Crime News: ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಸೇರಿ ಮೂರು ರೈಲುಗಳಿಗೆ ಏಕಕಾಲದಲ್ಲಿ ಕಲ್ಲೆಸೆತ! ಪೊಲೀಸರಿಂದ ತೀವ್ರ ತನಿಖೆ

Karnataka news Three train stone pelted including Mangaluru kasargod express

Kasargod: ಕಾಸರಗೋಡು(Kasargod) ಕಣ್ಣೂರಲ್ಲಿ ಆಗಸ್ಟ್ 13 ರಂದು ರಾತ್ರಿ ಏಕ ಕಾಲದಲ್ಲಿ ಮೂರು ರೈಲು ಗಾಡಿಗಳಿಗೆ ಕಲ್ಲೆಸೆದು ಹಾನಿಗೈದ ಘಟನೆ ವರದಿಯಾಗಿದೆ.

ತಿರುವನಂತಪುರ – ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು(Train )ಗಾಡಿಯ ಹವಾನಿಯಂತ್ರಿತ ಬೋಗಿಗೆ ಕಣ್ಣೂರು ಸಮೀಪದ ವಳಪಟ್ಟಣಂನಲ್ಲಿ ಕಲ್ಲೆಸೆಯಲಾಗಿರುವ ಘಟನೆ ನಡೆದಿದೆ. ಮಂಗಳೂರಿನಿಂದ (Manglore – Chennai)ಚೆನ್ನೈಗೆ ಪ್ರಯಾಣಿಸುತ್ತಿದ್ದ ಚೆನ್ನೈ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಾಡಿಯ ಹವಾನಿಯಂತ್ರಿತ ಬೋಗಿಗಳಿಗೆ ಕಣ್ಣೂರು-ವಳಪಟ್ಟಣಂ ನಡುವೆ ಕಲ್ಲೆಸೆದು ಹಾನಿಗೈದ ಘಟನೆ ವರದಿಯಾಗಿದೆ. ಓಘಾ-ಎರ್ನಾಕುಳಂ ಎಕ್ಸ್‌ಪ್ರೆಸ್‌ ರೈಲು ಗಾಡಿಗೆ ನೀಲೇಶ್ವರದಲ್ಲಿ ಕಲ್ಲೆಸೆಯಲಾಗಿದ್ದು, ಇದರಿಂದ ಜನರಲ್‌ ಬೋಗಿಯ ಗಾಜಿಗೆ ಹಾನಿ ಉಂಟಾಗಿದೆ. ಸದ್ಯ, ಪೋಲಿಸರು ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕವಷ್ಟೇ ನೈಜ ಕಾರಣವೇನು ಎಂಬುದು ತಿಳಿಯಬೇಕಾಗಿದೆ.

ಇದನ್ನೂ ಓದಿ: Smartphone Tricks:ಸ್ಮಾರ್ಟ್ ಫೋನ್ ಡೇಟಾ ಬೇಗ ಖಾಲಿ ಆಗ್ತಿದೆಯಾ? ಈ ರೀತಿ ಡೇಟಾ ಸೆಟ್ಟಿಂಗ್ ಮಾಡಿದರೆ ನಿಮಗೆ ಲಾಭ ಖಂಡಿತ!

Leave A Reply

Your email address will not be published.