Crime News:ಮದುವೆ ಬಳಿಕ ‘ಸಂಭೋಗ’ ಕ್ಕೆ ನಿರಾಕರಿಸಿದ ಪತಿ! ಮೊಬೈಲಿನಲ್ಲಿತ್ತು ರಹಸ್ಯ ವಿಷಯ; ಹೆಂಡತಿ ಶಾಕ್!!!

Crime news Husband who does not have physical relationship with wife Big shock for wife who checked mobile

Crime News: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣ ವರದಿಯಾಗುತ್ತಲೇ ಇರುತ್ತವೆ. ಮದುವೆಯ(Marriage )ಎಂಬ ಸಂಬಂಧಕ್ಕೆ ಕಟ್ಟು ಬಿದ್ದ ಮೇಲೆ ಸಣ್ಣ ಸಣ್ಣ ಮನಸ್ತಾಪ, ಜಗಳ ಉಂಟಾಗುವುದು ಮಾಮೂಲಿ.ಆದರೆ, ಮದುವೆಯ ಬಳಿಕ ಟೆಕ್ಕಿ ಮಹಿಳೆಯೊಬ್ಬಳಿಗೆ ಗಂಡನ ಮನೆಯವರಿಂದ ಭಾರೀ ಮೋಸ ಉಂಟಾಗಿದ್ದು, ಸದ್ಯ,ಮಹಿಳೆ ಪೋಲಿಸ್ ಠಾಣೆಯ(Police Station)ಮೆಟ್ಟಿಲೇರಿದ ಘಟನೆ ವರದಿಯಾಗಿದೆ.

ಮದುವೆಯಾದ ಬಳಿಕ ಪ್ರತಿ ಬಾರಿ ಲೈಂಗಿಕತೆ ಕುರಿತ ವಿಚಾರ ಪ್ರಸ್ತಾಪವಾದಾಗ ಗಂಡ ಹೇಗಾದರೂ ಪಾರಾಗಲು ದಾರಿ ಹುಡುಕುತ್ತಿದ್ದ. ಮದುವೆಯಾದಾಗಿನಿಂದ ದೈಹಿಕ ಸಂಬಂಧ ಮುಂದೂಡುತ್ತಲೇ ಬರುತ್ತಿದ್ದ ಹಿನ್ನೆಲೆ ಹೆಂಡತಿಗೆ ಗಂಡನ ಮೇಲೆ ಅನುಮಾನ ಕಾಡಿದೆ.ಗಂಡನ ಬಗ್ಗೆ ಅನುಮಾನಗೊಂಡು ಆತನ ವಾಟ್ಸಾಪ್(WhatsApp), ಮೆಸೇಂಜರ್ ಪರಿಶೀಲಿಸಿದ ಸಂದರ್ಭ ಗಂಡ(Husband )ಸಲಿಂಗಿ(Gay )ಎಂಬ ವಿಚಾರ ಬೆಳಕಿಗೆ ಬಂದಿದೆ.

ಮಗ ಸಲಿಂಗಿ ಎಂಬ ವಿಚಾರ ಗೊತ್ತಿದ್ದರೂ ಕೂಡ ವರನ ಪೋಷಕರು ಯುವತಿಯ ಮನೆಗೆ ಈ ವಿಚಾರವನ್ನು ಮರೆ ಮಾಚಿದ್ದರಿಂದ ಕೋಪಗೊಂಡ ಮಹಿಳೆ ಗಂಡನ ಮನೆಯವರ ವಿರುದ್ದ ದೂರು ನೀಡಿದ್ದಾಳೆ. ಪತಿ ಸಲಿಂಗಿ ಎಂದು ತಿಳಿದು ವಿಚಾರ ಮುಚ್ಚಿಟ್ಟ ಕುರಿತು ಪ್ರಶ್ನೆ ಮಾಡಿದ ಸಂದರ್ಭ ಪತಿ ಮಡದಿಯ ಮೇಲೆ ಹಲ್ಲೆ ನಡೆಸಿದ್ದು, ಆತನ ಪೋಷಕರ ಬಳಿ ಮಹಿಳೆ ತನಗೆ ಆದ ಅನ್ಯಾಯದ ವಿರುದ್ದ ಪ್ರಶ್ನೆ ಮಾಡಿದಾಗ ಅವರು ಕೂಡ ಹೊಂದಿಕೊಂಡು ಹೋಗುವ ಉಪದೇಶ ನೀಡಿದ್ದಾರೆ. ಇದರಿಂದ ನೊಂದ ಟೆಕ್ಕಿ ಮಹಿಳೆ ಪತಿ ಮತ್ತು ಆತನ ಪೋಷಕರ ವಿರುದ್ಧ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆಟೋಗೆ ಡಿಕ್ಕಿ ಹೊಡೆದ ಲಾರಿ! ಜೇನು ಮಾರಲೆಂದು ಹೋಗುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು

Leave A Reply

Your email address will not be published.