Honey Trap Case: ಹನಿಟ್ರ್ಯಾಪ್‌ಗೆ ಬಿದ್ದ ನಿವೃತ್ತ ಸರಕಾರಿ ಅಧಿಕಾರಿ, ಬೆತ್ತಲೆ ಫೋಟೋ ಇಟ್ಕೊಂಡು ಆಂಟಿ ಬ್ಲ್ಯಾಕ್ ಮೇಲ್, ಲಕ್ಷಲಕ್ಷ ಗುಳುಂ

Kodagu Crime news a woman is well honey trap of the old man by keeping a nude photo

Honey Trap Case: ಈ ಘಟನೆ ನಿಜಕ್ಕೂ ವಯೋವೃದ್ಧವರು ಬೆಚ್ಚಿಬೀಳಿಸುವಂತಹ ಘಟನೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿದ್ದ ಲೋಕೇಶ್‌ ಮತ್ತು ಸ್ನೇಹ ದಂಪತಿ ಮನೆಯಲ್ಲಿ ರೀನಾ ಅಣ್ಣಮ್ಮ ಎಂಬುವವರು ಉಳಿದುಕೊಂಡಿದ್ದರು. ಈಕೆಯನ್ನೇ ಈ ಚಾಲಾಕಿ ದಂಪತಿ ಗಂಡನನ್ನು ಕಳೆದುಕೊಂಡಿರುವ ರೀಣಾ ಅಣ್ಣಮ್ಮನನ್ನು ಬಳಸಿ ಹನಿ ಟ್ರ್ಯಾಪ್ (Honey Trap Case) ಬಳಸಿಕೊಂಡಿದ್ದರು. ಅಂದ ಹಾಗೆ ಈ ಮೂವರು ಕೊಡಗು ಮೂಲದವರು.

ವಯೋವೃದ್ಧವರ ಬಳಿಗೆ ಹೋಗಿ ರೀಣಾ ಅಣ್ಣಮ್ಮ ನನ್ನ ಮಗನಿಗೆ ಹುಷಾರಿಲ್ಲ ಹಣದ ನೆರವು ನೀಡಿ ಎಂದು ನಂಬರ್‌ ಕೊಟ್ಟು ಬರ್ತಿದ್ಳು. ಆಗ ಸಹಾಯಕ್ಕೆ ಬರುತ್ತಿದ್ದ ವೃದ್ಧವರನ್ನೇ ತನ್ನ ಖೆಡ್ಡಾಕ್ಕೆ ಬೀಳಿಸ್ತಿದ್ಳು.

ಈಕೆ ಆ ವಯೋವೃದ್ಧರ ಜೊತೆ ಸಲುಗೆಯಿಂದ ಆತ್ಮೀಯತೆಯಿಂದ ವರ್ತಿಸುತ್ತಿದ್ದಳು. ನಂತರ ರೂಂ ಮಾಡಿ ಅಲ್ಲಿಗೆ ಕರೆಯೋಕೆ ಶುರು ಮಾಡುತ್ತಿದ್ದಳು. ಅನಂತರ ಶುರು ಆಗುವುದು ಆಕೆಯ ಹನಿಟ್ರ್ಯಾಪ್‌ ಕೆಲಸ. ರೂಂ ಗೆ ಬರುತ್ತಿದ್ದ ವಯೋವೃದ್ಧರನ್ನು ಲೈಂಗಿಕ ಪ್ರಚೋದನೆಗೆ ಒಳಗಾಗುವಂತೆ ಮಾಡುತ್ತಿದ್ದಳು. ಯಾವಾಗ ಕುರಿ ಹಳ್ಳಕ್ಕೆ ಬಿತ್ತು ಅಂತ ಗೊತ್ತಾಗುತ್ತಿತ್ತೋ ಆವಾಗ ಎಲ್ಲವನ್ನೂ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದಳು. ನಂತರ ಈ ವೀಡಿಯೋಗಳನ್ನು ದಂಪತಿಗಳಾದ ಲೋಕೇಶ್‌ ಮತ್ತು ಸ್ನೇಹ ಅವರಿಗೆ ನೀಡುತ್ತಿದ್ದಳು.

ನಂತರದ ಆಟ ಈ ದಂಪತಿಗಳದ್ದು. ಆ ವೀಡಿಯೋ ಇಟ್ಟುಕೊಂಡು ವೃದ್ಧರನ್ನು ಬೆದರಿಸಿ ಹಣ ಕೀಳ್ತಿದ್ರು. ಇವರ ಈ ಖೆಡ್ಡಾಕ್ಕೆ ಬಿದ್ದ ನಿವೃತ್ತ ನೌಕರನೋರ್ವ ತನ್ನ ಪೆನ್ಶನ್‌ ಹಣ 82 ಲಕ್ಷ ಕಳೆದುಕೊಂಡು, ಮತ್ತೆ ಮತ್ತೆ ಬೇಡಿಕೆ ಇಟ್ಟ ಇವರುಗಳ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಡವಾಗುತ್ತಿರುವುದೇಕೆ? ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಈ ಕುರಿತು ಬಿಗ್ ಅಪ್ಡೇಟ್!

Leave A Reply

Your email address will not be published.