Kodi Mutt Shree: ರಾಜ್ಯ ಸರಕಾರದ ಕುರಿತು ಕೋಡಿಶ್ರೀ ಭವಿಷ್ಯವಾಣಿ! ಪಾರ್ಲಿಮೆಂಟ್‌ ಎಲೆಕ್ಷನ್‌ ಬಗ್ಗೆ ಬಿಗ್‌ ಸುದ್ದಿ ನೀಡಿದ ಶ್ರೀ!!!

Karnataka politics prediction kodi mutt Swamiji predictions 2023 about parliament election

Kodi mutt Swamiji: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ((Hassan Kodi mutt Shivananda Shivayogi Rajendra Swamiji prediction) ಅವರು ರಾಜ್ಯಸರಕಾರದ ಕುರಿತು ಭವಿಷ್ಯವೊಂದನ್ನು ನುಡಿದಿದ್ದಾರೆ. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನೂ ಆಗಲ್ಲ, ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವರಿಲ್ಲ ರಾಜ್ಯ ಸರಕಾರಕ್ಕೆ ಏನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.

ಪಾರ್ಲಿಮೆಂಟ್‌ ಎಲೆಕ್ಷನ್‌ ಆದಮೇಲೆ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುವ ತೀರ್ಮಾನ ಆಗುತ್ತದೆ. ಪಾರ್ಲಿಮೆಂಟ್‌ ಚುನಾವಣೆ ಬಂದಾಗ
ದೇಶದಲ್ಲಿ ಯಾವ ಸರಕಾರ ಬರುತ್ತದೆ ಎಂದು ಹೇಳ್ತೀನಿ ಕೋಡಿ ಮಠದ ಸ್ವಾಮೀಜಿ ಹೇಳಿದರು.

ಮಳೆಯ ಬಗ್ಗೆ ರಾಜ್ಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಅನ್ನಕ್ಕೆ ತೊಂದರೆ ಇರುವುದಿಲ್ಲ. ಬೇಕಾದಷ್ಟು ಮಳೆ ಬರುತ್ತದೆ. ಪ್ರಕೃತಿಯಿಂದ ಹಾನಿ, ಶ್ರಾವಣದಲ್ಲಿ ಮಳೆಯ ಬಗ್ಗೆ ಜನರಿಗೆ ಅರಿವಾಗಲಿದೆ. ಕಾರ್ತಿಕದವರೆಗೆ ಮಳೆ ಆಗುತ್ತದೆ. ಮಳೆಯಿಂದ ಮತ್ತೆ ಅಪಾಯ ಆಗುವ ಸೂಚನೆಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ಯಾಂಟ್‌ ಬಟನ್‌ ನುಂಗಿದ ಎರಡು ತಿಂಗಳ ಹಸುಳೆ! ಆಸ್ಪತ್ರೆಗೆ ದಾಖಲಾದ ಮಗು, ಮುಂದೇನಾಯ್ತು ಗೊತ್ತೇ?

Leave A Reply

Your email address will not be published.