ ಸದಸ್ಯರ ಹೆಸರು ಸೇರಿಸುವ ಇಲ್ಲವೇ ಹೆಸರನ್ನು ಬದಲಾವಣೆ ಮಾಡಬೇಕಿದ್ದರೆ, ನೀವು ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡಬೇಕಾಗಿರುವ ಮಗು ಅಥವಾ ವ್ಯಕ್ತಿಯ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ ದಾಖಲೆಗಳನ್ನು ನಿಮ್ಮ ಹತ್ತಿರದ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಬದಲಾಯಿಸಿಕೊಳ್ಳಬಹುದು.ನೀವು ಕೊಟ್ಟ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ನಿಮ್ಮ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಲಾಗುತ್ತದೆ. ಇದರ ಬಳಿಕ ನಿಮ್ಮ ಡೇಟಾವನ್ನು ಜಿಲ್ಲಾ ಅಥವಾ ಬ್ಲಾಕ್ ಮಟ್ಟದಲ್ಲಿ ಪರಿಶೀಲನೆ ಮಾಡಿಸಲಾಗುತ್ತದೆ. ಸರಿಯಾಗಿ ಪರಿಶೀಲನೆ ನಡೆಸಿದ ಬಳಿಕ ಹೊಸ ರೇಷನ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ.

ರಾಜ್ಯ ಸರ್ಕಾರ ರೇಷನ್ ಕಾರ್ಡ್ (Ration Card Update) ಪರಿಷ್ಕರಣೆ ಮಾಡಲು ಅವಕಾಶ ಕಲ್ಪಿಸಿದ್ದು,ಹೀಗಾಗಿ, ರೇಷನ್ ಕಾರ್ಡ್ ನಲ್ಲಿ ಯಾವುದಾರು ತಪ್ಪುಗಳಿದ್ದರೆ ಈಗಲೇ ತಿದ್ದುಪಡಿ ಮಾಡಿಕೊಳ್ಳಬಹುದು.ನಿಮ್ಮ ಮೊಬೈಲ್ ಸಂಖ್ಯೆ ಬದಲಾವಣೆ, ಅಥವಾ ಆಧಾರ್‌ ಕಾರ್ಡ್‌ (Aadhaar Card) ಅಪ್ಲೇಟ್ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಸಿಕೊಳ್ಳಿ. ಯಾವುದೇ ವ್ಯವಹಾರಕ್ಕೂ ಲಿಂಕ್ ಮಾಡಿಸುವಾಗ ನೀವು ಬಳಕೆ ಮಾಡುವ ಮೊಬೈಲ್ ನಂಬರ್ (Mobile Number) ಅನ್ನು ಮಾತ್ರ ನೀಡುವುದು ಉತ್ತಮ. ಕೆಲವೊಮ್ಮೆ OTP ಬಂದಾಗ ನಿಮಗೆ ನೀವು ಉಪಯೋಗ ಮಾಡದೇ ಇರುವ ಮೊಬೈಲ್ ಸಂಖ್ಯೆಗೆ ಬಂದರೆ ಆಗ ಸರ್ಕಾರದ ಅನೇಕ ಯೋಜನೆಗಳ(Govt Schemes) ಪ್ರಯೋಜನ ನಿಮಗೆ ಸಿಗದೇ ಹೋಗುವ ಸಾಧ್ಯತೆಯಿದ್ದು, ಹೀಗಾಗಿ, ಹೆಚ್ಚಿನ ಯೋಜನೆಯ ಪ್ರಯೋಜನ ಪಡೆಯಲು ಮೊಬೈಲ್ ನಂಬರ್ ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: Crime News:ಪಕ್ಕದಮನೆಯ ಯುವತಿಯ ಮೇಲೆ ಅಂಕಲ್‌ ಕಣ್ಣು! ಆರೋಪಿ ಪತ್ತೆಗೆ ಕ್ಲೂ ಕೊಟ್ಟ ಆತನ ಕಾಲಿನ ಧೂಳು! ಹೇಗಂತೀರಾ?

Leave A Reply

Your email address will not be published.