School holiday: ಈ ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಘೋಷಣೆ! ಕಾರಣ ಇಲ್ಲಿದೆ

Education news Holiday announcement for schools in this district today

School holiday: ಚಾಲಕನೋರ್ವ ಆನೆ ದಾಳಿಗೆ (Elephant Attack) ಬಲಿಯಾಗಿರುವ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಈ ಕಾರಣದಿಂದ ಇಂದು ಕೊಡಗು ಜಿಲ್ಲೆಯ ಹಲವು ಶಾಲೆಗಳಿಗೆ ರಜೆ (School holiday) ಘೋಷಣೆ ಮಾಡಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಕಟ್ಟೆಮಾಡು ದೇವಪ್ಪ ಎಂಬುವವರೇ ಈ ದಾಳಿಗೆ ಬಲಿಯಾದವರು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ, ಅಭ್ಯತ್‌ ಮಂಗಲ, ಮಡಿಕೇರಿ ತಾಲೂಕಿನ ಹೊಸ್ಕೇರಿ, ಮುರಗೋಡ, ಕಟ್ಟೆಮಾಡು, ಅರೆಕಾಡು, ಗುಯ್ಯ, ಸಿದ್ದಾಪುರದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಮೂಲಕ ಡಿಸಿಪಿಐ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ತಾಲೂಕಿನ ಅರೆಕಾಡು ಗ್ರಾಮದಲ್ಲಿ ನಿನ್ನೆ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಕಟ್ಟೆಮಾಡು ದೇವಪ್ಪ ಬಲಿಯಾಗಿದ್ದರು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದೇವಪ್ಪ ಅವರು ಕೆಲಸದ ನಿಮಿತ್ತ ಟ್ರ್ಯಾಕ್ಟರ್‌ ಚಾಲನೆ ಮಾಡಿಕೊಂಡು ಅರೆಕಾಡು ಗ್ರಾಮಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ. ದೇವಪ್ಪ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಂದ ಹಾಗೆ ಈ ಘಟನೆ ನಡೆಯೋ ಮೊದಲು ಕಾಡಾನೆಗಳು ಕಾಫಿ ತೋಟಕ್ಕೆ ಬಂದಿದ್ದರಿಂದ ಈ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗೆ ಕಳಿಸೋ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಈಗ ಸದ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ಶಾಲೆಗೆ ರಜೆ ಸಾರಲಾಗಿದೆ.

ಇದನ್ನೂ ಓದಿ: ಸುಳ್ಯ : ಪಯಸ್ವಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ

Leave A Reply

Your email address will not be published.