Big Boss Kannada: ಕಿರುತೆರೆಯ ಮಹಾ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 10 ಆರಂಭ! ದಿನಾಂಕ ನಿಗದಿ!

Entertainment TV shows Bigg Boss Kannada season 10 and ott 2 work starts

Bigg Boss Kannada: ಮನರಂಜನೆಯ ಉಣಬಡಿಸುವ ಕನ್ನಡ ಬಿಗ್‌ಬಾಸ್‌ ಸೀಸನ್ 10 ಆರಂಭಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು, ಅತೀ ಶೀಘ್ರದಲ್ಲಿಯೇ ಪ್ರೇಕ್ಷಕರನ್ನು ರಂಜಿಸಲು ಅಣಿಯಾಗಿದೆ. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ (Bigg Boss Kannada) 10ನೇ ಸೀಸನ್ ಗೆ ಭರದ ತಯಾರಿ ನಡೆಯುತ್ತಿದೆ.

ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು ಈ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಅವರ ನಿರೂಪಣೆ ಹಾಗೂ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿದೆ. ‘ಬಿಗ್ ಬಾಸ್’ ಶೋ ಆಯೋಜಕರು ಕಳೆದ ಸೀಸನ್ ನಲ್ಲಿ ಬಿಗ್ ಬಾಸ್ ಓಟಿಟಿ” ಶೋ ನಡೆಸಿ, ಆ ಬಳಿಕ ಸೀಸನ್ 9 ನಡೆಸಿದ್ದರು. ಅದೇ ರೀತಿ, ಈ ಬಾರಿ ಕೂಡ ಓಟಿಟಿ ಸೀಸನ್ 2 ನಡೆದ ನಂತರವೇ ಬಿಗ್‌ಬಾಸ್ ಸೀಸನ್ 10 (bigg boss kannada season 10) ನಡೆಯಲಿದೆ.ಮುಂದಿನ ತಿಂಗಳು ಸೆಪ್ಟೆಂಬರ್ನಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 2 ಶುರುವಾಗಲಿದೆಯಂತೆ.

ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ (Innovative Film City) ಶೋಗೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ದೊಡ್ಮನೆ ಆಟ ನೋಡಲು ಕೌತುಕದಿಂದ ಕಾಯುತ್ತಿರುವ ಅಭಿಮಾನಿಗಳೂ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂದು ಕುತೂಹಲದಿಂದ ಚರ್ಚೆ ನಡೆಸುತ್ತಿದ್ದಾರೆ. ಕನ್ನಡ ಬಿಗ್‌ಬಾಸ್ ಸೀಸನ್ 10 ಕ್ಕೆ ಭರದ ತಯಾರಿಗಳು ನಡೆಯುತ್ತಿದ್ದು, ಪ್ರೇಕ್ಷಕರಂತು ಶೋ ಯಾವಾಗ ಆರಂಭವಾಗುವುದೋ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮುಂದಿನ ತಿಂಗಳಿನಲ್ಲಿ ಬಿಗ್ ಬಾಸ್ ಸೀಸನ್ 2ರ ಓಟಿಟಿ ನಡೆಯಲಿದೆ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿವೆ.

ಇನ್ನೂ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬ ಪ್ರಶ್ನೆಗೆ ಕಿರುತೆರೆ ನಟಿ ನಮ್ರತಾ ಗೌಡ, ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್ ದೊಡ್ಮನೆ ಆಟಕ್ಕೆ ಸ್ಪರ್ಧೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ,ಬಿಗ್‌ಬಾಸ್‌ ಓಟಿಟಿ ಎರಡನೇ ಸೀಸನ್‌ಗೆ ಸಿದ್ದತೆ ನಡೆಸುತ್ತಿರುವ ಕಲರ್ಸ್ ಕನ್ನಡ ಚಾನೆಲ್ ಮತ್ತು ಶೋ ತಂಡ ಸ್ಪರ್ಧಿಗಳಿಗಾಗಿ ಹುಡುಕಾಟ ಮಾಡುತ್ತಿದೆಯಂತೆ.ಇದರ ಜೊತೆಗೆ , ಬಿಗ್‌ಬಾಸ್ ಸೀಸನ್ 10 ಕ್ಕೂ ಸ್ಪರ್ಧಿಗಳಿಗೂ ಕೂಡ ಹುಡುಕಾಟ ಭರದಿಂದ ನಡೆಯುತ್ತಿದೆ ಎಂಬ ಊಹಾಪೋಹದ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ.

ಇದನ್ನೂ ಓದಿ: Viral Video:ಫೋಟೋಶೂಟ್ ಎಡವಟ್ಟು! ಬಾಯಿಯಿಂದ ಬಾಯಿಗೆ ಹೊಗೆ ಬಿಟ್ಟ ಜೋಡಿ, ನಂತರ ಆದದ್ದೇ ಅಚಾತುರ್ಯ!!!

Leave A Reply

Your email address will not be published.