Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಡವಾಗುತ್ತಿರುವುದೇಕೆ? ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಈ ಕುರಿತು ಬಿಗ್ ಅಪ್ಡೇಟ್!

Karnataka news gruhalakshmi scheme minister Lakshmi hebbalkar give a big update about gruhalakshmi Yojana

Lakshmi Hebbalkar: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಐದು ಗ್ಯಾರಂಟಿ (Congress Guarantee Shceme) ಯೋಜನೆಯ ಘೋಷಣೆ ಬಹು ಮುಖ್ಯ ಪಾತ್ರ ವಹಿಸಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಜಾರಿಗೆ ತರಲಾಗುತ್ತಿದೆ.

ರಾಜ್ಯ ಸರ್ಕಾರದ ( Karnataka Government) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ (Gruhalakshmi Scheme) ಕೂಡ ಒಂದಾಗಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿಯ ಹಣವನ್ನು ಮನೆಯ ಯಜಮಾನಿ ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಆದರೆ, ಈ ಯೋಜನೆಗೆ ಚಾಲನೆ ಯಾವಾಗ ಆಗಲಿದೆ ಎಂದು ಮಹಿಳಾ ಮಣಿಗಳು ಕಾತುಕದಿಂದ ಎದುರು ನೋಡುತ್ತಿದ್ದಾರೆ.ಪ್ರಸ್ತುತ ಈ ಯೋಜನೆಯು ಅರ್ಜಿ ಸಲ್ಲಿಕೆ ಹಂತದಲ್ಲಿದ್ದು, ಶೀಘ್ರದಲ್ಲೇ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಈ ಯೋಜನೆ ಪೂರ್ತಿ ಚಾಲನೆ ದೊರೆಯಲು ತಡವಾಗುತ್ತಿದ್ದು,ಇನ್ನು ಸಮಯ ಇದ್ದು, ಯೋಜನೆಯನ್ನು ವಿಸ್ತಾರ ಮಾಡಿದ್ದಲ್ಲಿ, ಎಪಿಎಲ್ ಕಾರ್ಡ್ ಇರುವವರಿಗೆ ಮತ್ತು GST ಕಟ್ಟುವವರಿಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ದೊರೆಯುವ ಸಾಧ್ಯತೆ ಇದೆ. ಸರ್ಕಾರದಿಂದ ಈ ಯೋಜನೆಯ ಸೌಲಭ್ಯ ಪಡೆಯುವುದು ಅರ್ಹತೆ ಇರುವ ಹೆಣ್ಣುಮಕ್ಕಳಿಗೆ ಮಾತ್ರ ಎಂದು ಹೇಳಲಾಗಿತ್ತು. ಆದ್ರೆ, ಅರ್ಹತೆ ಇಲ್ಲದವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.

ಇತ್ತೀಚೆಗೆ ಲಕ್ಷ್ಮೀ ಹೆಬ್ಬಾಳ್ವರ್ ಅವರು ಈ ಕುರಿತು ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಸಂದರ್ಭ ಮಾಹಿತಿ ನೀಡಿದ್ದಾರೆ. ಈ ವೇಳೆ ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮ ಪಕ್ಷವು, ಬಿಪಿಎಲ್ (BPL Card), ಎಪಿಎಲ್ ಕಾರ್ಡ್ (APL Card) ಎಂದು ಬೇಧ ಭಾವ ಮಾಡದೇ ಅರ್ಹತೆಯ ಬಗ್ಗೆ ತಕರಾರು ತೆಗೆಯದೇ ಟ್ಯಾಕ್ಸ್ ಕಟ್ಟುತ್ತಿರುವ ಮಹಿಳೆಯರಿಗು ಕೂಡ 11000 ಹಣ ನೀಡುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಏಕೆ ಈ ರೀತಿ ಕ್ರಮ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಲಕ್ಷ್ಮೀ ಹೆಬ್ಬಾಳರ್(Lakshmi Hebbalkar) ಅವರು ಉತ್ತರ ನೀಡಿದ್ದಾರೆ.ಈ ಯೋಜನೆಯು ಎಲ್ಲ ಮಹಿಳೆಯರಿಗೂ ಪ್ರಯೋಜನ ದೊರೆಯಬೇಕು ಎಂಬುದು ನಮ್ಮ ಸರಕಾರದ ಆಶಯವಾಗಿದ್ದು, ಆದರೆ ಈಗ ಸೂಚನೆಗಳನ್ನು ಬದಲಾಯಿಸಿ, ಒಟ್ಟು 1.53 ಕೋಟಿ ಲಕ್ಷ ಕುಟುಂಬಗಳ ಪೈಕಿ 1.28 ಕೋಟಿ ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ಸೌಲಭ್ಯ ದೊರೆಯುವಂತೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯದ ಎಲ್ಲಾ ಮಹಿಳೆಯರಿಗೂ ಯೋಜನೆಯ ಪ್ರಯೋಜನ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದ್ದರೂ ಕೂಡ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗದ ರೀತಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾದ ಹಿನ್ನೆಲೆ GST ಕಟ್ಟುವವರು, ಟ್ಯಾಕ್ಸ್ ಕಟ್ಟುವವರು ಮತ್ತು ಎಪಿಎಲ್ ಕಾರ್ಡ್ ಇರುವವರಿಗೆ ಯೋಜನೆಯ ಲಾಭ ನೀಡಬೇಕೋ ಬೇಡವೋ ಎಂಬ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಮಯ ಹಿಡಿಯಲಿದ್ದು, ಯೋಜನೆಯನ್ನು ವಿಸ್ತಾರ ಮಾಡಿದರೆ, ಎಪಿಎಲ್ ಕಾರ್ಡ್ ಇರುವವರಿಗೆ ಮತ್ತು GST ಕಟ್ಟುವವರಿಗೂ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಸಿಗಬಹುದು ಎಂದು ಲಕ್ಷ್ಮಿ ಹೆಬ್ಬಾಲ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: Big Boss Kannada:ಕಿರುತೆರೆಯ ಮಹಾ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 10 ಆರಂಭ! ದಿನಾಂಕ ನಿಗದಿ!

Leave A Reply

Your email address will not be published.