How to clean silver at home: ನಿಮ್ಮ ಮನೆಯ ಬೆಳ್ಳಿ ಸಾಮಾನು ಕಪ್ಪಾಗಿದೆಯೇ? ಮನೆಯಲ್ಲಿರುವ ಈ ವಸ್ತುಗಳಿಂದಲೇ ಸಿಂಪಲ್‌ ಟ್ರಿಕ್ಸ್ ಟ್ರೈ ಮಾಡಿ

How to clean silver at home Try simple tricks from these household items

How to clean silver at home: ಅನಾದಿಕಾಲದಿಂದಲೂ ಅಂದರೆ ರಾಜ ಮಹಾರಾಜರ ಕಾಲದಲ್ಲೂ ಮಹಾರಾಜರುಗಳು ಬೆಳ್ಳಿ, ಬಂಗಾರದಿಂದ ಕೂಡಿದ ಪರಿಕರಗಳನ್ನು ಬಳಸುತ್ತಿದ್ದು ಇದನ್ನು ಶ್ರೀಮಂತಿಕೆಯ ಸಂಕೇತವೆಂದೇ ಹೇಳಲಾಗುತ್ತಿತ್ತು. ಇಂದಿನ ಕಾಲದಲ್ಲೂ ಕೂಡಾ ಈ ಬಂಗಾರ, ಬೆಳ್ಳಿಯ ವಸ್ತುಗಳಿಗೆ ಮನಸೋತವರೇ ಹೆಚ್ಚು.

ಆದರೆ ವರ್ಷಗಳು ಉರುಳಿದಂತೆ ಆಭರಣಗಳು ಬಣ್ಣ ಮಾಸಿದ ರೀತಿ ಕಾಣುತ್ತದೆ. ಇದರಲ್ಲಿ ಚಿನ್ನ ಬೆಳ್ಳಿ ಎರಡು ಕೂಡಾ ಸೇರಿದೆ. ಇಂದು ನಾವು ಇಲ್ಲಿ ಬೆಳ್ಳಿಯ ಒಡವೆಗಳನ್ನು ಹೊಸದಾಗಿ ಕಾಣುವ ರೀತಿ ಹೇಗೆ ಮಾಡುವುದು ಎಂಬುದರ ಕುರಿತು ಸಿಂಪಲ್‌ ಟ್ರಿಕ್ಸ್‌ (How to clean silver at home) ತಿಳಿಯೋಣ ಬನ್ನಿ.

ಅಡುಗೆಯ ರುಚಿ ಹೆಚ್ಚಿಸುವಲ್ಲಿ ಹುಣಸೆ ಹಣ್ಣಿನ ಪಾತ್ರ ಗಮನಾರ್ಹ. ಈ ಹುಣಸೆ ಹುಳಿಯನ್ನು ಸಣ್ಣ ಉಂಡೆ ಗಾತ್ರದಲ್ಲಿ ತೆಗೆದುಕೊಂಡು ನೀರಿನಲ್ಲಿ ಮುಳುಗಿಸಿ, ನಂತರ ನಿಮ್ಮಲ್ಲಿರುವ ಬೆಳ್ಳಿಯ ವಸ್ತುಗಳ ಮೇಲೆ ಸರಿಯಾಗಿ ಉಜ್ಜಿ. ಕಪ್ಪು ಕಲೆಗಳು ಹೋಗುವವರೆಗೆ ಉಜ್ಜಿ, ನಂತರ ಶುದ್ಧವಾದ ನೀರಿನಲ್ಲಿ ತೊಳೆಯಿರಿ. ಬೆಳ್ಳಿ ಆಭರಣ ಫಳ ಫಳ ಹೊಳೆಯುತ್ತದೆ.

ಬಿಸಿ ನೀರಿಗೆ ಒಂದು ಟೇಬಲ್‌ ಚಮಚ ಡಿಟರ್ಜೆಂಟ್‌ ಪೌಡರ್‌ ಹಾಕಿ, ಮಿಕ್ಸ್‌ ಮಾಡಿ, ನೊರೆ ಬರುವ ರೀತಿ ಮಾಡಿಕೊಳ್ಳಿ. ನಂತರ ಅದರಲ್ಲಿ ಬೆಳ್ಳಿ ಸಾಮನು ಮುಳುಗಿಸಿ ಹತ್ತು ನಿಮಿಷ ಇಡಿ. ನಂತರ ಶುದ್ಧವಾದ ನೀರಿನಿಂದ ತೊಳೆಯಿರಿ.

