ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಎಳೆದೊಯ್ದ ಮೊಸಳೆ! ತಲೆ, ಕಾಲಿಲ್ಲದ ದೇಹ ಪತ್ತೆ

national news crocodile attack on women bathing at river odisha

ನದಿಯ ದಡದಲ್ಲಿ (River Bank) ಸ್ನಾನಮಾಡಲೆಂದು ಹೋದ ಮಹಿಳೆಯನ್ನು ಮೊಸಳೆಯೊಂದು ಕಚ್ಚಿಕೊಂಡು (Crocodile Attack) ನೀರಿಗೆ ಎಳೆದೊಯ್ದಿರುವ ಭೀಕರ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಜೋತ್ಸ್ಯಾ ರಾಣಿ (35ವರ್ಷ) ಎಂಬಾಕೆಯೇ ಸಾವಿಗೀಡಾದ ಮಹಿಳೆ. ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ.

ಒಡಿಶಾದ ಜಾಜ್‌ಪುರ ಜಿಲ್ಲೆಯ ಬಿರುಪ ನದಿಗೆ (Birupa River) ಸ್ನಾನಮಾಡಲೆಂದು ಹೋದ ಮಹಿಳೆ, ಒಂಟಿಯಾಗಿದ್ದಳು. ಕೂಡಲೇ ಮೊಸಳೆ ಆಕೆಯ ಮೇಲೆ ದಾಳಿ ನಡೆಸಿ ಆಕೆಯನ್ನು ನೀರಿಗೆ ಎಳೆದುಕೊಂಡು ಹೋಗಿದೆ. ನದಿಯ ಇನ್ನೊಂದು ದಡದಲ್ಲಿದ್ದ ವ್ಯಕ್ತಿ ಈ ಘಟನೆಯ ವೀಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಹಿಳೆಯ ದೇಹವನ್ನು ಹೊರಗೆ ತೆಗೆದಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಆಘಾತಕ್ಕೆ ಒಳಗಾಗಿದ್ದಾರೆ. ನದಿಯಿಂದ ತಲೆ ಕಾಲಿಲ್ಲದ ದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊರಕ್ಕೆ ತೆಗೆದಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.