Hindutva Politics: ಬಜರಂಗದಳ ಬ್ಯಾನ್‌ ಕುರಿತು ಮಹತ್ವದ ಮಾಹಿತಿ ನೀಡಿದ ಸರಕಾರ!!!

hindutva politics bajarang dal not ban in madhya pradesh says digvijaya singh

Hindutva Politics: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ರಾಜ್ಯಸಭಾ ಸಂಸದ ದಿಗ್ವಿಜಯ್‌ ಸಿಂಗ್‌ ಅವರು ಬಜರಂಗದಳ ನಿಷೇಧ ಕುರಿತು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಹೌದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಾಜ್ಯದಲ್ಲಿ ಬಜರಂಗದಳ ನಿಷೇಧ ಬಗ್ಗೆ ನಮ್ಮ ಗುರಿ ಇಲ್ಲ ಎಂದು ಹೇಳಿದ್ದಾರೆ. ಬಜರಂಗದಳದಲ್ಲಿ ಕೂಡಾ ಒಳ್ಳೆಯವರಿದ್ದಾರೆ ಎಂಬ ಮಾತನ್ನು ಕೂಡಾ ಹೇಳಿದ್ದಾರೆ.

ಅಂದ ಹಾಗೆ, ಹಿಂಸಾಚಾರ, ಗಲಭೆಯಲ್ಲಿ ಭಾಗವಹಿಸಿದವರನ್ನು ಯಾರನ್ನೂ ಬಿಡುವುದಿಲ್ಲ ಎಂಬ ಮಾತನ್ನು ಕೂಡಾ ಹೇಳಿದ್ದಾರೆ. ಚುನಾವಣೆ ಗೆಲ್ಲಲು ಹಿಂದುತ್ವ ಬೇಕು ಎಂಬ ಕಾರಣಕ್ಕಾಗಿಯೋ ಏನೋ ಹಿಂದು ವಿರೋಧದ ಯಾವ ವಿಚಾರಗಳನ್ನು ಹೇಳುತ್ತಿಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್‌ಅನ್ನು ಪ್ರಕಟಿಸಿತ್ತು. ಇದು ಬಜಳ ಚರ್ಚೆಗೆ ಒಳಗಾಗಿತ್ತು. ಹಾಗಾಗಿ ಈ ತಪ್ಪನ್ನು ಮಾಡಲು ಮಧ್ಯಪ್ರದೇಶದ ಸರಕಾರ ನಿರ್ಧರಿಸಿದಂತಿದೆ.

ದಿಗ್ವಿಜಯ್‌ ಸಿಂಗ್‌ ಅವರು ಬುಧವಾರ ಭೋಪಾಲ್‌ಗೆ ಬಂದ ಸಂದರ್ಭದಲ್ಲಿ ಆವಂತಿ ಬಾಯಿ ಲೋಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದ ಸಂದರ್ಭದಲ್ಲಿ ಹಿಂದುತ್ವದ ಬಗ್ಗೆ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗ, ಭಾರತದ ಸಂವಿಧಾನದ ಅಥವಾ ಹಿಂದೂ ರಾಷ್ಟ್ರದ ಪ್ರಮಾಣವಚನ ಸ್ವೀಕಾರದ ಕುರಿತು ಪ್ರಧಾನಿ, ಗೃಹಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಕೇಳಲು ಇಚ್ಛೆ ಪಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದರು.

Leave A Reply

Your email address will not be published.