ಸುಳ್ಯ : ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ

Dakshina Kannada news a dead body found in sullia payaswini river

Sullia : ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ(Sullia).

ಆ.13 ರಂದು ಸ್ಥಳೀಯರು ಮೀನು ಹಿಡಿಯಲು ನದಿ ತೀರಕ್ಕೆ ಹೋಗಿದ್ದಾಗ ನದಿಯಲ್ಲಿ ಮೃತದೇಹ ಕಂಡು ಬಂದಿದೆ‌.ಸ್ಥಳೀಯರು ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ಅವರಿಗೆ ವಿಷಯ ತಿಳಿಸಿದ್ದಾರೆ.

ಸದಸ್ಯ ಸುದೇಶ್ ಅರಂಬೂರು ಅವರು ಸುಳ್ಯ ಠಾಣಾ ಪೊಲೀಸರಿಗೆ ವಿಷಯ ತಿಳಿಸಿದರು.

ಸ್ಥಳಕ್ಕೆ ಸುಳ್ಯ ಪೋಲಿಸರ ಆಗಮಿಸಿದ ಬಳಿಕ ಪೈಚಾರಿನ ಮುಳುಗು ತಜ್ಞರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಲಾಯಿತು.

ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದ ಆಧಾರ್ ಕಾರ್ಡ್ ಬದಲಾವಣೆಗೆಂದು ಅರಂತೋಡಿಗೆ ಹೋಗಿದ್ದ ಚೆಂಬು ಗ್ರಾಮದ ಮಿನುಂಗೂರಿನ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಅವರ ಮೃತ ದೇಹವಾಗಿರಬಹುದೆಂದು ಸಂಶಯಿಸಲಾಗಿದೆ.

ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಿರುವುದಾಗಿ ತಿಳಿದು ಬಂದಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Death News:ಸೊಂಟಕ್ಕೆ ಮಗು ಕಟ್ಟಿಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು!

Leave A Reply

Your email address will not be published.