ಒಂದು ಸಣ್ಣ ಬಕೆಟ್ ನಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧಕಪ್‌ ಬಿಳಿ ವಿನೆಗರ್‌ ಹಾಕಿ, ನಂತರ ಎರಡು ಚಮಚ ಅಡುಗೆ ಸೋಡಾ ಅಥವಾ ಬೇಕಿಂಗ್‌ ಸೋಡಾ ಹಾಕಿ, ಮಿಕ್ಸ್‌ ಮಾಡಿ. ಈ ಮಿಶ್ರಣದಲ್ಲಿ ಬೆಳ್ಳಿ ಆಭರಣ ಗಳನ್ನು ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಇಟ್ಟು ನಂತರ ಶುದ್ಧವಾದ ನೀರಿನಿಂದ ತೊಳೆಯಿರಿ.

ಒಂದು ಚಮಚ ಬೇಕಿಂಗ್‌ ಸೋಡಾಗೆ ಸ್ವಲ್ಪ ನೀರು ಬೆರೆಸಿ, ಪೇಸ್ಟ್‌ ತರಹ ಮಾಡಿಟ್ಟುಕೊಳ್ಳಿ. ನಂತರ ಹತ್ತಿಬಟ್ಟೆಯನ್ನು ಈ ಪೇಸ್ಟ್‌ನಲ್ಲಿ ಅದ್ದಿಕೊಂಡು ಬೆಳ್ಳಿ ಸಾಮಾನುಗಳ ಮೇಲೆ ಸರಿಯಾಗಿ ತಿಕ್ಕಿ ಉಜ್ಜಿಕೊಂಡರೆ ಕಲೆ ಮಾಯವಾಗುತ್ತದೆ.

ಹಲ್ಲುಜ್ಜುವ ಪೇಸ್ಟ್‌ ನಿಮ್ಮ ಹಲ್ಲುಗಳನ್ನು ಹೇಗೆ ಬೆಳ್ಳಗೆ ಮಿರಮಿರ ಮಿಂಚುವ ಹಾಗೆ ಮಾಡುತ್ತದೆಯೋ, ಹಾಗೆನೇ ಇಲ್ಲಿ ಕೂಡಾ ಸಹಕಾರಿ. ಹಲ್ಲುಜ್ಜುವ ಪೇಸ್ಟನ್ನು ಕೈ ಬೆರಳುಗಳ ಸಹಾಯದಿಂದ ಉಜ್ಜಿಕೊಂಡರೆ ಬೆಳ್ಳಿಯಿಂದ ಮಾಡಲಾದ ವಸ್ತುಗಳ ಮೇಲಿನ ಕಲೆಗಳು ನಿವಾರಣೆಯಾಗುತ್ತದೆ.

ನಿಮಗಿದು ಗೊತ್ತೇ ಟೆಮೊಟೋ ಕೆಚಪ್‌ ಕೂಡಾ ಬೆಳ್ಳಿ ಆಭರಣಗಳ ಶುಚಿತ್ವದಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು. ಈ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಮೊದಲಿಗೆ ನೀವು ಟೆಮೆಟೊ ಕೆಚಪ್‌ನ್ನು ತೆಳ್ಳಗೆ ಇರುವ ಟವೆಲ್‌ ಮೇಲೆ ಹಾಕಿಕೊಂಡು ಕಲೆಯಾಗಿರುವ ಭಾಗಕ್ಕೆ ಸರಿಯಾಗಿ ಉಜ್ಜಿ, ನಂತರ ನೀರಿನಿಂದ ತೊಳೆದರೆ ರಿಸಲ್ಟ್‌ ನಿಮ್ಮ ಕಣ್ಣಮುಂದೆ.

ಇದನ್ನೂ ಓದಿ: Tulsi Vastu Tips: ತುಳಸಿ ನೀರಿನ ಮಹಿಮೆ ಬಗ್ಗೆ ನಿಮಗೆ ತಿಳಿದಿದೆಯೇ? ನಿಮ್ಮ ಈ ಸಮಸ್ಯೆಗಳನ್ನು ಬುಡಸಮೇತ ಹೋಗಲಾಡಿಸುತ್ತೆ ಈ ತುಳಸಿ ನೀರು!

Leave A Reply

Your email address will not be published.