Kodi Mutt Swamiji: 2024 ರೊಳಗೆ ಮತ್ತೊಂದು ಭೀಕರ ಅವಘಡ- ಕೋಡಿ ಶ್ರೀ ಭೀಕರ ಭವಿಷ್ಯವಾಣಿ

Kodi mutt Swamiji Kodi Sree predicts a major dangerous things awaits to happen

Kodi Mutt Swamiji: ಭವಿಷ್ಯ ನುಡಿಯುವಲ್ಲಿ ಪ್ರಸಿದ್ಧಿ ಪಡೆದ ಕೋಡಿಮಠದ ಶ್ರೀಗಳಿಂದ ಇನ್ನೊಂದು ಸ್ಫೋಟಕ ಭವಿಷ್ಯ ಹೊರಬಿದ್ದಿದೆ. ಭಾನುವಾರ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠ ಶ್ರೀ ಈ ಭವಿಷ್ಯವಾಣಿಯ ಕುರಿತು ಉಲ್ಲೇಖ ಮಾಡಿದ್ದಾರೆ.

ಈ ಬಾರಿ ಜಾಗತಿಕವಾಗಿ ಮೂರು ಗಂಡಾಂತರ ನಡೆಯಲಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿದೆ. ವಿಜಯದಶಮಿಯಿಂದ ಸಂಕ್ರಾಂತಿಯವರೆಗೆ ದುರ್ಘಟನೆಗಳು ನಡೆಯುತ್ತದೆ. ಅಕಾಲಿಕ ಮರಣ ಸಂಭವಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಇದೇ ಸಂದರ್ಭದಲ್ಲಿ ಅವರು 2024ರ ಯುಗಾದಿಯೊಳಗೆ ಮೂರು ಮಂದಿ ಮಹಾನ್‌ ವ್ಯಕ್ತಿಗಳಿಗೆ ಅಪಾಯವಿದೆ ಎಂಬ ಭೀಕರ ಭವಿಷ್ಯವನ್ನು ನುಡಿದಿದ್ದಾರೆ. ಮಳೆ ಬಂದು ದೊಡ್ಡ ಪಟ್ಟಣಗಳಿಗೆ ಹಾನಿಯಾಗಲಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.